ನಿಮ್ಮ ಜಮೀನಿನ ಅಳತೆ Mobile ನಲ್ಲೇ ಹೀಗೆ ಮಾಡಿ

Written by Ramlinganna

Published on:

Land Measurement ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಜಮೀನಿನ ಅಳತೆಯನ್ನು ಅತೀ ಸುಲಭವಾಗಿ ಮಾಡಬಹುದು.

ಹೌದು, ಈ ಹಿಂದೆ ಜಮೀನಿನ ಅಳತೆ ಮಾಡಲು ಹಗ್ಗ, ಕೋಲುಗಳನ್ನು ಬಳಸುತ್ತಿದ್ದರು. ಇದಕ್ಕಾಗಿ ನಾಲ್ಕೈದು ಜನ ಬೇಕಾಗುತ್ತಿದ್ದರು ಅಷ್ಟೇ, ಅಲ್ಲ, ಎಷ್ಟು ಫೀಟ್, ಮೀಟರ್ ಇದೆ ಎಂಬ ಅಳತೆ ಗೊತ್ತಾಗುತ್ತಿರಲಿಲ್ಲ. ಕೇವಲ ಅಂದಾಜಿನ ಪ್ರಕಾರ ಜಮೀನಿನ ಅಳತೆ ಮಾಡುತ್ತಿದ್ದರು. ಆದರೆ ಈಗ ತಂತ್ರಜ್ಞಾನ ತುಂಬಾ ಬದಲಾಗಿದೆ.

ಕಂದಾಯ ಇಲಾಖೆಗೆ ಜಮೀನಿನ ಅಳತೆ ಮಾಡಲು ಅರ್ಜಿ ಸಲ್ಲಿಸಿದಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಮೀನಿಗೆ ಬರಲು ವಿಳಂಬ ಮಾಡುತ್ತಾರೆ ಎಂಬ ರೈತರ ಆರೋಪವಾಗಿದೆ. ಇದರಿಂದಾಗಿ ರೈತರ ಜಮೀನಿನ ಅಳತೆ ಮಾಡಲು ಆಗುತ್ತಿರಲಿಲ್ಲ. ಆದರೆ ಈಗ ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ದಿಶಾಂಕ್ ಆ್ಯಪ್ ಸಹಾಯದಿಂದ ಅತೀ ಸುಲಭವಾಗಿ ಜಮೀನಿನ ಅಳತೆಯನ್ನು ಮಾಡಬಹುದು.

ಕಂದಾಯ ಇಲಾಖೆಯು ಅಭಿವೃದ್ಧಿ ಪಡಿಸಿದ ದಿಶಾಂಕ್ ಆ್ಯಪ್ ಸಹಾಯದಿಂದ ಅಳತೆ ಮಾಡಬಹುದು. ಈ ಆ್ಯಪ್ ನ್ನು 1960 ರಲ್ಲಿ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಸಹಾಯದಿಂದ ರೈತರು ಯಾವುದೇ ಜಮೀನಿನ ಅಳತೆಯನ್ನು ಮಾಡಬಹುದು.

Land Measurement ಜಮೀನಿನ ಅಳತೆ ಏನೇನು ಮಾಹಿತಿ ಸಿಗಲಿದೆ?

ರೈತರು ತಮ್ಮ ಜಮೀನಿನ ಅಳತೆ ಮಾಡುವುದರಿಂದ ಅಳತೆಯೊಂದಿಗೆ ತಮ್ಮ ನೆರೆ ಹೊರೆಯ ಜಮೀನು ಅಳತೆ ಹಾಗೂ ಜಮೀನು ಒತ್ತುವರಿಯಾಗಿದ್ದರೆ ಎಷ್ಟು ಜಮೀನು ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಪಡೆಯಬಹುದು.

ರೈತರು ಜಮೀನು ಖರೀದಿ ಮಾಡುವಾಗ ದಿಶಾಂಕ್ ಆ್ಯಪ್ ಸಹಾಯ ಪಡೆಯಬಹುದು. ಏಕೆಂದರೆ ಪಹಣಿ, ನಕಾಶೆಯಲ್ಲಿ ಜಮೀನು ಎಷ್ಟು ತೋರಿಸಲಾಗಿದೆ ಎಂಬ ಮಾಹಿತಿ ಚೆಕ್ ಮಾಡಬಹುದು.

Land Measurement ಜಮೀನು ಅಳತೆ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲಿ ಜಮೀನು ಅಳತೆ ಮಾಡಲು ಈ

https://play.google.com/store/apps/details?id=com.ksrsac.sslr&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರ ಮೊಬೈಲ್ ನಲ್ಲಿ  Dishaank ಆ್ಯಪ್ ಓಪನ್ ಆಗುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲೋ ದಿಶಾಂಕ್ ಟು ಅಕ್ಸೆಸ್ ದಿಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಪಿಎಸ್ ಆನ್ ಮಾಡಿಕೊಳ್ಳಬೇಕು. ಆಗ ನೀವು ನಿಂತಿರುವ ಸ್ಥಳದ ಮಾಹಿತಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಸರ್ವೆ ನಂಬರ್ ಕಾಣಿಸುತ್ತದೆ. ನಂತರ ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜೆ ಓಪನ್ ಆಗುತ್ತದೆ. ಅಲ್ಲಿ  ಮಾಲಿಕರ ವಿವರಗಳು ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಆ ಜಮೀನಿನ ಮಾಲಿಕರು ಯಾರ್ಯಾರು ಇದ್ದಾರೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ.

ನಿಮಗೆ ಒಂದು ವೇಳೆ ನೀವು ನಿಂತಿರುವ ಸ್ಥಳದ ಪಾಯಿಂಟ್ ಕಾಣಿಸಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿದ ನೀವು ನಿಂತಿರುವ ಸ್ಥಳದ ಪಾಯಿಂಟ್ ಕಾಣಿಸುತ್ತದೆ.

ಇದನ್ನೂ ಓದಿ : ಬೆಳೆ ಹಾನಿ ಪರಿಹಾರ ಜಮೆಗೆ ಫ್ರೂಟ್ಸ್ ಐಡಿ ಕಡ್ಡಾಯ- ನಿಮ್ಮ ಫ್ರೂಟ್ಸ್ ಐಡಿ ಇಲ್ಲೇ ಚೆಕ್ ಮಾಡಿ

ಅಲ್ಲಿ ಕಾಣಿಸುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡೇ ಲೈನ್ ಆಯ್ಕೆ ಮಾಡಿಕೊಂಡು ಸರ್ವೆ ನಂಬರಿನ ಯಾವ ದಿಕ್ಕಿನಿಂದ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ಜಮೀನು ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜಮೀನಿನ ಅಳತೆ ಪ್ರಕಾರಗಳು, ಮೀಟರ್, ಫೀಟ್, ಹೀಗೆ ಆಯ್ಕೆಗಳಿರುತ್ತವೆ. ಅದರಲ್ಲಿ ಯಾವುದರ ಮೂಲಕ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಂಡು  ಅಳತೆ ಮಾಡಬಹುದು.

Leave a Comment