Cricket quiz : ಐಪಿಎಲ್ ಆರಂಭವಾದ ನಂತರ ದೇಶದಲ್ಲಿ ಕ್ರಿಕೇಟ್ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಗಳಲ್ಲಿಯೂ ಐಪಿಎಲ್ ಚರ್ಚೆ ಹೆಚ್ಚಾಗಿದೆ. ಚುನಾವಣೆ ಪ್ರಚಾರ ಜೋರು ಇದ್ದರೂ ಸಹ ಎಲ್ಲಿ ಸೇರಿದರಲ್ಲಿ ಕ್ರಿಕೇಟ್ ನದ್ದೇ ಮಾತಿರುತ್ತದೆ. ಈ ಸಲ ಯಾವ ತಂದ ಐಪಿಎಲ್ ಗೆಲ್ಲುತ್ತದೆ? ಯಾವ ತಂಡಗಳು ಫೈನಲ್ ಬರುತ್ತವೆ ಎಂಬ ಬೆಟ್ ಕಟ್ಟುತ್ತಿರುತ್ತಾರೆ. ಇಲ್ಲಿ ನಿಮಗಾಗಿ ಕ್ರಿಕೇಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳ ಮಾಹಿತಿ ನೀಡುತ್ತೇನೆ. ಇವುಗಳ ಆಧಾರದ ಮೇಲೆ ನೀವು ನಿಮ್ಮ ಸ್ನೇಹಿತರಿಗೆ ಪ್ರಶ್ನೆ ಕೇಳಿ ನಿಮ್ಮ ಟ್ಯಾಲೆಂಟ್ ತೋರಿಸಬಹುದು.
Cricket quiz : 2008 ರಿಂದ 2024 ರ ಏಪ್ರೀಲ್ 15 ರವರೆಗೆ ಇರುವ ದಾಖಲೆಗಳ ಮಾಹಿತಿ ಇಲ್ಲಿದೆ.
ಏಪಿಎಲ್ ಮೊದಲ ಟ್ರೋಫಿ ಗೆದ್ದ ತಂಡ ಯಾವುದು?
ರಾಜಸ್ತಾನ್ ರಾಯಲ್ಸ್ 2008 ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಮೊದಲ ತಂಡವಾಗಿದೆ. ಚೆನೈ ಸೂಪರ್ ಕಿಂಗ್ಸ್ ವಿರುದ್ದ ಗೆದ್ದಿದೆ.
ಅತೀ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಯಾವುದು?
ಐಪಿಎಲ್ ನಲ್ಲಿ ಅತೀ ಹೆಚ್ಚು ಸಲ ಐಪಿಎಲ್ ಟ್ರೋಫಿ ಗೆದ್ದ ತಂಡ ಮುಂಬಾಯಿ ಇಂಡಿಯನ್ಸ್ ಹಾಗೂ ಚೆನೈ ಸೂಪರ್ ಕಿಂಗ್ಸ್
ಇವರೆಡು ತಂಡಗಳು ತಲಾ ಐದು ಸಲ ಐಪಿಎಲ್ ಟ್ರೋಫಿ ಗೆದ್ದಿವೆ.
ಚೆನೈ ಸೂಪರ್ ಕಿಂಗ್ಸ್ ತಂಡ ತಂಡ 2010, 2011, 2018, 2021 ಹಾಗೂ 2023 ರಲ್ಲಿ ಗೆದ್ದಿದೆ.
ಮುಂಬೈ ಇಂಡಿಯನ್ಸ್ ತಂಡ ತಂಡ 2013, 2015, 2017, 2019 ಹಾಗೂ 2020 ರಲ್ಲಿ ಗೆದ್ದಿದೆ.
ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸಮನ್ ಯಾರು?
ಕ್ರಿಸ್ ಗೆಲ್ ರವರು ಐಪಿಎಲ್ ನಲ್ಲಿ ಅತೀ ಹೆಚ್ಚು ಸಿಕ್ಸರು ಬಾರಿಸಿದ್ದಾರೆ. ಒಟ್ಟು 357 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ : Double century : ಇವರೇ ನೋಡಿ ಡಬಲ್ ಸೆಂಚರಿ ಬಾರಿಸಿದವರು
ಟಿ20ಯಲ್ಲಿ ಅತೀ ಹೆಚ್ಸು ಸಿಕ್ಸರ್ ಬಾರಿಸಿದವರೂ ಕ್ರಿಸ್ ಗೆಲ್ ಆಗಿದ್ದಾರೆ. ಅವರು ಒಟ್ಟು 1056 ಸಿಕ್ಸರ್ ಬಾರಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತೀ ಉದ್ದದ ಸಿಕ್ಸ್ ಬಾರಿಸಿದ ಬ್ಯಾಟ್ಸಮನ್ ಯಾರು?
ಅಲ್ಬೆ ಮಾರ್ಕಲ್ ಚೆನೈ ತಂಡದ ಆಟಗಾರಅತೀ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ಹೌದು, 125 ಮೀಟರ್ ಉದ್ದದ ಸಿಕ್ಸ್ ಐಪಿಎಲ್ ಇತಿಹಾಸದಲ್ಲಿ ಅತೀ ಉದ್ದದ ಸಿಕ್ಸ್ ಆಗಿದೆ.
ಐಪಿಎಲ್ ನಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ ತಂಡ ಯಾವುದು?
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಅತೀ ಹೆಚ್ಚು ಸ್ಕೋರ್ ಬಾರಿಸಿದ ತಂಡ ಸನ್ ರೈಸಸ್ ಹೈದ್ರಾಬಾದ್ 273 ರನ್ ಗಳಿಸಿದೆ.
ಐಪಿಎಲ್ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸಮನ್ ಯಾರು?
ಕ್ರಿಸ್ ಗೆಲ್ 66 ಬಾಲ್ ಗಳಲ್ಲಿ 175 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಐಪಿಎಲ್ ನಲ್ಲಿ ಇಲ್ಲಿಯವರೆಗೆ ಒಟ್ಟು ಹೆಚ್ಚು ರನ್ ಗಳಿಸಿದ ಬ್ಯಾಟ್ಸಮನ್ ಯಾರು?
ವಿರಾಟ್ ಕೊಹ್ಲಿಯವರು 7582 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು 235 ಇನ್ಸಿಂಗ್ಸ್ ನಲ್ಲಿ 7582 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದಾರೆ. ಅವರು 6769 ರನ್ ಗಳಿಸಿದ್ದಾರೆ.
ಐಪಿಎಲ್ ನಲ್ಲಿ ಹೆಚ್ಚು ಸೆಂಚುರಿ ಬಾರಿಸಿದ ಬ್ಯಾಟ್ಸಮನ್ ಯಾರು?
ವಿರಾಟ್ ಕೊಹ್ಲಿ 8 ಶತಕ ಬಾರಿಸಿದ್ದಾರೆ. ಕ್ರಿಸ್ ಗೆಲ್ 6 ಶತಕ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಬ್ಯಾಟ್ಸ್ ಮನ್ ಯಾರು?
ಬ್ಯಾಂಡನ್ ಮ್ಯಾಕುಲಮ್ ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಬ್ಯಾಟ್ಸ್ ಮನ್ ಆಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಒಟ್ಟು ಅತೀ ಹೆಚ್ಚು ವಿಕೆಟ್ ಪಡೆದ ಬಾಲರ್ ಯಾರು?
ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬಾಲರ್ ಯಜುವೇಂದ್ರ ಚಾಹಲ್ ಅವರು 187 ವಿಕೇಟ್ ಪಡೆದಿದ್ದಾರೆ.