ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ: ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

check crop survey information  ರೈತರು ತಾವು ಮಾಡಿದ ಬೆಳೆ ಸಮೀಕ್ಷೆ ಸರಿಯಾಗಿದೆಯೋ ತಪ್ಪಾಗಿದೆಯೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಬೆಳೆ ಸಮೀಕ್ಷೆ ವೀಕ್ಷಿಸಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ಬೆಳೆ ಸಮೀಕ್ಷೆಗೆ ಅಪ್ಲೋಡ್ ಆದ ಮಾಹಿತಿಯನ್ನು ವೀಕ್ಷಿಸಬಹುದು.

 check crop survey information  ಬೆಳೆ ದರ್ಶಕ್ ಆ್ಯಪ್ ಇನಸ್ಟಾಲ್ ಮಾಡಿ ಹೀಗೆ ಚೆಕ್ ಮಾಡಿ ಬೆಳೆ ಸಮೀಕ್ಷೆ

ಬೆಳೆ ಸಮೀಕ್ಷೆ ವಿವರವನ್ನು ಮೊಬೈಲ್ ನಲ್ಲೇ ವೀಕ್ಷಿಸಲು ರೈತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ bele darshak 2022-23 ಎಂದು ಟೈಪ್ ಮಾಡಬೇಕು.ಆಗ ಬೆಳೆ ದರ್ಶಕ್ 2022 ಆ್ಯಪ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಇನಸ್ಟಾಲ್ ಮಾಡಿಕೊಳ್ಳಬಹುದು. ಅಥವಾ  ಈ ಲಿಂಕ್

https://play.google.com/store/apps/details?id=com.crop.offcskharif_2021

ಮೇಲೆ ಕ್ಲಿಕ್ ಮಾಡಿ. ಆಗ ಬೆಳೆ ದರ್ಶಕ್ 2022-2023 ಆ್ಯಪ್ ಇನಸ್ಟಾಲ್ ಮಾಡಿಕೊಳ್ಳಬೇಕು. ಬೆಳೆ ದರ್ಶಕ್ ಆ್ಯಪ್ ಇನಸ್ಟಾಲ್ ಆದ ಮೇಲೆ ಕ್ಲಿಕ್ ಮಾಡಿದ ಮೇಲೆ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ದರ್ಶಕ್ 22-23 ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ.ನಂತರ ರೈತ ಮೇಲೆ ಕ್ಲಿಕ್ ಮಾಡಬೇಕು.ಅಲೋ ಬೆಳೆ ದರ್ಶಕ್ 22-23 ಟು ಟೇಕ ಪಿಕ್ಚರ್ ಆ್ಯಂಡ್ ರಿಕಾರ್ಡ್ ಗೆ ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಅಲೋ ಬೆಳೆ ದರ್ಶಕ್22-23 ಟು ಆ್ಯಕ್ಸೆಸ್ ಟು ಡಿವೈಸ್  ಲೋಕೇಶನ್ ಗೂ ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೆರಡು ಮೆಸೆಜ್ ಗೆ ಅಲೋ ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ವರ್ಶ,  2022-233 ಋುತುವಿನಲ್ಲಿ ಮುಂಗಾರು, ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ  ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಸರ್ವೆ ನಂಬರ್ ನಮೂದಿಸಬೇಕು. ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.ಮಾಲಿಕರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಒತ್ತಿದಾಗ ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿರುವ ಮಾಲಿಕರ ಹೆಸರು ಕಾಣುತ್ತದೆ.

ನಿಮ್ಮ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಮೀಕ್ಷೆಯ ವಿವರಗಳ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ದಯವಿಟ್ಟು ನಿರೀಕ್ಷಿಸಿ ಎಂಬ ಸಂದೇಶ ಕಾಣುತ್ತದೆ. ಸ್ವಲ್ಪಸಮಯದ ನಂತರ ನಿಮಗೆ  ಈ ಸರ್ವೆ ನಂಬರ್ ಬೆಳೆ ಸಮೀಕ್ಷೆಯಾಗಿದ್ದರೆ ನಿಮ್ಮ ಸರ್ವೆ ನಂಬರ್ ಬೆಳೆ ಸಮೀಕ್ಷೆಯನ್ನು ಬಳಕೆದಾರರು ಕೆಳಗೆ ನಮೂದಿಸಿದ್ದಾರೆ. ಬೆಳೆ ಮಾಹಿತಿಯನ್ನು ವೀಕ್ಷಿಸಲು ಬಳಕೆದಾರರನ್ನುಆಯ್ಕೆ ಮಾಡಿಕೊಳ್ಳಬೇಕು. ಮತ್ತು ಅಪ್ಲೋಡ್ ಮಾಡಿದ ಬೆಳೆ ಮಾಹಿತಿಯನ್ನುವೀಕ್ಷಿಸಬಹುದು ಎಂಬ ಮೆಸೇಜ್ ಕಾಣುತ್ತದೆ.

ಇದನ್ನೂ ಓದಿ : ಬೆಳೆ ಸಮೀಕ್ಷೆ ಮಾಡುವುದರಿಂದ ರೈತರಿಗೆ ಈ ಪ್ರಯೋಜನೆಗಳಿವೆ: ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅದರ ಕೆಳಕಡೆ ಸಮೀಕ್ಷೆದಾರರ ಹೆಸರು, ಮೊಬೈಲ್ ನಂಬರ್ ಹಾಗೂ ಸಮೀಕ್ಷೆಯ ದಿನಾಂಕ ಕಾಣುತ್ತದೆ. ಕೆಳಗಡೆಯಿರುವ ಬೆಳೆ ವಿವರ ವೀಕ್ಷಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿವರ ಡೌನ್ಲೋಡ್ ಆಗುತ್ತದೆ.

ನಿಮ್ಮಹೆಸರು, ಸರ್ವೆ ನಂಬರ್,  ಯಾವ ಬೆಳೆ ಸಮೀಕ್ಷೆಯಾಗಿದೆ. ಬೆಳೆ ವಿವರ ತಪ್ಪಾಗಿದ್ದರೆ ನೀವು ತಾಲೂಕು ಕಚೇರಿಯಲ್ಲಿ ಲಿಖಿತವಾಗಿ ದೂರು ನೀಡಬಹುದು. ಮೊಬೈಲ್ ನಲ್ಲಿಯೂ ಸಹ ರೈತರು ಬೆಳೆ ವಿವರ ಆಕ್ಷೇಪಣೆಗೆ ಸಲ್ಲಿಸಬಹುದು. ಕೆಳಕಡೆ ಕಾಣುವ ಆಕ್ಷೇಪಣೆ ಇದೆ ಬಾಕ್ಸ್ ಆಯ್ಕೆ ಮಾಡಿಕೊಂಡು ಆಕ್ಷೇಪಣೆ ಸಲ್ಲಿಸಬಹುದು.

ಸಮೀಕ್ಷೆ ಪೂರ್ಣಗೊಂಡಿದೆ ಎಂಬ ಮೆಸೆಜ್ ಬರುತ್ತದೆ. ಇಲ್ಲದಿದ್ದರೆ ಈ ಸರ್ವೆ ನಂಬರ್ ಬೆಳೆ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಸಂದೇಶ ಬರುತ್ತದೆ.

Leave a Comment