ಸುಕನ್ಯಾ ಸಮೃದ್ಧಿ ಯೋಜನೆಯಡಿ ಮಗಳ ಹೆಸರಿಗೆ ಪ್ರತಿವರ್ಷ 6 ಸಾವಿರ ರುಪಾಯಿ ಜಮೆ ಮಾಡಿದರೆ ಮಗಳ ಮದುವೆಗೆ ಅಥವಾ ಶಿಕ್ಷಣಕ್ಕೆ 2.63 ಲಕ್ಷ ರೂಪಾಯಿ ಪಡೆಯಬಹುದು. ಹೌದು ಇದಕ್ಕಾಗಿ ನೀವು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ ಜಮೆ ಮಾಡುವ 6 ಸಾವಿರ ರೂಪಾಯಿ ಹಣವನ್ನೇ ಮಗಳ ಹೆಸರಿಗೆ ಜಮೆ ಮಾಡಿದರೆ ಸಾಕು. ಸುಕನ್ಯಾ ಸಮೃದ್ಧಿ (Sukanya Samriddhi Yojana) ಯೋಜನೆಯಡಿಯಲ್ಲಿ 2,63,723 ರೂಪಾಯಿ ಪಡೆಯಬಹುದು.
ನೀಹೌದು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ಸಿಗುವ 6 ಸಾವಿರ ರೂಪಾಯಿ ಹಣವನ್ನು 15 ವರ್ಷ ಜಮೆ ಮಾಡಿದರೆ ಸಾಕು, 21ನೇ ವರ್ಷಕ್ಕೆ ಮಗುವಿನ ಶಿಕ್ಷಣಕ್ಕೆ ಅಥವಾ ಮದುವೆಯ ಸಂದರ್ಭದಲ್ಲಿ 2.63 ಲಕ್ಷ ರೂಪಾಯಿ ಹಣ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ.
ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಇಬ್ಬರು ಪುತ್ರಿಯರ ಹೆಸರಿನ ಮೇಲೆ ಖಾತೆಯನ್ನು ತೆರೆಯಬಹುದು. ಇದಕ್ಕೆ 10 ವರ್ಷದೊಳಗಿನ ಮಗಳ ಹೆಸರಿನ ಮೇಲೆ ಖಾತೆ ತೆರಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ಮುಂಚೆ ಇದ್ದ 1000 ರೂಪಾಯಿ ವಾರ್ಷಿಕ ಕನಿಷ್ಠ ಕಂತಿನ ಮೊತ್ತವನ್ನು ಇತ್ತೀಚೆಗೆ 250 ಕ್ಕೆ ಇಳಿಸಲಾಗಿದೆ. ಖಾತೆದಾರರು ವರ್ಷಕ್ಕೆ ಕೇವಲ 250 ರೂಪಾಯಿ ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಜಮೆ ಮಾಡುವ ಹಣದ ಲೆಕ್ಕ(Sukanya Samriddhi Yojana Calculator)
ಸುಕನ್ಯಾ ಸಮೃದ್ಧಿ ಯೋಜನೆಯಡಿ ಪ್ರತಿವರ್ಷ 6 ಸಾವಿರ ರೂಪಾಯಿ ಜಮೆ ಮಾಡಿದರೆ 15 ವರ್ಷಗಳವರೆಗೆ 90 ಸಾವಿರ ರೂಪಾಯಿ ಆಗುತ್ತದೆ. ನಂತರ ಐದು ಆರು ವರ್ಷಗಳ ಕಾಲ ಕಟ್ಟಬೇಕಾಗಿಲ್ಲ. ಈ ಹಣಕ್ಕೆ ಒಟ್ಟು 1,73,725 ರೂಪಾಯಿ ಬಡ್ಡಿಯಾಗುತ್ತದೆ. ಜಮೆಮಾಡಿದ 90000 ಮತ್ತು ಬಡ್ಡಿ 1,73,725 ರೂಪಾಯಿ ಸೇರಿ ಒಟ್ಟು 2,63,723 ರೂಪಾಯಿ ಸಿಗುತ್ತದೆ. ಈ ಹಣಕ್ಕೆ ಆದಾಯ ತೆರಿಗೆ ಕಾಯ್ದೆ 1961 ರ 80 ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ನೀಡಲಾಗಿದೆ.
https://scripbox.com/plan/sukanya-samriddhi-yojana-calculator ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರತಿವರ್ಷ ಎಷ್ಟು ಹಣ ಕಟ್ಟುತ್ತೀರೆಂಬುದನ್ನು ನಮೂದಿಸಿದರೆ ಸಾಕು 15 ವರ್ಷಕ್ಕೆ ಎಷ್ಟು ಹಣ ಕಟ್ಟಬೇಕು ಮತ್ತು ಬಡ್ಡಿ ಹಾಗೂ ನಿಮಗೆ ಸಿಗುವ ಹಣದ ಲೆಕ್ಕವೂ ಅಲ್ಲಿ ಸಿಗುತ್ತದೆ.
ಎಷ್ಚು ಖಾತೆ ತೆರೆಯಬಹುದು (How many account open)?
ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಲಕರು ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು. ಅಂದರೆ, ಪ್ರತಿ ಒಬ್ಬ ಮಗಳಿಗೆ ಒಂದು ಖಾತೆಯಂತೆ ಗರಿಷ್ಠ ಇಬ್ಬರು ಪುತ್ರಿಯರಿಗೆ ಖಾತೆ ತೆರೆಯಬಹುದು. ಒಂದು ವೇಳೆ ಮೊದಲ ಅಥವಾ ಎರಡನೆಯ ಹೆರಿಗೆಯಿಂದ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಈ ಯೋಜನೆಯು ಪೋಷಕರಿಗೆ ಮೂರನೇ ಖಾತೆ ತೆರೆಯಲು ಅನುವು ಮಾಡಿಕೊಡುಲಾಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಅರ್ಹತಾ ಮಾನದಂಡ (Eligibility) :
ಹೆಣ್ಣು ಮಕ್ಕಳು ಮಾತ್ರ ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಲು ಅರ್ಹರಾಗಿದ್ದಾರೆ ಖಾತೆ ತೆರೆಯುವ ಸಮಯದಲ್ಲಿ, ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ಇರಬೇಕು. ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ ಕಡ್ಡಾಯವಾಗಿದೆ.
ಹಣ ಪಾವತಿಯ ಗರಿಷ್ಠ ಕಾಲಾವಧಿ:
ಪಾಲಕರು ಮಗಳ ಹೆಸರಿನ ಮೇಲೆ ಖಾತೆ ತೆರೆದ 14 ವರ್ಷಗಳವರೆಗೆ ಖಾತೆಗೆ ಕಂತಿನ ಹಣ ಪಾವತಿಸಬಹುದು (ಒಟ್ಟು 15 ಕಂತುಗಳಾಗುತ್ತವೆ). ಈ ಅವಧಿಯ ನಂತರ ಸರ್ಕಾರವೇ ಖಾತೆಯಲ್ಲಿ ಹಣಕ್ಕೆ ಬಡ್ಡಿಯನ್ನು ಜಮೆ ಮಾಡುತ್ತ ಹೋಗಲಾಗುತ್ತದೆ.
ತೆರಿಗೆ ವಿನಾಯಿತಿ:
ಆದಾಯ ತೆರಿಗೆ ಕಾಯ್ದೆ 1961 ರ 80 ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ನೀಡಲಾಗಿದ್ದು ಸುಕನ್ಯಾ ಸಮೃದ್ಧಿ ಯೋಜನೆಯ ಬಹು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಸುಕನ್ಯಾ ಸಮೃದ್ಧಿ ಖಾತೆಯನ್ನು ಎಲ್ಲಿ ತೆರೆಯಬಹುದು (Where should open sukanya samrudhi yojana account?
ಅಂಚೆ ಕಚೇರಿ ಶಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. ಅಥವಾ ದೇಶದ ಪ್ರಮುಖ ಬ್ಯಾಂಕ್ ಬ್ಯಾಂಕುಗಳಲ್ಲಿಯೂ ತೆರೆಯಬಹುದು.
ಖಾತೆ ತೆರೆಯಲು ಬೇಕಾದ ದಾಖಲೆಗಳು (Documents):
ಖಾತೆ ಆರಂಭಿಸುವ ಅರ್ಜಿ ಫಾರಂ – ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ – ಗುರುತಿನ ದಾಖಲೆ, ವಿಳಾಸದ ಪುರಾವೆ, ಪಾಲಕರ ಆಧಾರ್ ಕಾರ್ಡ್
ಹೆಚ್ಚಿನ ಮಾಹಿತಿಗಾಗಿ ಅಥವಾ ಸುಕನ್ಯಾ ಸಮೃದ್ಧಿ ಯೋಜನೆಯಡಿ ಮಗಳ ಹೆಸರಿನ ಮೇಲೆ ಖಾತೆ ತೆರೆಯಲು ನಿಮ್ಮೂರಿಗೆ ಬರುವ ಪೋಸ್ಟ್ ಮ್ಯಾನ್ ಗೆ ಕರೆ ಮಾಡಿ ಖಾತೆ ತೆರೆಯಬಹುದು.