Pension ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

Written by Ramlinganna

Updated on:

Pinchani status  ವೃದ್ಧರು, ಅಂಗವಿಕಲರು, ವಿಧವೆಯರಿಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಬಡವರಿಗೆ  ಪ್ರತಿ ತಿಂಗಳು ಸರ್ಕಾರದ ವತಿಯಿಂದ ನೀಡಲಾಗುವ ಪಿಂಚಣಿಯ ಮಾಹಿತಿಯನ್ನು ಅಂದರೆ ಅವರು ನೋಂದಣಿ ಮಾಡಿಸಿದಾಗಿನಿಂದ ಇಲ್ಲಿಯವರೆಗೆ ಎಷ್ಟು ಕಂತುಗಳು ಯಾವ ಯಾವ ತಿಂಗಳಲ್ಲಿ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ವೀಕ್ಷಿಸಬಹುದು.

ಇಂದಿರಾಗಾಂಧಿ ನ್ಯಾಶನಲ್ ಓಲ್ಡ್ ಏಜ್ ಪೆನ್ಶನ್, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಯೋಜನೆ, ವಿಧವೆಯರ ಪೆನ್ಶನ್,  ಮನಸ್ವಿನಿ ಯೋಜನೆ ಸೇರಿದಂತೆ ಇತರ ಯೋಜನೆಗಳ ಮೂಲಕ ನೀಡಲಾಗುವ ಪಿಂಚಣಿಯ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಇಂಧಿರಾಗಾಂಧಿ ನ್ಯಾಶನಲ್ ಓಲ್ಡ್ ಏಜ್ ಪೆನ್ಶನ್, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ, ವಿಧವೆ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಎಷ್ಟು ಪಿಂಚಣಿ ನೀಡಲಾಗುತ್ತದೆ ಎಂಬುದನ್ನು ಸಹ ಚೆಕ್ ಮಾಡಬಹುದು.

ಮೊಬೈಲ್ ನಲ್ಲೇ Pinchani status ಚೆಕ್ ಮಾಡುವುದು ಹೇಗೆ?

ವೃದ್ಧರು, ಅಂಗವಿಕಲರು, ವಿಧವೆಯರು  ಮೊಬೈಲ್ ನಲ್ಲೇ ಪಿಂಚಣಿ ಸ್ಟೇಟಸ್ ಚೆಕ್ ಮಾಡಲು ಈ

https://mahitikanaja.karnataka.gov.in/Pension/PensionData?ServiceId=1045&Type=TABLE&DepartmentId=1011

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪ್ರದೇಶವಾರು ಪಿಂಚಣಿ ಮಾಹಿತಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಗ್ರಾಮೀಣ ಪ್ರದೇಶದವರಾಗಿದ್ದರೆ ಗ್ರಾಮೀಣ ಹಾಗೂ ನಗರ ಪ್ರದೇಶದವರಾಗಿದ್ದರೆ ನಗರ ಸೆಲೆಕ್ಟ್ ಮಾಡಿಕೊಳ್ಳಬೇಕು. ಇದಾದಮೇಲೆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕು. ಹೋಬಳಿ ಸೆಲೆಕ್ಟ್ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು  ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಗ್ರಾಮದಲ್ಲಿ ಪಿಂಚಣಿ ಪಡೆಯುವವ ಹೆಸರು ಕಾಣುತ್ತದೆ.

ಅಲ್ಲಿ ನಿಮ್ಮೂರಿನಲ್ಲಿ ನಿಮ್ಮ ಹೆಸರು ಚೆಕ್ ಮಾಡಬೇಕು. ನಿಮ್ಮ ಹೆಸರು ಮುಂದೆ ನಿಮ್ಮ ತಂದೆ, ಪತಿಯ ಹೆಸರು ಇರುತ್ತದೆ. ವಿಳಾಸ, ಹುಟ್ಟಿದ ದಿನಾಂಕ, ಯಾವ ಪಿಂಚಣಿ ಪಡೆಯುತ್ತಿದ್ದೀರಿ, ಪಿಂಚಣಿ ಅನುಮತಿ ಸಂಖ್ಯೆ, ಪಿಂಚಣಿ ಅನುಮತಿ ದಿನಾಂಕ, ಪಿಂಚಣಿ ಮೊತ್ತ, ವಿತರಣಾ ವಿಧಾನ ಪಿಂಚಣಿ ಖಾತಾ ಪುಸ್ತಕದ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ : ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ: ಮೊಬೈಲ್ ನಲ್ಲೇ ಚೆಕ್ ಮಾಡಿ

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಪಿಂಚಣಿ ಐಡಿ, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕೆಗಳು,  ಪಿಂಚಣಿ ಮೊತ್ತ ಹಾಗೂ ಪಾವತಿ ಮಾಡಿದ ದಿನಾಂಕಗಳ ಪಟ್ಟಿ ಕಾಣುತ್ತದೆ.  ಯಾವ ತಿಂಗಳಿಂದ ನಿಮಗೆ ಪಿಂಚಣಿ ಬರುತ್ತಿದೆ?  ಎಂಬ ಮಾಹಿತಿ ಸಿಗುತ್ತದೆ.

ಪಿಂಚಣಿ ಪಡೆಯಲು ಯಾವ ಯಾವ ದಾಖಲೆ ಸಲ್ಲಿಸಬೇಕು?

ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಚುನಾವಣಾ ಗುರುತಿನ ಚೀಟಿ, ಅಥವಾ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ನೀಡಬೇಕು.

ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ

ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಪಿಂಚಣಿ ಒದಗಿಸಲು ಕರ್ನಾಟಕ ಸರ್ಕಾರ ಹೊಸ ಯೇಜನೆಯೊಂದನ್ನು ರೂಪಿಸಿದೆ. ದೂರವಾಣಿ ಕರೆ ಮೂಲಕ ಪಿಂಚಣಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕುಟುಂಬದ ವಾರ್ಷಿಕ ಆದಾಯವು 32 ಸಾವಿರಕ್ಕಿಂತ ಕಡಿಮೆಯಿರುವ ವೃದ್ಧರು, ವಿಶೇಷ ಚೇತನರು, ವಿಧವೆಯರು, ವಿಚ್ಛೇದಿತ ಮಹಿಳೆಯರು 155245 ಸಂಖ್ಯೆಗೆ ಕರೆ ಮಾಡಿ ಆಧಾರ್ ಸಂಖ್ಯೆ ನೀಡುವ ಮೂಲಕ ಪಿಂಚಣಿ ಸೌಲಭ್ಯಕ್ಕೆ ಕೋರಿಕೆ ಸಲ್ಲಿಸಬಹುದು.

ಪಿಂಚಣಿಗಾಗಿ ಕೋರಿಕೆ ಸಲ್ಲಿಸಿದ ನಂತರ ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ನವೋದಯ ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಪಡೆಯುತ್ತಾರೆ. ಅರ್ಜಿದಾರರು ಎಲ್ಲಾ ದಾಖಲೆಗಳನ್ನು ಕೇಳಿದ ಸಲ್ಲಿಸಿದ ನಂತರ ಭಾವಚಿತ್ರವನ್ನು ಸೆರೆ ಹಿಡಿದು ಆ್ಯಪ್ ಮೂಲಕ ಅರ್ಜಿ ಸಲ್ಲಿಸುತ್ತಾರೆ.

Leave a Comment