ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಸೆಮಿಫೈನಲ್ ಪಂದ್ಯ ತುಂಬಾ ರೋಚಕ ಪಡೆದಿದೆ. ಇಂದು ಗೆಲ್ಲುವ ತಂಡವು ಫೈನಲ್ ತಲುಪಲಿದೆ.
ಹಿಂದಿನ ಇತಿಹಾಸ ನೋಡಿದರೆ ಸೆಮಿಫೈನಲ್ ನಲ್ಲಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ತಂಡ ಹೆಚ್ಚು ಬಾರಿ ಸೋಲಿಸಿದೆ. ಆದರೆ ಈ ವರ್ಲ್ಡ್ ಕಪ್ ಕ್ರಿಕೇಟ್ ನಲ್ಲಿ ಲೀಗ್ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಭಾರತ ಒಂದೂ ಪಂದ್ಯ ಸೋಲದೆ ಸೆಮಿಫೈನಲ್ ಗೆ ತಲುಪಿದೆ.
ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಲೀಗ್ ಹಂತದಲ್ಲಿ ಆಡಿದ ಪಂದ್ಯಗಳಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಉತ್ತಮ ಫಾಮ್ ನಲ್ಲಿತ್ತು. ಆದರೆ ನಂತರ ಭಾರತ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ್ ವಿರುದ್ಧ ಕ್ರಮವಾಗಿ ಸತತವಾಗಿ ಸೋಲು ಅನುಭವಿಸಿತು. ನಂತರದ ಪಂದ್ಯ ಗೆದ್ದು ನ್ಯೂಜಿಲೆಂಡ್ ತಂಡ ಸೆಮಿಫೈನಲ್ ತಲುಪಿ ಇಂದು ಭಾರತ ವಿರುದ್ಧ ಸೆಣಸಾಡಲಿದೆ.
ಸೆಮಿ ಫೈನಲ್ ಪಂದ್ಯ ಸಹಜವಾಗಿ ಎರಡೂ ತಂಡಗಲ್ಲಿ ಒತ್ತಡ ಹಾಗೂ ಸವಾಲಿನ ಪಂದ್ಯವಾಗಿದೆ. ಈ ಒತ್ತಡದ ಪಂದ್ಯವನ್ನು ಯಾವ ತಂಡ ಹೇಗೆ ಆಡಲಿದೆ ಎಂಬುದು ಮುಖ್ಯವಾಗಿದೆ. ಒಂದು ಪಂದ್ಯಕ್ಕೆ ಇನ್ನೊಂದು ಪಂದ್ಯದಿಂದ ಉಂಟಾಗುವ ಒತ್ತಡದ ಬದಲು ಪಂದ್ಯದ ಮೇಲೆ ಗಮನ ಕೇಂದ್ರೀಕರಿಸುವುದು ಮುಖ್ಯವಾಗಿದೆ.
ಐಸಿಸಿ ಏಕದಿನದ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಈ ರೋಚಕ ಹಣಾಹಣಿ ಮುಂಬೈನ ವಾಂಖೇಡ್ ಮೈದಾನದಲ್ಲಿಇಂದು ಪಂದ್ಯ ನಡೆಯಲಿದೆ.
ಇದನ್ನೂ ಓದಿ ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಯಾರಿಗೆ ಸಿಗಲಿದೆ? ಇಲ್ಲಿದೆ ಮಾಹಿತಿ
ಲೀಗ್ ಹಂತದಲ್ಲಿ ಪಂದ್ಯಗಳು ನಡೆಯುವಾಗ ಯಾವ ಯಾವ ತಂಡಗಳು ಸೆಮಿಫೈನಲ್ ಆಡಲಿದೆ ಎಂಬ ಲೇಖನದಲ್ಲಿ ಕರಣ್ ಶಿವಾ ರಾಠೋಡ ಹಾಗೂ ಶಿವಾನಂದ ನವರು ಸರಿಯಾಗಿ ಕಾಮೆಂಟ್ ಮಾಡಿದ್ದರು. ಹೌದು, ಭಾರತ, ನ್ಯುಜಿಲೆಂಡ್, ಸೌತ್ ಆಫ್ರೀಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಲಿವೆ ಎಂದು ಕಾಮೆಂಟ್ ಮಾಡಿದ್ದರು. ಫೈನಲ್ ಭಾರತ ತಲುಪಿ ಐಸಿಸಿ ವರ್ಲ್ಡ್ ಕಪ್ ಗೆಲ್ಲಲಿದೆ ಎಂದು ಕರಣ್ ಶಿವಾ ರಾಠೋಡ ಕಾಮೆಂಟ್ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ?:
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುವ ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ. ಹಾಗೂ ಮುಂದಿನ ಫೈನಲ್ ಪಂದ್ಯದಲ್ಲಿ ಯಾವ ತಂಡದೊಂದಿಗೆ ಫೈನಲ್ ಪಂದ್ಯ ಆಡಲಿದೆ ಎಂಬುದರ ಬಗ್ಗೆ ಕೆಳಗಡೆ ನೀವು ಕಾಮೆಂಟ್ ಮಾಡಬಹುದು. ನಿಮ್ಮ ಪ್ರಕಾರ ನೀವು ಕಾಮೆಂಟ್ ಮಾಡಿದ ಪಂದ್ಯ ಫೈನಲ್ ತಲುಪಿ ಕ್ರಿಕೇಟ್ ವರ್ಲ್ಡ್ ಕಪ್ ಗೆದ್ದರೆ ನಮ್ಮ ಲೇಖನದಲ್ಲಿ ನಿಮ್ಮ ಫೋಟೋ ಹಾಕಿ ಅಭಿನಂದಿಸಲಾಗುವುದು.
ಇನ್ನೇಕೆ ತಡ? ಕೂಡಲೇ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಕಾಮೆಂಟ್ ಮಾಡಿ.
Awesome sir please keep sharing this information ℹ️ with us