ಮಳೆ ಮುನ್ಸೂಚನೆ ನೀಡುತ್ತದೆ ಮೇಘದೂತ್ ಆ್ಯಪ್

Written by By: janajagran

Updated on:

Meghdoot gives rain alert ಸಾಮಾನ್ಯವಾಗಿ ರೈತರಿಗೆ ಮಳೆಯ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲದೆ ತಮ್ಮ ಬೆಳೆ ಹಾಳಾಗುತ್ತಿರುತ್ತದೆ. ಕೆಲವು ಸಲ ಅಕಾಲಿಕ ಮಳೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ದಿನಪತ್ರಿಕೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗುತ್ತದೆ. ಆದರೆ ಹಳ್ಳಿಗಳಲ್ಲಿ ಪತ್ರಿಕೆಗಳು ತಲುಪದೆ ಇರುವುದರಿಂದ ಸರಿಯಾಗಿ ಮಾಹಿತಿ ಗೊತ್ತಿರುವುದಿಲ್ಲ. ಈಗ ರೈತರು ಮಳೆಯ ಮಾಹಿತಿಗಾಗಿ ಯಾರಿಗೂ ಕೇಳಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮಳೆಯ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.

ಹೌದು,  ರೈತರಿಗೆ ಐದು ದಿನಗಳ ಮುಂಚಿತವಾಗಿ ಮೇಘದೂತ್ ಆ್ಯಪ್ ಮಳೆಯ ಮಾಹಿತಿ ನೀಡುತ್ತದೆ. ರೈತರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು, ಐದು ದಿನಗಳ ಮುಂಚಿತವಾಗಿ ಮಳೆಯ ಮಾಹಿತಿ ಪಡೆಯಬಹುದು.

ರೈತರು ಇನ್ನೂ ಮುಂದೆ ಆಕಾಶ ನೋಡಿ, ಮೋಡ, ಮಳೆ ನೋಡಿ ಕೆಲಸ ಮಾಡಬೇಕಿಲ್ಲ. ತಮ್ಮ ಮೊಬೈಲ್ ನಲ್ಲಿ ಮೇಘದೂತ್ ಆ್ಯಪ್ ಇದ್ದರೆ ಸಾಕು, ಕುಳಿತಲ್ಲಿಯೇ ಮುಂದಿನ ಐದು ದಿನಗಳ ಹವಾಮಾನದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಬಹುದು. ರೈತರಿಗೆ ಸ್ಥಳೀಯ ಹವಾಮಾನ ಮುನ್ಸೂಚನೆಯನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ತಲುಪಿಸುವ ಉದ್ದೇಶದಿಂದ ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಸಂಶೋಧನಾ ಮಂಡಳಿ ಜಂಟಿಯಾಗಿ ಮೇಘದೂತ್ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ.

ಮೇಘದೂತ್ ಆ್ಯಪ್ ಗರಿಷ್ಠ ಹಾಗೂ ಕನಿಷ್ಠ ತಾಪಮಾನ, ತೇವಾಂಶ, ಗಾಳಿಯ ವೇಗ ಮತ್ತು ದಿಕ್ಕು,ಮಳೆ ಪ್ರಮಾಣದ ಕುರಿತು ಪ್ರತಿನಿತ್ಯ ಮಾಹಿತಿ ನೀಡುತ್ತದೆ. ಮೇಘದೂತ್ ಆ್ಯಪ್ ಕನ್ನಡ. ತೆಲುಗು, ಹಿಂದಿ, ತಮಿಳು, ಮರಾಠಿ, ಮಲಯಾಳಂ, ಓಡಿಯಾ, ಬೆಂಗಾಲಿ, ಪಂಜಾಬಿ ಸೇರಿದಂತೆ ದೇಶದ 12 ಭಾಷೆಗಳಲ್ಲಿ ಲಭ್ಯವಿದೆ.

Meghdoot gives rain alert ಮೇಘದೂತ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ರೈತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ Meghdoot ಎಂದು ಟೈಪ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಅಧವಾ ಈ

https://play.google.com/store/apps/details?id=com.aas.meghdoot&hl=en_IN&gl=US

ಲಿಂಕ್ ಮೇಲೆ ಕ್ಲಿಕ್ ಮಾಡಿ install ಮಾಡಿಕೊಳ್ಳಬೇಕು.  ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನೀವು ಕನ್ನಡದಲ್ಲಿ ಮಾಹಿತಿ ನೋಡಬೇಕಾದರೆ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿನೀವು ಮೇಘದೂತ್ ಆ್ಯಪ್ ದಿಂದಾಗಿ ಯಾವ ಯಾವ ಮಾಹಿತಿಗಳನ್ನು ಪಡೆಯಬಲ್ಲಿರಿ ಎಂಬ ಸಂದೇಶ ಕಾಣುತ್ತದೆ.  ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಲಾಗಿನ್ಆಗಬೇಕು.

ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲೋ ಮೇಘದೂತ್ ದೂ ಆ್ಯಕ್ಸೆಸ್್ ಮೆಸೇಜ್ ಕಂಡಾಗ ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆ, ಕನಿಷ್ಠ ತಾಪಮಾನ, ಗರಿಷ್ಠ ತಾಪಮಾನ, ಕಾಣುತ್ತದೆ. ಮಳೆ, ಗಾಳಿಯ ವೇಗ, ತೇವಾಂಶ, ಗಾಳಿಯ ದಿಕ್ಕು ಕಾಣುತ್ತದೆ.

ಮುನ್ಸುಚನೆ ಮೇಲೆ ಕ್ಲಿಕ್ ಮಾಡಿದಾಗ ಮುಂದಿನ ಐದು ದಿನಗಳ ಕಾಲ ಹವಾಮಾನದ ವರದಿ ಕಾಣುತ್ತದೆ. ಎಲ್ಲಾ ಮಾಹಿತಿ ಕನ್ನಡದಲ್ಲಿರುವುದರಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.  ಭೂತಕಾಲದ ಅಂದರೆ ಹಿಂದಿನ ಐದು ದಿನಗಳ ಮಾಹಿತಿಯನ್ನು ಸಹ ರೈತರು ಮೇಘದೂತ್ ಆ್ಯಪ್ ಸಹಾಯದಿಂದ ಪಡೆಯಬಹುದು.  ಭೂತಕಾಲದ ಮೇಲೆ ಕ್ಲಿಕ್ ಮಾಡಿದರೆ ಸಾಕು ಹಿಂದಿನ ಐದು ದಿನಗಳ ಮಳೆಯ ಮಾಹಿತಿ ಪಡೆಯಬಹುದು.

ಇದನ್ನೂ ಓದಿ : ಜಮೀನಿನ ಪೋಡಿ, ಹದ್ದುಬಸ್ತು, 11 ಇ ನಕ್ಷೆ Mobileನಲ್ಲೇ ಪಡೆಯಬೇಕೇ? ಇಲ್ಲಿದೆ ಮಾಹಿತಿ

ಮಳೆಯ ಮುನ್ಸೂಚನೆಯಿದ್ದರೆ ಎಷ್ಟು ಮಿ.ಮೀ ಮಳೆಯಾಗುತ್ತದೆ ಗಾಳಿಯ ವೇಗ, ತೇವಾಂಶ, ಗಾಳಿಯ ದಿಕ್ಕನ್ನು ಸಹ ಮೊಬೈಲ್ ನಲ್ಲಿಯೇ ಪಡೆಯಬಹುದು. ಇದಕ್ಕಾಗಿ ರೈತರಿಗೆ ಯಾರ ಸಹಾಯವೂ ಬೇಕಾಗಿಲ್ಲ. ಕನ್ನಡದಲ್ಲಿ ಓದಲು ಬಂದರೆ ಸಾಕು. ಎಲ್ಲಾ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಮೊಬೈಲ್ ನಲ್ಲೇಯ ಮನೆಯಲ್ಲಿ ಕುಳಿತು ನೋಡಬಹುದು.

Leave a Comment