ಐಪಿಎಲ್, ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಕೇಳಿದ್ದೇವೆ. ಆದರೆ  ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದೇ ಮೊದಲ ಬಾರಿಗೆ ಕೇಳುತ್ತಿದ್ದೇವೆ.  ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಪಂದ್ಯಾಟಗಳಲ್ಲಿ  8 ರಿಂದ 10 ತಂಡಗಳಿರುತ್ತವೆ. ರ್ಯಾಂಕಿಂಗ್ ನಲ್ಲಿ ಹೆಚ್ಚು ಅಂಕಗಳಿರುವ ಟಾಪ್ ತಂಡಗಳು ವರ್ಲ್ಡ್ ಕಪ್ ನಲ್ಲಿ ಭಾಗವಹಿಸುತ್ತವೆ. ಅಲ್ಲಿ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿರುತ್ತವೆ. ಆದರೆ ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಮಾತ್ರ ಇರುತ್ತದೆ. ಈ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.ಇಂದಿನಿಂದ ನ್ಯೂಜಿಲೆಂಡಿನ ಸೌಥಾಂಪ್ಟನ್ ನಲ್ಲಿ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ

ಹೌದು,  ಈ ಟೆಸ್ಟ್ ಚಾಂಪಿಯನ್ ಶಿಪ್  ಪಂದ್ಯ ವೀಕ್ಷಿಸಲು ಜಗತ್ತಿನಾದ್ಯಂತ ಕ್ರಿಕೇಟ್ ಪ್ರೇಮಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ತಂಡಗಳು ಹೇಗೆ ಆಯ್ಕೆಯಾಗುತ್ತವೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ….

How to select test world championship team? (ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ತಂಡಗಳ ಆಯ್ಕೆ ಹೇಗೆ)

ಪ್ರತಿ ಸರಣಿಗೆ 120 ಅಂಕಗಳಿರುತ್ತವೆ. ಸರಣಿಯಲ್ಲಿ 2 ರಿಂದ 5ರವರೆಗೆ ಪಂದ್ಯಗಳಿದ್ದಾಗ ಪ್ರತಿ ಗೆಲವಿಗೆ ಸಿಗುವ ಅಂಕವೂ ಬದಲಾಗುತ್ತದೆ. ಆದರೆ ಇನ್ನೂ ಮುಂದೆ ಪ್ರತಿಯೊಂದು ಗೆಲವಿಗೆ ಒಂದು ಅಂಕ ಸಿಗಲಿದೆ. ಇದನ್ನು ಆಗಸ್ಟ್ ತಿಂಗಳಿಂದ ಆರಂಭವಾಗುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯೊಂದಿಗೆ 2021-23ರ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಶಿಪ್ಗೆ ಚಾಲನೆ ಸಿಗಲಿದೆ.

2019-21 ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಪ್ರತಿ ತಂಡಕ್ಕೂ 6 ಸರಣಿಗಳಿದ್ದು. ಪ್ರತಿ ಸರಣಿಗೂ ಗರಿಷ್ಟ 120 ಅಂಕದಂತೆ ಒಟ್ಟು 720 ಅಂಕಗಳಿಸುವ ಅವಕಾಶವಿತ್ತು. ಆದರೆ ಕೊರೋನಾದಿಂದಾಗಿ ಕೆಲವು ಸರಣಿ ರದ್ದುಗೊಂಡ ಬಳಿಕ ಶೇಕಡವಾರು ಅಂಕ ಗಳಿಕೆಯ ಆಧಾರದಲ್ಲಿ ಸ್ಥಾನ ನಿರ್ಣಯ ಮಾಡಲಾಗಿತ್ತು.

ಪಂದ್ಯ ಆರಂಭ: ಮಧ್ಯಾಹ್ನ 3.30 ಗಂಟೆಗೆ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್

ಭಾರತ ಅಗ್ರಸ್ಥಾನಕ್ಕೇರಿದ್ದರಿಂದ ಫೈನಲ್ ಪ್ರವೇಶ (Final entry as India tops the list)

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಋತುವಿನಲ್ಲಿ  ಇಂಡಿ ಒಟ್ಟು ಆರು ಸರಣಿಗಳನ್ನು ಆಡಿತ್ತು. ಅದರಲ್ಲಿ ಐದರಲ್ಲಿ ಗೆದ್ದು, ನ್ಯೂಜಿಲೆಂಡ್ ವಿರುದ್ಧ ಒಂದು ಸರಣಿಯಲ್ಲಿ ಸೋಲುಂಡಿತ್ತು. ಐದು ಸರಣಿಯ ಗೆಲವಿನಿಂದಾಗಿ ಭಾರತ 520 ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಫೈನಲ್ ಗೆ ಅರ್ಹತೆ ಪಡೆದಿತ್ತು.

ನ್ಯೂಜಿಲೆಂಡ್ ಹೇಗೆ ವಿಶ್ವ ಟೆಸ್ಟ್ ಚಾಂಪಿಯನ್ಗೆ ಆಯ್ಕೆಯಾಯಿತು. (lucky new Zealand team for test world cup team)

ಕೊರೋನಾದಿಂದಾಗಿ ಕೆಲವು ಸರಣಿ ರದ್ದುಗೊಂಡ ಬಳಿಕ ಶೇಕಡವಾರು ಅಂಕ ಗಳಿಕೆಯ ಆಧಾರದಲ್ಲಿ ಸ್ಥಾನ ನಿರ್ಣಯ ಮಾಡಲಾಗಿತ್ತು. ಇದು ನ್ಯೂಜಿಲೆಂಡಿಗೆ ಲಾಭವಾಯಿತು. ಅದು ಒಂದು ಸರಣಿಯಲ್ಲಿ ಆಡದಿದ್ದರೂ, ಒಟ್ಟು ಅಂಕ ಗಳಿಕೆಯಲ್ಲಿ ಹಿಂದಿದ್ದರೂ ಶೇಕಡವಾರು ಅಂಕ ಗಳಿಕೆಯಲ್ಲಿ ಮೇಲುಗೈ ಸಾಧಿಸಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಇತ್ತೀಚೆಗೆ ಕಿವಿಸ್ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಜಯ ಸಾಧಿಸಿತ್ತು.

ಪಿಚ್ ವರದಿ ಹಾಗೂ ವಾತಾವರಣ (Pitch report)

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯುವ ಸೌತಮ್ಟ್ ನಲ್ಲಿ ಮೋಡ ಕವಿದ ವಾತಾವರಣ ಇರುವ ಹಿನ್ನೆಲೆಯಲ್ಲಿ ಮೊದಲನೇ ದಿನಕ್ಕೆ ಮಳೆಯ ಭೀತಿ ಎದುರಾಗಿದೆ. ಪಿಚ್ ಹಸಿರಿನಿಂದ ಕೂಡಿದ್ದರೂ ಚೆಂಡು ಹೆಚ್ಚು ಬೌನ್ಸ್ ಆಗಲಿದ್ದು, ಬ್ಯಾಟಿಂಗ್ ಕಷ್ಟವಾಗಲಿದೆ.

ಉಭಯ ತಂಡಗಳು

ಭಾರತ (India team): ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ ಹಾಗೂ ಜಸ್‌ಪ್ರಿತ್‌ ಬುಮ್ರಾ

ನ್ಯೂಜಿಲೆಂಡ್‌ (New Zealand team): ಟಾಮ್‌ ಲಥಾಮ್‌, ಡೆವೋನ್‌ ಕಾನ್ವೇ, ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌, ಬಿಜೆ ವ್ಯಾಟ್ಲಿಂಗ್‌(ವಿ.ಕೀ), ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಕೈಲ್‌ ಜೇಮಿಸನ್‌, ಟ್ರೆಂಟ್‌ ಬೌಲ್ಟ್‌ ಹಾಗೂ ಟಿಮ್‌ ಸೌಥಿ.

ಗರಿಷ್ಟ ಅಂಕ ಪಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ತಂಡಗಳು

One Reply to “ಇಂದಿನಿಂದ ಇಂಡಿಯಾ- ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಏನಿದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್? (ICC world test championship) ತಂಡಗಳ ಆಯ್ಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ”

  1. I love this kind of work which janajagran is doing to give people some knowledge about day to day news.

Leave a Reply

Your email address will not be published. Required fields are marked *