ಸಿಬಿಲ್ ಸ್ಕೋರ್ ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಿ

Written by By: janajagran

Updated on:

Do you know how to check CIBIL score ವೈಯಕ್ತಿಕ ಸಾಲವಾಗಲಿ, ವಾಹನ, ಮನೆ ಖರೀದಿಗೆ ಸಾಲ ಪಡೆಯಬೇಕಾದರೆ ಬ್ಯಾಂಕಿನವರು ಮೊದಲು ನೋಡುವುದು ನಿಮ್ಮ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ಸಾಲ ಕೊಡುತ್ತಾರೆ. ಇಲ್ಲದಿದ್ದರೆ ನಿಮಗೆ ಸಾಲ ಕೊಡಲು ಮುಂದೆ ಬರುವುದುಲ್ಲ. ಹಾಗಾದರೆ ಸಿಬಿಲ್ ಸ್ಕೋರ್ ಎಂದರೇನು, ಸಿಬಿಲ್ ಸ್ಕೋರ್  ಹೆಚ್ಚಿಸಲು ಏನು ಮಾಡಬೇಕು. ಯಾವ ಬ್ಯಾಂಕಿನಲ್ಲಿ ಎಷ್ಟು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದು ಚೆಕ್ ಮಾಡಬೇಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್ ಹಾಗೂ ಬಜಾಜ್ ಫೈನಾನ್ಸ್, ಮಣಿಪುರ ಫೈನಾನ್ಸ್ ಸೇರಿದೆಂ ಇತರ ಖಾಸಗಿ ಫೈನಾನ್ಸ್ ಗಳು ಸಾಲ ಕೊಡುವುದಕ್ಕಿಂತ ಮುಂಚಿತವಾಗಿ ಚೆಕ್ ಮಾಡುವುದು ನಿಮ್ಮ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ಸಾಲ ನೀಡಲಾಗುವುದು.

ಸಿಬಿಲ್ ಸ್ಕೋರ್  ಎಂದರೇನು (What is CIBIL Score)?

ಸಿಬಿಲ್ (CIBIL) ಎಂಬುದು ಒಂದು ಸಂಸ್ಥೆಯಾಗಿದೆ. ಕ್ರೇಡಿಟ್ ಇನ್ಫಾರ್ಮೇಷನ್ ಬ್ಯೂರೋ ಇಂಡಿಯಾ ಲಿಮೆಟೆಡ್  ಸಂಸ್ಥೆಯು  ಬ್ಯಾಂಕುಗಳಿಂದ ಪ್ರತ್ಯೇಕವಾದ ಕಂಪನಿಯಾಗಿದೆ. ಇದು ವ್ಯಕ್ತಿ ಅಥವಾ ಸಂಸ್ಥೆಗಳ ಕ್ರೇಡಿಟ್ ದಾಕಲೆಗಳ ಸಂಗ್ರಹಣ ಮತ್ತು ನಿರ್ವಹಣೆ ಮಾಡುತ್ತದೆ. ಸಿಬಿಲ್ ಸಂಸ್ಥೆಯ ನೀಡುವ ವರದಿ ಆಧಾರದ ಮೇಲೆಯೇ ಬ್ಯಾಂಕುಗಳು ಸಾಲ ನೀಡುತ್ತವೆ.

Do you know how to check CIBIL score ಸಾಲ ಪಡೆಯಲು ಕ್ರೇಡಿಟ್ ಸ್ಕೋರ್ ಎಷ್ಟಿರಬೇಕು?

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಸಾಲ ಪಡೆಯಬೇಕಾದರೆ ಅವರ ಸಿಬಿಲ್ ಸ್ಕೋರ್ 700 ರಿಂದ 900 ವರೆಗೆ ಇರಬೇಕು. 800 ಗಿಂತ ಸಿಬಿಲ್ ಸ್ಕೋರ್ ಹೆಚ್ಚಿದ್ದರೆ ಸಾಲ ಅತೀ ಸುಲಭವಾಗಿ ಸಿಗುತ್ತದೆ. ಸಿಬಿಲ್ ಸ್ಕೋರ್ ನಾವು ಪಡೆದ ಸಾಲದ ಮರುಪಾವತಿಯ ಆಧಾರದ ಮೇಲೆ  ಆಗಾಗ ಬದಲಾವಣೆಯಾಗುತ್ತಲೇ ಇರುತ್ತದೆ. ಸಾಲ ತೆಗೆದುಕೊಳ್ಳುವ ಸಮಯದಲ್ಲಿರುವ ಕ್ರೇಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ಕೊಡಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನಿನ ಹಳೆಯ ಪಹಣಿ ಇಲ್ಲೇ ಚೆಕ್ ಮಾಡಿ

ಸಿಬಿಲ್ ಸ್ಕೋರ್ ದಿಂದ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಸಿಗುತ್ತದೆ

ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ಸಹಜವಾಗಿ ಬ್ಯಾಂಕುಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸಾಲ ಪಡೆದಿರುತ್ತಾನೆ. ಸಿಬಿಲ್ ಸ್ಕೋರ್ ಆಧಾರದ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ, ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬ ಮಾಹಿತಿ ಸಹ ಗೊತ್ತಾಗುತ್ತದೆ. ಇದಕ್ಕಾಗಿ  ಬ್ಯಾಂಕಿಗೆ ಹೋಗಬೇಕಿಲ್ಲ. ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಿಬಿಲ್ ಸ್ಕೋರ್ ನೋಡುವುದು ಹೇಗೆ? (How to check CIBIL Score)

https://homeloans.sbi/getcibil  ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಎಸ್.ಬಿ.ಐ ಬ್ಯಾಂಕಿನ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ.

  1. ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಬೇಕು.
  2. ಅಡ್ರೇಸ್ ಕಾಲಂನಲ್ಲಿ ರೆಸಿಡೆಂಟ್ ಅಥವಾ ಪರ್ಮನೆಂಟ್ ಅಡ್ರೆಸ್ ಭರ್ತಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸ ತುಂಬಬೇಕು.ರಾಜ್ಯ, ನಗರ ಆಯ್ಕೆ ಮಾಡಿಕೊಂಡು ಪಿನ್ ಕೋಡ್ ನಮೂದಿಸಬೇಕು.
  3. ಐಡೆಂಟಿ ಡಿಟೇಲ್ ನಲ್ಲಿ ಪ್ಯಾನ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಪ್ಯಾನ್ ಕಾರ್ಡ್ ನಮೂದಿಸಬೇಕು. ಕಾಂಟ್ಯಾಕ್ಟ್ ಡಿಟೇಲ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮೇಲ್ ಐಡಿ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಬೇಕು. ಆಗ ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ಓಪನ್ ಮಾಡಲು ಪಾಸ್ವರ್ಡ್ ನಿಮ್ಮ ಮೊಬೈಲಿಗೆ ಬರುತ್ತದೆ. ಅದನ್ನು ನಮೂದಿಸಿದರೆ ಸಾಕು, ಸಿಬಿಲ್ ಸ್ಕೋರ್ ಪೇಜ್ ಓಪನ್ ಆಗುತ್ತದೆ. ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರೋ ಎಲ್ಲಾ ಮಾಹಿತಿಯು ಕಾಣುತ್ತದೆ.

ಇದನ್ನೂ ಓದಿ : ಬೆಳೆವಿಮೆ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಹೆಚ್ಚಿಸಲೇನು ಮಾಡಬೇಕು.?

ನೀವು ಸದ್ಯ ಸಾಲ ಪಡೆದಿದ್ದರೆ  ಸರಿಯಾದ ಸಮಯಕ್ಕೆ ಇಎಮ್ಐಗಳನ್ನು ಕಟ್ಟಬೇಕು. ಬ್ಯಾಂಕಿನಂಲ್ಲಿ ಎಫ್ ಡಿ ಮಾಡಿ ಅದರ ಮೇಲೆ ಸಾಲದ ಅಗತ್ಯವಿದ್ದರೆ ಪಡೆದು  ಸರಿಯಾದ ಸಮಯಕ್ಕೆ ಕಟ್ಟಬೇಕು. ಇಎಮ್ಐ ಗಳನ್ನು ಸರಿಯಾದ ಸಮಯಕ್ಕೆ  ಕಂತುಗಳನ್ನು ಕಟ್ಟಿದರೆ ತಂತಾನೆ  ಕ್ರೇಡಿಟ್ ಸ್ಕೋರ್ ಹೆಚ್ಚಾಗುತ್ತದೆ.

Leave a Comment