ಐಪಿಎಲ್ 2008 ರಿಂದ 2021 ರವರೆಗೆ ವಿನ್ನರ್ ತಂಡಗಳು

Written by By: janajagran

Updated on:

IPL Match schedule ಕ್ರಿಕೇಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದೇಸಿ ಕ್ರಿಕೇಟ್ ಟಿ20 ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. 65 ದಿನಗಳ ಕಾಲ ಕ್ರಿಕೇಟ್ ಅಭಿಮಾನಿಗಳಿಗೆ ಐಪಿಎಲ್ ರಸದೌತಣ ನೀಡಲಿದೆ. ಮಾರ್ಚ್ 26 ರಂದು ಮುಂಬೈನ ವಾಂಖೇಡ್ ಕ್ರೀಡಾಂಗಣದಲ್ಲಿಈ ಐಪಿಎಲ್ ಗೆ ಚಾಲನೆ ಸಿಗಲಿದೆ.  ಮೊದಲ ದಿನ ಚೆನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಹಣಾಹಣಿ ನಡೆಯಲಿದೆ. ಮಾರ್ಚ್26 ಕ್ಕೆ ಆರಂಭವಾಗುವ ಈ ಟೂರ್ನಿ ಮೇ 29 ಕ್ಕೆ ಮುಕ್ತಾಯವಾಗಲಿದೆ.

ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟೈನ್ಸ್ ಹಾಗೂ  ಲಖನೌ ಸೂಪರ್ ಜೈಂಟ್ಸ್ ಈ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ. ಒಟ್ಟು 10 ತಂಡಗಳಿಂದ ಕೂಡಿದ ಈ ಪಂದ್ಯಾವಳಿಯಲ್ಲಿ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ಹಾಗೂ ಪ್ಲೇ ಆಫ್ ಹಂತದಲ್ಲಿ 4 ಪಂದ್ಯಗಳು ಇರಲಿವೆ.

ಬಹುಮಾನದ ಮೊತ್ತ

ಈ ಬಾರಿ ಐಪಿಎಲ್ ಚಾಂಪಿಯನ್ ತಂಡಕ್ಕೆ 20 ಕೋಟಿ ರೂಪಾಯಿ ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

ಐಪಿಎಲ್ ತಂಡಗಳು

ಚೆನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಇಲೆವನ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈರರ್ಸ್ ಹೈದ್ರಾಬಾದ್,  ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಹೀಗೆ ಒಟ್ಟು ಈ ಬಾರಿ 10 ತಂಡುಗಳಿವೆ.

IPL Match schedule ಐಪಿಎಲ್ ವಿನ್ನರ್ ಹಾಗೂ ರನ್ನರ್ ಆಫ್ ತಂಡಗಳು

2008 ರಿಂದ ಆರಂಭವಾದ ಐಪಿಎಲ್ ಇಲ್ಲಿಯವರೆಗೆ 14 ಟೂರ್ನಿಗಳು ನಡಿದಿವೆ. ಈ ಟೂರ್ನಿಯಲ್ಲಿ ವಿಜೇತ ತಂಡ ಹಾಗೂ ರನ್ನರ್ ಅಪ್ ತಂಡಗಳ ಮಾಹಿತಿ ಇಲ್ಲಿದೆ.

ವರ್ಷ ವಿಜೇತ ತಂಡ ರನ್ನರ್ ಅಪ್ ತಂಡ
2008 ರಾಜಸ್ಥಾನ್ ರಾಯಲ್ಸ್ ಚೆನೈ ಸೂಪರ್ ಕಿಂಗ್ಸ್
2009 ಡೆಕ್ಕನ್ ಜಾರ್ಜರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು
2010 ಚೆನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್
2011 ಚೆನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು
2012 ಕೊಲ್ಕತ್ತಾ ನೈಟ್ ರೈಡರ್ಸ್ ಚೆನೈ ಸೂಪರ್ ಕಿಂಗ್ಸ್
2013 ಮುಂಬೈ ಇಂಡಿಯನ್ಸ್ ಚೆನೈ ಸೂಪರ್ ಕಿಂಗ್ಸ್
2014 ಕೊಲ್ಕತ್ತಾ ನೈಟ್ ರೈಡರ್ಸ್ ಕಿಂಗ್ಸ್ XI ಪಂಜಾಬ್
2015 ಮುಂಬೈ ಇಂಡಿಯನ್ಸ್ ಚೆನೈ ಸೂಪರ್ ಕಿಂಗ್ಸ್
2016 ಸನ್ ರೈಸರ್ಸ್ ಹೈದ್ರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು
2017 ಮುಂಬೈ ಇಂಡಿಯನ್ಸ್ ರೈಸಿಂಗ್ ಪುಣೆ ಸೂಪರಗೇನ್ಸ್
2018 ಚೆನೈ ಸೂಪರ್ ಕಿಂಗ್ಸ್ ಸನ್ ರೈಸರ್ಸ್ ಹೈದ್ರಾಬಾದ್
2019 ಮುಂಬೈ ಇಂಡಿಯನ್ಸ್ ಚೆನೈ ಸೂಪರ್ ಕಿಂಗ್ಸ್
2020 ಮುಂಬೈ ಇಂಡಿಯನ್ಸ್ ದೆಲ್ಲಿ ಕ್ಯಾಪಿಟಲ್ಸ್
2021 ಚೆನೈ ಸೂಪರ್ ಕಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್

ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಈ ಬಾರಿ ಪಂದ್ಯಗಳನ್ನು ಮುಂಬೈಹಾಗೂ ಪುಣೆ ನಗರಗಳಲ್ಲಿ ಮಾತ್ರ ಆಡಲಾಗುತ್ತಿದೆ. ಈ ಬಾರಿಯ ಐಪಿಎಲ್ ನ ತಂಡಗಳಲ್ಲಿ ಭಾರಿ ಬದಲಾವಣೆಗಳಾಗಿದ್ದು, ಪ್ರಮುಖ ಆಟಗಾರರು ವಿವಿಧ ತಂಡಗಳಿಗೆ ಹಂಚಿ ಹೋಗಿದ್ದಾರೆ. ಜೊತೆಗೆ ಐಪಿಎಲ್ ಟೂರ್ನಿಯ ನಿಯಮಗಳಲ್ಲಿ ಕೂಡ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ ನಿಮ್ಮ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ? ಇಲ್ಲೇ ಚೆಕ್ ಮಾಡಿ

2022ನೇ ಸಾಲಿನಲ್ಲಿಯಾವ ತಂಡ ಫೈನಲ್ ಗೆ ತಲುಪುವುದೋ ಎಂಬ ಕುತೂಹಲ ಇದ್ದೇ ಇರುತ್ತದೆ. ಮ್ಯಾಜಿಕ್ ಮಾಡಿ ಹೊಸ ತಂಡಗಳು ಫೈನಲ್ ಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಹಿಂದೆ  ರಾಜಸ್ಥಾನ ರಾಯಲ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ತಂಡಗಳು ಐಪಿಎಲ್ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಸಾಲಿನ ಐಪಿಎಲ್ ಕ್ರಿಕೇಟ್  ಸಹ ಕಳೆದ ಸಾಲಿನಂತೆ   ಕ್ರಿಕೇಟ್ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment