ಇ- ಸಂಜೀವಿನಿ ಆ್ಯಪ್ ಬಳಸಿ ಉಚಿತವಾಗಿ ಚಿಕಿತ್ಸೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Written by By: janajagran

Published on:

ಕೋವಿಡ್ ಹಿನ್ನೆಲೆಯಲ್ಲಿ ಅನಗತ್ಯ ಆಸ್ಪತ್ರೆ ಭೇಟಿ ತಪ್ಪಿಸಲು ಕೇಂದ್ರ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಅನುಕೂಲವಾಗಲೆಂದು  ಇ-ಸಂಜೀವಿನಿ ಆರೋಗ್ಯ ಆ್ಯಪ್ ಆರಂಭಿಸಿದೆ. ಈ ಆ್ಯಪ್ ಸಹಾಯದಿಂದ ನಾಗರಿಕರು ಆಸ್ಪತ್ರೆಗೆ ಹೋಗದೆ ಮನೆಯಿಂದಲೇ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.  ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಮಾಹಿತಿ

ಸಾರ್ವಜನಿಕರು ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತು ಇತರೆ ರೋಗಗಳಿಂದ ಬಳಲುತ್ತಿದ್ದಲ್ಲಿ ಹಾಗೂ ಆಸ್ಪತ್ರೆಗೆ ತೆರಳಲು ಸಾಧ್ಯವಾಗದಿದ್ದರೆ ಚಿಂತಿಸದೇ ಟೆಲಿ ಮೆಡಿಸಿನ್ ಸೇವೆ ಪಡೆಯಬೇಕು. ತಜ್ಞ ವೈದ್ಯರು ಆನ್ ಲೈನ್ ನಲ್ಲಿ ಲಭ್ಯವಿದ್ದು ಚಿಕಿತ್ಸೆಗೆ ಸಲಹೆ ನೀಡಲಿದ್ದಾರೆ.

ಇ ಸಂಜೀವಿನಿ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?

ಗೂಗಲ್ ಪ್ಲೇ-ಸ್ಟೋರ್ ದಿಂದ ಇ-ಸಂಜೀವಿನಿ ಓಪಿಡಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.  ಅಥವಾ ಈ

https://play.google.com/store/apps/details?id=in.hied.esanjeevaniopd&hl=en_IN&gl=US ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೇಂದ್ರ ಸರ್ಕಾರದ ಇ ಸಂಜೀವಿನಿ ಆ್ಯಪ್‌ ಓಪನ್ ಆಗುತ್ತದೆ.  ಇಲ್ಲಿ ಇನ್ಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ಪೇಷೆಂಟ್ ರಿಜಿಸ್ಟ್ರೇಷನ್‌ನಲ್ಲಿ ತಮ್ಮ ಮೊಬೈಲ್ ನಂಬರ್ ನಮೂದಿಸಿದ್ದಲ್ಲಿ ಓ.ಟಿ.ಪಿ ಸಂಖ್ಯೆ ಬರುತ್ತದೆ. ಈ ಓ.ಟಿ.ಪಿ. ಸಂಖ್ಯೆಯನ್ನು ನಮೂದಿಸಿದ್ದಲ್ಲಿ ರಿಜಿಸ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ಬರಲಿದೆ.  ನಂತರ ವೆಬ್ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ತಮ್ಮ ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ ಕಾಯಿಲೆಗೆ ಚಿಕಿತ್ಸೆ ಬರೆದುಕೊಡಲಿದ್ದಾರೆ. ಆ ಮೂಲಕ ಆಸ್ಪತ್ರೆಯ ಕದ ತಟ್ಟದೇ, ಮನೆಯಿಂದಲೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.

ಏನಿದು ಇ-ಸಂಜೀವಿನಿ ಆ್ಯಪ್ ?

ಕೊರೋನಾ ತಡೆಗಟ್ಟಲು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಬೇಕೆಂಬ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ  ಆರೋಗ್ಯದ ತೊಂದರೆಗಳಿಗೆ ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್‌ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ (ಇ-ಸಂಜೀವಿನಿ) ಲಿಂಕ್ ಆ್ಯಪ್‌ನ್ನು ಸಿದ್ಧಪಡಿಸಿದೆ.

ಇದನ್ನೂ ಓದಿ : ಸಿಬಿಲ್ ಸ್ಕೋರ್ ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ ಕಾಲ್ ಮೂಲಕ ಸಂಪರ್ಕ:

ಟೋಕನ್ ನಂಬರ್ ಪಡೆದ ನಂತರ, ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯೂ ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಲಭ್ಯವಿರುತ್ತದೆ. ಒಮ್ಮೆ ರಿಜಿಸ್ಟರ್ ಆದರೆ ಮತ್ತೆ ಆಗುವ ಅಗತ್ಯವಿರುವುದಿಲ್ಲ. ವಿಡಿಯೋ ಕಾಲ್ ಮೂಲಕವೇ, ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ ಚಿಕಿತ್ಸೆಗೆ ಔಷಧ ಬರೆದುಕೊಡಲಿದ್ದಾರೆ.

Leave a Comment