15 ದಿನಗಳಲ್ಲಿ ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ

Written by Ramlinganna

Updated on:

Gruhalakshmi money credited soon : ಗೃಹಲಕ್ಷ್ಮೀ  ಯೋಜನೆಗೆ ನೋಂದಣಿ ಮಾಡಿಕೊಂಡ 7.9 ಲಕ್ಷ ಮಹಿಳೆಯರ ಖಾತೆಗೆ 15 ದಿನಗಳೊಳಗೆ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಹೌದು, ಈ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರಿನ ಮಲ್ಲೇಶ್ವರ ಜಲಮಂಡಳಿ ಕಚೇರಿಯಲ್ಲಿ ಬೆಂಗಳೂರು ಒನ್ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ 7.9 ಲಕ್ಷ ಮಹಿಳೆಯರಿಗೆ ಹಣ ಪಾವತಿ ಬಾಕಿ ಇದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಆಯಾ ಫಲಾನುಭವಿಗಳ ಖಾತೆಗೆ ಹಿಂದ ತಿಂಗಳ ಮೊತ್ತವನ್ನು ಸೇರಿಸಿ 15 ದಿನಗಳೊಳಲಗೆ ನೇರನಗದು ಮೂಲಕ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳಲ್ಲಿ ಆಗಿರುವ ತಾಂತ್ರಿಕ ದೋಷಗಳನ್ನು ಅತೀ ಶೀಘ್ರವೇ ಸರಿಪಿಡಿಸ ಬಗೆಹರಿಸಬೇಕೆಂದು ಸಿಡಿಪಿಓಗಳಿಗೆ ಸೂಚನೆ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಇದುವರೆಗೂ ಶೇ. 95 ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ದಿನ ಮೂರು ಜಿಲ್ಲೆಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1,16,65,000 ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಆಗಸ್ಟ್ ತಿಂಗಳಲ್ಲಿ 2119ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ನೇರ ನಗದು ಮೂಲಕ ಜಮೆ ಮಾಡಲಾಗಿದೆ. ಆಗಸ್ಟ್ ತಿಂಗಳಲ್ಲಿ5 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದಾಗಿ ಅವರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ.

ಇದನ್ನೂ ಓದಿ ನಿಮ್ಮ ಜಮೀನು ಯಾರ ಹೆಸರಿನೊಂದಿಗೆ ಎಷ್ಟು ಎಕರೆ ಜಂಟಿಯಾಗಿದೆ? ಇಲ್ಲೇ ಚೆಕ್ ಮಾಡಿ

ಸೆಪ್ಟೆಂಬರ್ ತಿಂಗಳಲ್ಲಿ ಶೇ. 82 ರಷ್ಟು ಕುಡುಂಬಗಳಿಗೆ ಹಣ ಹಾಕಲಾಗಿದ್ದು, 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಇಲ್ಲವೋ ಇಕೆವೈಸಿ ಸಮಸ್ಯೆಯಿಂದ ಹಣ ಬ್ಯಾಕ್ ಖಾತೆಯಲ್ಲೇ ಉಳಿದಿದೆ. ಅಕ್ಟೋಬರ್ ತಿಂಗಳಲ್ಲಿ2400 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎಂದು ವಿವರಿಸಿದರು.

Gruhalakshmi money credited soon ಕೆಲವು ಮಹಿಳೆಯರ ಖಾತೆಗೇಕೆ ಹಣ ಜಮೆಯಾಗಿಲ್ಲ

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದವರಲ್ಲಿ ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಹಣ ವರ್ಗಾವಣೆಯಾಗಿಲ್ಲ. ಜೊತೆಗೆ ಆಧಾರ್ ಕಾರ್ಡ್ ಜೋಡಣೆ ಆಗದರೆ ಇರುವುದರಿಂದ ಹಣ ಜಮಯಾಗಿಲ್ಲ. ಆಗಿರುವ ತಾಂತ್ರಿಕ ದೋಷಗಳನ್ನು ಸರಪಿಡಿಸಿ ಕೂಡಲೇ ಅಂದರೆ ಇನ್ನೂ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಸಹಾಯವಾಣಿ ನಂಬರ್

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡು ಹಣ ವರ್ಗಾವಣೆ ಆಗದೆ ಇರುವ ಫಲಾನುಭವಿಗಳು 1902 ಸಹಾಯವಾಣಿ ನಂಬರ್ ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮೀ ಯೋಜನೆಯ ಹಣ ಜಾರಿಗೆ ಜಮಯಾಗಲಿದೆ

ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಸಿಕೊಂಡವರೆಲ್ಲರಿಗೂ ಹಣ ಜಮೆಯಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಏಕೆಂದರೆ ಗೃಹಲಕ್ಷ್ಮೀ ಯೋಜನೆಗೆ ಕೆಲವು ಷರತ್ತುಗಳನ್ನು ನೀಡಲಾಗಿದೆ. ಆ ಷರತ್ತುಗಳನ್ವಯ ಅರ್ಹತೆ ಹೊಂದಿದ್ದರೆ ಮಾತ್ರ ಹಣ ಜಮೆಯಾಗಲಿದೆ.

ರೇಶನ್ ಕಾರ್ಡ್ ನಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥರಿದ್ದಾರೆಯೇ

ರೇಶನ್ ಕಾರ್ಡ್ ನಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥರೆಂದು ನಮೂದಿಸಿರಬೇಕು.ಏಕೆಂದರೆ ಗೃಹಲಕ್ಷ್ಮೀ ಯೋಜನೆಯ ಹಣ ಕುಟುಂಬದ ಮಹಿಳಾ ಮುಖ್ಯಸ್ಥರ ಖಾತೆಗೆ ಜಮೆ ಮಾಡಲಾಗುವುದು. ಹಾಗಾಗಿ ನಿಮ್ಮ ರೇಶನ್ ಕಾರ್ಡ್ ನಲ್ಲಿ ಯಾರ ಹೆಸರು ಕುಟುಂಬದ ಮುಖ್ಯಸ್ಥರೆಂದು ನಮೂದಿಸಲಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ ರೈತರು ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಅಲ್ಲಿ ಕುಟುಂಬದ ಮುಖ್ಯ,ಸ್ಥರೆಂದು ನಿಮ್ಮ ಕುಟುಂಬದ ಯಜಮಾನಿಯ ಹೆಸರಿದ್ದರೆ ಅವರ ಖಾತೆಗೆ ಹಣ ಜಮೆಯಾಗಲಿದೆ.

Leave a Comment