Double century : ಇವರೇ ನೋಡಿ ಡಬಲ್ ಸೆಂಚರಿ ಬಾರಿಸಿದವರು

Written by Ramlinganna

Updated on:

Double century player list : ಒಂಡೇ ಕ್ರಿಕೇಟ್ ನಲ್ಲಿ ಈಗ ಡಬಲ್ ಸೆಂಚರಿಗಳು ಸಾಮಾನ್ಯವಾಗಿದೆ. 2010 ಕ್ಕಿಂತ ಮೊದಲು ಡಬಲ್ ಸೆಂಚರಿ ಬಾರಿಸುವುದೆಂದರೆ ದೊಡ್ಡ ಸಾಧನೆಯಾಗುತ್ತಿತ್ತು. ಕ್ರಿಕೆಟ್ ದಿಗ್ಗಜ ಸಚಿನ್ ಟೆಂಡಲ್ಕರ್ ಮೊದಲ ಡಬಲ್ ಸೆಂಚರಿ ಬಾರಿಸಿದಾಗ ಇಡೀ ವಿಶ್ವವೇ  ಬೆರಗಾಗಿತ್ತು. ಹೌದು ಸಚಿನ್ ಟೆಂಡಲ್ಕರ್ ರವರು ಸೌತ್ ಆಫ್ರಿಕಾ ವಿರುದ್ಧ 147 ಬಾಲ್ ಎದುರಿಸಿ 200 ರನ್ ಬಾರಿಸಿ ಇತೀಹಾಸ ಸೃಷ್ಟಿಸಿದರು.

ಯಾವಾಗ ಸಚಿನ್ ಟೆಂಡಲ್ಕರ್ ಡಬಲ್ ಸೆಂಚರಿ ಬಾರಿಸಿದರೋ ಆಗ ಒಂಡೇ ಕ್ರಿಕೇಟ್ ನಲ್ಲಿಯೂ ಡಬಲ್ ಸೆಂಚರಿ ಬಾರಿಸಬಹುದು ಎಂಬ ಕಲ್ಪನೆ ಹುಟ್ಟಿತ್ತು.  2010 ರರವಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೇಟ್ ನಲ್ಲಿ ಸೆಂಚರಿ ಬಾರಿಸಿದ ಆಟಗಾರರು ಡಬಲ್ ಸಂಚರಿ ಬಾರಿಸುವುದು ಕನಸೇ ಕಂಡಿರಲ್ಲಿಲ್ಲ. ಯಾವಾಗ ಸಚಿನ್ ಟೆಂಡಲ್ಕರ್ ಇ ಇತಿಹಾಸವನ್ನು ಸೃಷ್ಟಿ ಮಾಡಿದರೋ ಆಗ ವಿಶ್ವದ ಮಹಾನ್ ಕ್ರಿಕೇಟ್ ಆಟಗಾರರು, ಯುವ ಆಟಗಾರರು ನಾವೂ ಡಬಲ್ ಸೆಂಚರಿ ಬಾರಿಸಿ ತೋರಿಸುತ್ತೇವೆ ಎಂಬ ಛಲ ಮಾಡಿಯೇಬಿಟ್ಟರು.  2010 ರ ನಂತರ ಇಲ್ಲಿಯವರೆಗೆ 10 ಜನ ಕ್ರಿಕೇಟ್ ಆಟಗಾರರು ಡಬಲ್ ಸೆಂಚರಿ ಮಾಡಿದ್ದಾರೆ. ಮುಂದೆ ಯಾರು ಡಬಲ್ ಸೆಂಚರಿ ಮಾಡಬಹುದು? ಕಾಮೆಂಟ್ ಮಾಡಿ.

ಸಚಿನ್ ಟೆಂಡಲ್ಕರ್ ಡಬಲ್ ಸೆಂಚರಿ ಬಾರಿಸಿದ ನಂತರ ನಾನು ಈ ಸಾಧನೆ ಮಾಡಿ ತೋರಿಸುತ್ತೇನೆಂದು ನಿರ್ಧರಿಸಿ ವೀರೇಂದ್ರ ಸೆಹ್ವಾಗ್ ಒಂದೇ ವರ್ಷದಲ್ಲಿ ಆ ಸಾಧನೆ ಮಾಡಿಯೇ ಬಿಟ್ಟರು. ಹೌದು, ವೀರೇಂದ್ರ ಸೆಹ್ವಾಗ್ ರವರು ವೆಸ್ಟ್ ಇಂಡೀಸ್ ವಿರುದ್ಧ ಕೇವಲ 149 ಬಾಲ್ ಗಳಲ್ಲಿ 219 ಮಾಡಿ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದರು.

ಇದಾದ ಮೇಲೆ ತಾನೇನು ಕಡಿಮೆಯಿಲ್ಲ, ನಾನು ಡಬಲ್ ಸೆಂಚರಿ ಮಾಡಬಲ್ಲೆ ಎಂದು ರೋಹಿತ್ ಶರ್ಮಾ ನಿರ್ಧರಿಸಿಯೇ ಬಿಟ್ಟರು. ಅವರು 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 158 ಬಾಲ್ ಗಳನ್ನು ಎದುರಿಸಿ 209 ರನ್ ಬಾರಿಸಿದರು.

ಇದೇ ರೀತಿ ಅವರು 2017 ರಲ್ಲಿ ಶ್ರೀಲಂಕಾ ವಿರುದ್ಧ 153 ಬಾಲ್ ಎದುರಿಸಿ 208 ರನ್ ಗಳಿಸಿದರು. 2014 ರಲ್ಲಿ ಮತ್ತೇ ಶ್ರೀಲಂಕಾ ವಿರುದ್ಧ 173 ಬಾಲ್ ಎದುರಿಸಿ 264 ರನ್ ಗಳಿಸಿ ಒನ್ ಡೇ ಕ್ರಿಕೇಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ನಂತರ ನ್ಯೂಜಿಲೆಂಡಿನ ಆಟಗಾರ ಗುಪ್ಟಿಲ್ ರವರು ವೆಸ್ಟ್ ಇಂಡೀಸ್ ವಿರುದ್ಧ 163 ಬಾಲ್ ಎದುರಿಸಿ 237 ರನ್ ಗಳಿಸಿ ಇತಿಹಾಸ ಸೃಷ್ಟಿಸಿದರು.

ನಂತರ ಕ್ರಿಸ್ ಗೆಲ್ ರವರು ಜಿಂಬಾಂಬ್ವೆ ವಿರುದ್ಧ 147 ಬಾಲ್ ಎದುರಿಸಿ 2015ರಲ್ಲಿ 215 ರನ್ ಗಳಿಸಿದರು.

2018 ರಲ್ಲಿ ಜಿಂಬಾಂಬ್ವೆ ವಿರುದ್ಧ ಪಾಕಿಸ್ತಾನದ ಯುವ ಆಟಗಾರ ಫಕರ್ ಜಮಾನ್ ರವರು 156 ಬಾಲ್ ಎದುರಿಸಿ 210 ರನ್ ಗಳಿಸಿ ತಾನೇನು ಕಡಿಮೆಯಿಲ್ಲಎಂಬುದನ್ನು ಸಾಧಿಸಿ ತೋರಿಸಿದರು.

ಇದನ್ನೂ ಓದಿ ಐಪಿಎಲ್ 2008 ರಿಂದ 2021 ರವರೆಗೆ ವಿನ್ನರ್ ತಂಡಗಳು

ಇದಾದ ಮೇಲೆ ಮತ್ತೆ ಯುವ ಆಟಗಾರರು ತಾವೂ ಡಬಲ್ ಸೆಂಚರಿ ಮಾಡುತ್ತೇವೆ. ನಾವೇನು ಕಡಿಮೆಯಲ್ಲ ಎಂದು ನಿರ್ಧರಿಸಿ  ಭಾರತದ ಯುವ ಆಟಗಾರ ಇಶಾನ್ ಕಿಶನ್ ರವರು ಬಾಂಗ್ಲಾದೇಶ ವಿರುದ್ಧ 131 ಬಾಲ್ ಎದುರಿಸಿ 210 ರನ್ ಗಳಿಸಿ ಇತಿಹಾಸ ಸೃಷ್ಟಿಸಿದರು.

ಇದಾದ ಕೆಲವೇ ದಿನಗಳಲ್ಲಿ ಶುಭಮನ್ ಗಿಲ್ ರುವರು ನ್ಯೂಜಿಲೆಂಡ್ ವಿರುದ್ಧ 149 ಬಾಲ್ ಎದುರಿಸಿ 208 ರನ್ ಗಳಿಸಿದರು.

ನಂತರ ಗ್ಲೇನ್ ಮ್ಯಾಕ್ಸ್ ವೆಲ್ ಸಹ ಅಫಘಾನಿಸ್ತಾನ ವಿರುದ್ಧ ಡಬಲ್ ಸೆಂಚುರಿ ಬಾರಿಸಿದರು.

Double century player list ಡಬಲ್ ಸೆಂಚುರಿ ಬಾರಿಸಿದ ಕ್ರಿಕೇಟ್ ವೀರರು

ಆಟಗಾರರ ಹೆಸರು ಗಳಿಸಿದ ರನ್ ಎದುರಿಸಿದ ಬಾಲ್ ದೇಶ    ಯಾವ ದೇಶದ ವಿರುದ್ಧ ವರ್ಷ
ಸಚಿನ್ ಟೆಂಡಲ್ಕರ್ 200 147 ಭಾರತ ಸೌತ್ ಆಫ್ರಿಕಾ 24 ಫೆ. 2010
ವೀರೇಂದ್ರ ಸೆಹ್ವಾಗ್ 219 149 ಭಾರತ ವೆಸ್ಟ್ ಇಂಡೀಸ್ 8 ಡಿ. 2011
ರೋಹಿತ್ ಶರ್ಮಾ 209 158 ಭಾರತ ಆಸ್ಟ್ರೇಲಿಯಾ 2 ನ. 2013
ರೋಹಿತ್ ಶರ್ಮಾ 264 173 ಭಾರತ ಶ್ರೀಲಂಕಾ 13 ನ. 2013
ಕ್ರಿಸ್ ಗೆಲ್ 215 147 ವೆಸ್ಟ್ ಇಂಡೀಸ್ ಝಿಂಬಾಂಬ್ವೆ 24ಫೆ. 2015
ಗುಪ್ಟಿಲ್ 237 163 ನ್ಯೂಜಿಲೆಂಡ್ ವೆಸ್ಟ್ ಇಂಡೀಸ್ 21ಮಾ. 2015
ಫಕರ್ ಜಮನ್ 210 156 ಪಾಕಿಸ್ತಾನ ಝಿಂಬಾಂಬ್ವೆ 20 ಜು. 2018
ರೋಹಿತ್ ಶರ್ಮಾ 208 153 ಭಾರತ ಶ್ರೀಲಂಕಾ 13 ಡಿ. 2017
ಇಶಾನ್ ಕಿಶನ್ 210 131 ಭಾರತ ಬಾಂಗ್ಲಾದೇಶ 10 ಡಿ. 2022
ಶುಭಮನ್ ಗಿಲ್ 208 149 ಭಾರತ ನ್ಯೂಜಿಲೆಂಡ್ 18ಜ. 2023

 

Leave a Comment