ರೈತರು ತಮ್ಮ ಜಮೀನಿನ ಪಹಣಿಗಳನ್ನು ಮೊಬೈಲ್ ನಲ್ಲೇ ನೋಡಬಹುದು. ಹೌದು, 10 ವರ್ಷಕ್ಕಿಂತ ಹಳೆಯ ಪಹಣಿಗಳನ್ನು ಸಹ ಮೊಬೈಲ್ ನಲ್ಲೇ ನೋಡಬಹುದು. ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಹಳೆಯ ಪಹಣಿಗಳನ್ನು ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಜಮೀನಿನ ದಾಖಲೆಗಳನ್ನು ಪಡೆಯಲು ರೈತರೀಗ ತಹಶೀಲ್ದಾರ್ ಕಚೇರಿಗಳ ಮುಂದೆ ಗಂಟೆಗಟ್ಟಲೇ ನಿಲ್ಲಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ದಾಖಲೆಗಳನ್ನು ಪಡೆಯಲು ಸರ್ಕಾರವು ಭೂಮಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ರೈತರು ಜಮೀನಿನ ಪಹಣಿ, ಮುಟೇಶನ್ ಪ್ರತಿ, ಖಾತಾ, 11ಇ, ಪೋಡಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಆನ್ಲೈನ್ ನಲ್ಲೇ ಪಡೆಯಬಹದು. ಹಳೆಯ ಪಹಣಿಗಳಲ್ಲಿ ಯಾರ ಹೆಸರಿತ್ತು, ಯಾರ ಹೆಸರಿನಿಂದ ವರ್ಗಾವಣೆಯಾಗಿದೆ. ಈಗ ಯಾರ ಹೆಸರಿಗೆ ಪಹಣಿಯಿದೆ ಎಂಬುದನ್ನು ರೈತರು ನೋಡಬಹುದು. ಪಹಣಿಯ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಸಹ ಚೆಕ್ ಮಾಡಬಹುದು.
ರೈತರು ಹಳೆ ಪಹಣಿಗಳನ್ನು ನೋಡುವುದು ಹೇಗೆ?
ರೈತರು ಹಳೆಯ ಪಹಣಿಗಳನ್ನು ಮೊಬೈಲ್ ನಲ್ಲೇ ನೋಡಬೇಕಾದರೆ ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಜಮೀನಿನ ಪಹಣಿ ನೋಡುವ ಭೂಮಿ ತಂತ್ರಾಂಶದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.
ಸರ್ವೆ ನಂಬರ್ ನಮೂದಿಸಿದ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ surnoc ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ಗೊತ್ತಿರದಿದ್ದರೆ ಅಲ್ಲಿ ಕಾಣುವ ಹಿಸ್ಸಾ ನಂಬರ್ ಒಂದೊಂದಾಗಿ ಕ್ಲಿಕ್ ಮಾಡಿ ಚೆಕ್ ಮಾಡಬಹುದು. ಪೀರಿಯಡ್ ನಲ್ಲಿ ಯಾವ ವರ್ಷದಿಂದ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ವರ್ಷದಲ್ಲಿಯೂ ಸಹ ಯಾವ ವರ್ಷದಿಂದ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಗ ಜಮೀನಿನ ಮಾಲೀಕರಹೆಸರು ಕಾಣುತ್ತದೆ. ಅದರ ಮುಂದುಗಡೆ ಗ್ರಾಮ ಸರ್ವೆ ನಂಬರ್, ಸರ್ನೋಕ್, ಹಿಸ್ಸಾ ನಂಬರ್ ಕಾಣುತ್ತದೆ. ಯಾವ ವರ್ಷದ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಆ ವರ್ಷ ಕಾಣುತ್ತದೆ. View ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಜಮೀನನ ಪಹಣಿ ತೆರೆದುಕೊಳ್ಳುತ್ತದೆ. ಅಲ್ಲಿ ಆ ಸರ್ವೆ ನಂಬರಿನಲ್ಲಿಒಟ್ಟು ಎಷ್ಟು ಎಕರೆ ಜಮೀನು ಇದೆ. ಕಬ್ಜೆ ಅಥವಾ ಸ್ವಾಧೀನದಾರರ ಹೆಸರು ತಂದೆಯಹೆಸರು ಇರುತ್ತದೆ. ಜಮೀನು ಯಾರು ಯಾರಿಗೆ ಎಷ್ಟು ಎಕರೆಯಲ್ಲಿ ವಿಂಗಡನೆಯಾಗಿದೆ. ಹಾಗೂ ಜಂಟಿಯಾಗಿದೆಯೋ ಅಥವಾ ಪ್ರತ್ಯೇಕವಾಗಿ ಅವರವರ ಹೆಸರಿಗಿದೆಯೋ ಎಂಬುದು ಸಹ ಕಾಣುತ್ತದೆ. ಇದೇ ರೀತಿ ನೀವು ಯಾವ ವರ್ಷದ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ ನಿಮ್ಮ ಮಗುವಿನ ಹೆಸರಿಗೆ ಎಷ್ಟು ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಇದನ್ನುಕೇವಲ ನೋಡುವುದಕ್ಕಾಗಿ ಮಾಡಲಾಗಿದೆ. ಡೌನ್ಲೋಡ್ ಮಾಡಬೇಕಾದರೆ ಪಹಣಿ ಶುಲ್ಕ ಪಾವತಿಸಿ ಓರಿಜಿನಲ್ ಪಹಣಿ ಡೌನ್ಲೋಡ್ ಮಾಡಿಕೊಳ್ಳಬಹುದು. ರೈತರಿಗೆ ಅನುಕೂಲವಾಗಲೆಂದು ಸರ್ಕಾರವು ಈ ವ್ಯವಸ್ಥೆ ಮಾಡಿದೆ.
ರಾಜ್ಯ ಸರ್ಕಾರವು ಇತ್ತೀಚೆಗೆ ರೈತರಿಗೆ ಅನುಕೂಲವಾಗಲೆಂದು 11ಇ, ಪೋಡಿ, ಹದ್ದುಬಸ್ತು ನಕ್ಷೆಗಳನ್ನು ಆನ್ಲೈನ್ ನಲ್ಲೇ ಸ್ವಾವಲಂಬಿ ಆ್ಯಪ್ ಸಹಾಯದಿಂದ ನಕ್ಷೆ ತಯಾರಿಸುವ ವ್ಯವಸ್ಥೆಯನ್ನು ಸಹ ಮಾಡಿದೆ. ರೈತರು ಓರಿಜಿನಲ್ ಪಹಣಿಯನ್ನು ಎಲ್ಲಿ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ದೇಶದಲ್ಲಿಯೇ ಮೊದಲ ರಾಜ್ಯ ಕರ್ನಾಟಕವಾಗಿದೆ.