ಕ್ರಿಕೇಟ್ Finalನಲ್ಲಿ ಯಾವ ದೇಶ ಗೆಲ್ಲಲಿದೆ? ಕಾಮೆಂಟ್ ಮಾಡಿ

Written by Ramlinganna

Updated on:

Which team win world cup  ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆದ್ದು ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿ ಮಾಡಲಿದೆ. ಕಾಮೆಂಟ್ ಮಾಡಿ ತಿಳಿಸಬಹುದು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನರೇಂದ್ರ ಮೋದಿ ಕ್ರಿಕೇಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೇಟ್ ಜಗತ್ತು ಎದುರು ನೋಡುತ್ತಿದೆ.ವಿಶ್ವದ ಎರಡು ದಿಗ್ಗಜ ತಂಡಗಳ ನಡುವೆ ನಡೆಯುವ ಈ ಪಂದ್ಯದಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ತುಂಬಿ ತುಳಕಲಿದೆ.

ಪಂದ್ಯ ಭಾನುವಾರ ನಡೆಯುವುದರಿಂದ ಇಡೀ ದೇಶ ತುದಿಗಾಲಲ್ಲಿನಿಂತು ನೋಡುವಂತಾಗುತ್ತದೆ. ಭಾನುವಾರ ರಜೆ ಇರುವುದರಿಂದ ಮಧ್ಯಾಹ್ನದ ವೇಳೆ ಊಟ ಮಾಡಿ ಪ್ರತಿಯೊಬ್ಬರೂ ಟಿವಿ ಎದುರು ಕುಳಿತು ಪಂದ್ಯ ವೀಕ್ಷಿಸಲಿದ್ದಾರೆ.

ಫೈನಲ್ ಪಂದ್ಯಕ್ಕೆ ಮೀಸಲು ದಿನವಾಗಿದೆ. ಹಾಗಾಗಿ ಮಳೆಯಿಂದ ಪಂದ್ಯ ರದ್ದಾದರೆ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಪಂದ್ಯ ಮುಂದುವರೆಯಲಿದೆ.  ಪಂದ್ಯದ ದಿನ ಕನಿಷ್ಟ 20 ಓವರ್ ಗಳನ್ನು ಎರಡೂ ತಂಡಗಳು ಮುಗಿಸಿಲ್ಲವಾದರೆ ಮೀಸಲು ದಿನ ಪಂದ್ಯ ಮುಂದುವರೆಯಲಿದೆ.

ವಿಶ್ವಕಪ್ ನಲ್ಲಿ ಒಂದೂ ಪಂದ್ಯ ಸೋಲದೆ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲುವ ಫೆವರೆಟ್ ತಂಡವಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾ ಆರಂಭದ ಎರಡು ಮ್ಯಾಚ್ ಗಳನ್ನುಸೋತು ನಂತರದ 8 ಮ್ಯಾಚ್ ಗಳನ್ನು ಸತತವಾಗಿ ಗೆದ್ದು ಫೈನಲ್ ಪ್ರವೇಶಿಸಿದೆ. ಈ ಬಾರಿಯ ವಿಶ್ವಕಪ್ ಗೆ ಭಾರತ ಆತಿಥ್ಯ ವಹಿಸುತ್ತಿದ್ದರಿಂದ ಭಾರತಕ್ಕೆ ಹೆಚ್ಚು ಅವಕಾಶವಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ Double century : ಇವರೇ ನೋಡಿ ಡಬಲ್ ಸೆಂಚರಿ ಬಾರಿಸಿದವರು

ಆಸ್ಟ್ರೇಲಿಯಾ ಹಾಗೂ ಭಾರತ ಇವೆರಡು ತಂಡಗಳಲ್ಲಿ ಯಾವ ತಂಡ ವಿಶ್ವಕಪ್ ಗೆಲ್ಲಲಿದೆ ಕಾಮೆಂಟ್ ಮಾಡಿ ತಿಳಿಸಬಹುದು. ಇದರೊಂದಿಗೆ ಫೈನಲ್ ಪಂದ್ಯದಲ್ಲಿ ಯಾರು ಸೆಂಚುರಿ ಬಾರಿಸಬಹುದು. ಯಾರು ಅತೀ ಹೆಚ್ಚು ವಿಕೇಟ್ ಪಡೆಯಬಹುದು. ಯಾರು ಮ್ಯಾನ್ ಆಫ್ ದಿ ಮ್ಯಾಚ್ ಪಡೆಯಬಹುದು. ಯಾರು ಮ್ಯಾನ್ ಆಫ್ ದಿ ಸಿರೀಸ್ ಪಡೆಯಬಹುದು ಎಂಬುದರ ಕುರಿತು ಕಾಮೆಂಟ್ ಮಾಡಿ ತಿಳಿಸಬಹುದು.

Which team win world cup  ವಿಶ್ವಕಪ್ ಗೆದ್ದ ತಂಡಗಳ ಮಾಹಿತಿ ಇಲ್ಲಿದೆ

1975 ರಲ್ಲಿ ನಡೆದ ವರ್ಲ್ ಕಪ್ ನಲ್ಲಿ  ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಗೆದ್ದಿತ್ತು.

1979 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಗೆದ್ದಿತ್ತು.

1983 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಭಾರತ ತಂಡ ಗೆದ್ತಿತ್ತು.

1987 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದಿತ್ತು.

1992 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ  ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ್ ತಂಡ ಗೆದ್ತಿತ್ತು.

1996 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ ಗೆದ್ದಿತ್ತು.

1999 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದಿತ್ತು.

2003 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದಿತ್ತು.

2007 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದಿತ್ತು.

2011 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಗೆದ್ದಿತ್ತು.

2015 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದಿತ್ತು.

2019 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧಇಂಗ್ಲೆಂಡ್ ತಂಡ ಗೆದ್ದಿತ್ತು.

2023 ರಲ್ಲಿ ಯಾವ ತಂಡದ ವಿರುದ್ಧ ಯಾವ ತಂಡ ಗೆಲ್ಲಲಿದೆ? ಕೂಡಲೇ ಕಾಮೆಂಟ್ ಮಾಡಿ

Leave a Comment