ಫ್ರೂಟ್ಸ್ ಐಡಿಯನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು ಹಾಗೂ ಮೊಬೈಲ್ ನಲ್ಲಿಯೇ ನೋಂದಣಿ ಮಾಡಿಸಿ

Written by Ramlinganna

Published on:

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲ ಎಫ್ಐಡಿ ಕಡ್ಡಾಯವಾಗಿದೆ. ಹೌದು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಮಾಡಿಸಲು ಎಫ್ಐಡಿ ಹೊಂದಿರುವುದು ಕಡ್ಡಾಯವಾಗಿದೆ.

ಏನಿದು ಎಫ್ಐಡಿ? ರೈತರಿಗೇಕೆ ಬೇಕು ಎಫ್ಐಡಿ? ಇಲ್ಲಿದೆ ಮಾಹಿತಿ

ನೌಕರರಿಗೆ ತಮ್ಮ ಜಾಬ್ ಕಾರ್ಡ್ ಇರುವಂತೆ ರೈತರಿಗೂ ಒಂದು ಕಾಡ್ ಮಾಡಲಾಗಿದೆ. ಅದೇ ಎಫ್ಐಡಿ. ಆಧಾರ್ ಕಾರ್ಡ್, ರೇಶನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆ ಎಫ್ಐಡಿ ಕಾರ್ಡ್ ಸಹ ರೈತರಿಗೆ ಮುಖ್ಯವಾಗಿದೆ. ಇದನ್ನೂ ಫ್ರೂಟ್ಸ್ ಐಡಿ ಎಂದಲೂ ಕರೆಯುವರು. FRUITS – Farmer Registration and unified beneficiary information System.

ನಿಮ್ಮ ಎಫ್ಐಡಿ ನಿಮಗೆ ಗೊತ್ತೈ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ರೈತರು ತಮ್ಮ ಎಫ್ಐಡಿ ಸಂಖ್ಯೆಯನ್ನು ತಮ್ಮ ಆಧಾರ್ ಕಾರ್ಡ್ ಸಹಾಯದಿಂದ ಪಡೆದುಕೊಳ್ಳಬಹುದು. ಹೌದು, ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು. ನಂತರ search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಫ್ರೂಟ್ಸ್ ಐಡಿ ಇರುತ್ತದೆ. ಅದರ ಮುಂದುಗಡೆ ಪಿಎಂ ಕಿಸಾನ್ ಐಡಿ ಇರುತ್ತದೆ. ಅದರ ಕೆಳಗಡೆ ನಿಮ್ಮ ಹೆಸರು ಇರುತ್ತದೆ. ಫ್ರೂಟ್ಸ್ ಐಡಿ ಹಾಗೂ ಪಿಎಂ ಕಿಸಾನ್ ಐಡಿ ನಿಮಗೆ ಬಹಳ ಮುಖ್ಯವಾಗಿರುತ್ತದೆ. ಇವೆರಡನ್ನು ನೀವು ಬರೆದಿಟ್ಟುಕೊಳ್ಳಬೇಕು. ಅಥವಾ ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

ಫ್ರೂಟ್ಸ್ ಐಡಿ ಏಕೆ ಬೇಕು?

ಇನ್ನೂ ಮುಂದೆ ಫ್ರೂಟ್ಸ್ ಐಡಿ ಇಲ್ಲದಿದ್ದರೆ ನಿಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಬ್ಸಿಡಿ ಸಿಗುವುದಿಲ್ಲ. ಪಶು ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಹಾಗೂ ಕೃಷಿ ಇಲಾಖೆಯ ವತಿಯಿಂದ ಸಬ್ಸಿಡಿ ಸಿಗುವುದಿಲ್ಲ.

ಇದನ್ನೂ ಓದಿ : ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆ – ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

ಸರ್ಕಾರದ ಯೋಜನೆಗಳಡಿಯಲ್ಲಿ ಕೃಷಿ ಯಂತ್ರೋಪಕರಣಗಳ್ನು ಪಡೆಯಲು ಎಫಐಡಿ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಬ್ಯಾಂಕ್ ಸಾಲ ಪಡೆಯುವಲ್ಲಿಯೂ ಎಫ್ಐಆಡಿ ಬೇಕಾಗುತ್ತದೆ.

ಮೊಬೈಲ್ ನಲ್ಲಿಯೇ ಫ್ರೂಟ್ಸ್ ಗೆ ನೋಂದಣಿ ಮಾಡಿಸಬೇಕೇ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಫ್ರೂಟ್ಸ್ ಐಡಿಗಾಗಿ ಅರ್ಜಿ ಸಲ್ಲಿಸಬಹುದು. ಹೌದು, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು  ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ citizen Registration ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ಬರೆಯಬೇಕು. ಅದರ ಕೆಳಗಡೆ ನಿಮ್ಮ ಆಧಾರ್ ಕಾರ್ಡ್ ಹಾಕಬೇಕು. ನಂತರ ಐ ಅಗ್ರಿ ಬಾಕ್ಸ್ ಆಯ್ಕೆ ಮಾಡಿಕೊಂಡು Submit ಮೇಲೆ ಕ್ಲಿಕ್ ಮಾಡಬೇಕು.  ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಫ್ರೂಟ್ಸ್ ನೋಂದಣಿಗೆ ಯಾವ ಯಾವ ದಾಖಲೆ ಬೇಕು?

ಫ್ರೂಟ್ಸ್ ನೋಂದಣಿಗೆ ಆಧಾರ್ ಕಾರ್ಡ್ ಬೇಕು.  ಜಮೀನಿನ ದಾಖಲೆ (ಪಹಣಿ)ಬೇಕು. ಬ್ಯಾಂಕ್ ಪಾಸ್ ಬುಕ್, ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ಇದರೊಂದಿಗೆ ಪಾಸ್ ಪೋರ್ಟ್ ಸೈಜಿನ ಫೋಟೋ ಸಹ ಬೇಕಾಗುತ್ತದೆ.

ಫ್ರೂಟ್ಸ್ ನೋಂದಣಿಗಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಅಥವಾ ಪ್ರೂಟ್ಸ್ ನೋಂದಣಿಗೆ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

Leave a comment