ನಿಮ್ಮ ಎಷ್ಟು ಜಮೀನು ಜಂಟಿ ಇದೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Check land joint details : ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನೊಂದಿಗೆ ಎಷ್ಟುಎಕರೆ ಜಂಟಿಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಜಮೀನು ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಎಂಬುದನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Check land joint details ರೈತರು ತಮ್ಮ ಜಮೀನು ಯಾರ  ಹೆಸರಿನಿಂದ ಜಂಟಿಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ತಮ್ಮ ಜಮೀನು ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಎಂಬುದನ್ನು  ಚೆಕ್ ಮಾಡಲು ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಭೂಮಿ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ನಮೂದಿಸಬೇಕು. ನಂತರ  Get Report ಮೇಲೆ ಕ್ಲಿಕ್ ಮಾಡಬೇಕು.

ಆಗ ರೈತರಿಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಮುಟೇಶನ್ ಸಮ್ಮರಿಯಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಿಸ್ಸಾ ನಂಬರ್ ಗಳ ಮಾಹಿತಿ ಕಾಣುತ್ತದೆ. ಅಂದರೆ ಯಾವ ವರ್ಷದಲ್ಲಿ ಜಮೀನು ವರ್ಗಾವಣೆ ಹೇಗೆ ಆಗಿದೆ ಎಂಬ ಮಾಹಿತಿ ಕಾಣುತ್ತದೆ.

ಯಾರ ಯಾರ ಹೆಸರಿನಿಂದ ಜಮೀನು ಜಂಟಿಯಾಗಿದೆ?

ಅದರ ಕೆಳಗಡೆ ನಿಮ್ಮ ಸರ್ವೆ ನಂಬರ್ ಹಾಗೂ ಹಿಸ್ಸಾನಂಬರ್ ಸಹಿತ ಜಮೀನು ಜಂಟಿಯಾಗಿದ್ದರೆ ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಹಾಗೂ ಎಷ್ಟು ಎಕರೆ ಜಂಟಿಯಾಗಿದೆ ಎಂಬ  ಮಾಹಿತಿ ಇರುತ್ತದೆ. ಜಮೀನು ವರ್ಗಾವಣೆಯು ಯಾರ ಹೆಸರಿನಂದ ವರ್ಗಾವಣೆಯಾಗಿದೆ ಅಂದರೆ ಹಕ್ಕು ಬದಲಾವಣೆ ಮಾಡಿದವರು ಯಾರು? ಹಕ್ಕು ಬದಲಾವಣೆ ಪಡೆದವರಾರು? ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮ ಸರ್ವೆ ನಂಬರ್ ನೊಂದಿಗೆ ನಿಮ್ಮ ಅಕ್ಕಪಕ್ಕದಲ್ಲಿರುವ ಜಮೀನು ಹಕ್ಕು ಬದಲಾವಣೆ ಹೇಗಾಗಿದೆ? ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಚೆಕ್ ಮಾಡಬಹುದು.

ಇದನ್ನು ಓದಿ ರೈತರು ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಸರ್ವೆ ಹಾಗೂ ಹಿಸ್ಸಾ ನಂಬರ್ ಗಳು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಜಂಟಿಯಾಗಿದ್ದರೆ ಯಾರ ಯಾರ ಹೆಸರಿಗೆ ಜಂಟಿಯಾಗಿದೆ ಎಷ್ಟು ಎಕರೆ ಜಂಟಿಯಾಗಿದೆ ಎಂಬ ಮಾಹಿತಿಯೂ ಇಲ್ಲಿ ಸಿಗುತ್ತದೆ.  ಜಮೀನಿನ ಖಾತೆ ಹೇಗೆ ಬದಲಾವಣೆಯಾಗಿದೆ ಪೌತಿ ಖಾತೆಯಿಂದಲೋ ಅಥವಾ ಪೋಡಿಯಿಂದಲೋ ಇದರೊಂದಿಗೆ ಯಾವ ವರ್ಷದಲ್ಲಿ ವರ್ಗಾವಣೆಯಾಗಿದೆ?

ಜಮೀನಿನ ಮುಟೇಶನ್ ಸ್ಥಿತಿ ಅಂದರೆ ಈಗ ಯಾರ ಜಮೀನು ಯಾರ ಹೆಸರಿಗಿದೆ ಹಾಗೂ ಎಷ್ಟು ಎಕರೆ ಜಮೀನು ಯಾರ ಹೆಸರಿಗಿದೆ ಎಂಬುದನ್ನು ರೈತರು ಮನೆಯಲ್ಲೇ ಕುಳಿತು ಚೆಕ್ ಮಾಡಬಹುದು. ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನೊಂದಿಗೆ ಅಕ್ಕಪಕ್ಕದ ಸರ್ವೆ ನಂಬರ್ ಜಮೀನಿನ ಇತಿಹಾಸವನ್ನು ಮೊಬೈಲ್ ನಲ್ಲೇ ತಿಳಿಯಬಹುದು.  ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆಸಾಕು,ಜಮೀನಿನ ಎಲ್ಲಾ ದಾಖಲೆಗಳು ರೈತರು ಬಯಸಿದಾಗ ದಾಖಲೆಗಳನ್ನು ಚೆಕ್ ಮಾಡಲು ಕಂದಾಯ ಇಲಾಖೆಯು ಈ ವ್ಯವಸ್ಥೆ ಮಾಡಿದೆ. ರೈತರು ಇದಕ್ಕಾಗಿ ಯಾವ ಶುಲ್ಕ ಪಾವತಿಸುವ ಅಗತ್ಯವಿಲ್ಲ. ತಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹದು.

Leave a Comment