ರೈತರು ತಮ್ಮ ಜಮೀನು ಹಾಗೂ ತಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನು ಯಾರಿಗೆ ಮಾರಾಟ ಮಾಡಲಾಗಿದೆ? ಎಷ್ಟು ಎಕರೆ ಜಮೀನು ಮಾರಾಟ ಮಾಡಲಾಗಿದೆ? ಅಥವಾ ತಂದೆ, ತಾಯಿ ತಮ್ಮ ಮಕ್ಕಳಿಗೆ ಯಾವ ಮಗನಿಗೆ ಎಷ್ಟು ಎಕರೆ ಜಮೀನು ವರ್ಗಾವಣೆ ಮಾಡಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ? ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಜಮೀನು ವರ್ಗಾವಣೆ ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಚೆಕ್ ಮಾಡುವುದು ಹೇಗೆ?
ರೈತರು ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/service40/PendcySurveyNoWiseRpt
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಭೂಮಿ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಯವರಾಗಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಂಡು ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಯಾವ ಸರ್ವೆ ನಂಬರ್ ಹಾಗೂ ಅಕ್ಕಪಕ್ಕದ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಿದರೆ ಸಾಕು, ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ನೀವು ನಮೂದಿಸಿದ ಸರ್ವೆ ನಂಬರ್ ಇತಿಹಾಸ (suvery number land history)
ನೀವು ನಮೂದಿಸಿ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಿಸ್ಸಾ ನಂಬರ್ ಗಳು, ಆ ಹಿಸ್ಸಾ ನಂಬರ್ ನಲ್ಲಿ ಜಮೀನು ಯಾವ ವರ್ಷ ಏನೇನು ಬದಲಾವಣೆಯಾಗಿದೆ? ಮುಟೇಶನ್ ನಂಬರ್ ಹಾಗೂ ಜಮೀನು ಬದಲಾವಣೆ ಹೇಗಾಗಿದೆ? ಅಂದರೆ ಪೋಡಿ ಮಾಡಲಾಗಿದೆಯೋ ಖಾತೆ ಬದಲಾವಣೆ ಮಾಡಲಾಗಿದೆಯೋ ಅಥವಾ ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ ಹಾಗೂ ಯಾವ ವರ್ಷ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.
ಸರ್ವೆ ನಂಬರ್ ಅಕ್ಕಪಕ್ಕದ ಮಾಹಿತಿ (survey number land information)
ರೈತರು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದ ಜಮೀನಿನ ಮಾಲಿಕರು ಯಾರು ಯಾರು ಇದ್ದಾರೆ. ಅವರ ಹೆಸರಿಗೆ ಎಷ್ಟೆಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯೂ ಸಿಗುತ್ತದೆ
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ
ನೀವು ನಮೂದಿಸಿ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಿಸ್ಸಾ ನಂಬರ್ ನಲ್ಲಿ ಖರಾಬು ಜಮೀನು ಎಷ್ಟಿದೆ ಹಾಗೂ ಜಮೀನು ಪಟ್ಟಾ, ಜಮೀನಿನ ನಮೂನೆಯ ಮಾಹಿತಿ ಸಿಗುತ್ತದೆ.
ಸರ್ವೆ ನಂಬರಿನಲ್ಲಿ ಯಾರು ಯಾರು ಸ್ವಾಧೀನದಾರರು ಇದ್ದಾರೆ?
ರೈತರು ನಮೂದಿಸಿ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಸ್ವಾಧೀನರಾಗಿದ್ದಾರೆ ಅವರ ಹೆಸರಿಗೆ ಎಷ್ಟೆಷ್ಟು ಜಮೀನಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.
ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ?
ನೀವು ನಮೂದಿಸಿ ಸರ್ವೆ ನಂಬರ್ ಹಾಗೂ ಅಕ್ಕಪಕ್ಕದ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಜಮೀನು ವರ್ಗಾವಣೆ ಮಾಡಿದವರು ಯಾರು ಎಷ್ಟು ಎಕರೆ ಜಮೀನು ವರ್ಗಾವಣೆ ಮಾಡಿದ್ದಾರೆ ಅಂದು ಹಕ್ಕು ಬದಲಾವಣೆ ಮಾಡಿದವರು ಹಕ್ಕು ಬದಲಾವಣೆ ಪಡೆದವರ ಮಾಹಿತಿ ಇರುತ್ತದೆ. ಜಮೀನು ಹಕ್ಕು ಬದಲಾವಣೆ ಪಡೆದವರ ಸಂಬಂಧ ಏನಾಗಿದೆ ಎಂಬ ಮಾಹಿತಿಯೂ ಲಭ್ಯವಿರುತ್ತದೆ. ಜಮೀನು ಜಂಟಿಯಾಗಿದ್ದರೂ ಯಾರ ಯಾರ ಹೆಸರಿಗೆ ಜಮೀನು ಜಂಟಿಯಾಗಿದೆ ಎಂಬ ಮಾಹಿತಿಯನ್ನು ನೋಡಬಹುದು.