ನಿಮ್ಮ ಸರ್ವೆ ನಂಬರ್ ನಲ್ಲಿ ಬರುವ ರೈತರಿಗೆ ಎಷ್ಟು ಎಕರೆ ಜಮೀನಿದೆ?

Written by Ramlinganna

Published on:

ರೈತರು ತಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಯಾರು ಯಾರು ಮಾಲೀಕರಿದ್ದಾರೆ ( Land Owner name check )? ಬೇಸಾಯದ ವಿವರಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಇತ್ತೀಚೀಗೆ ತಾಂತ್ರೀಕತೆ ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಮಾಹಿತಿಗಳನ್ನು ನೋಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ರೈತರೇ ಸ್ವತಃ ನೋಡಬಹುದು.

ರಾಜ್ಯ ಸರ್ಕಾರವು ರೈತರಿಗೆ ತಮ್ಮ ಜಮೀನಿನ ಕುರಿತು ಮಾಹಿತಿ ಮನೆಯಲ್ಲಿಯೇ ಕುಳಿತು ತಾವು ಬೇಕೆಂದಾಗ ವೀಕ್ಷಿಸಲು ವ್ಯವಸ್ಥೆ ಮಾಡಿದೆ. ಹೌದು, ಭೂಮಿ ತಂತ್ರಾಂಶದಲ್ಲಿ ರೈತರಿಗೆ ಸರ್ವ ಮಾಹಿತಿಯೂ ಸಿಗಲಿದೆ. ಜಮೀನಿನ ಪಹಣಿ, ಮುಟೇಶನ್, ಮೋಜಿನಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರು ಮನೆಯಲ್ಲೇ ವೀಕ್ಷಿಸಬಹುದು.

ರೈತರು ತಾವು ನಮೂದಿಸಿದ ಸರ್ವೆ ನಂಬರಿನಲ್ಲಿ ಭೂವಿವರ, ಮಾಲೀಕರ ವಿವರ ಹಾಗೂ ಭೂ ಹಿಡುವಳಿಯ ವಿವರಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/service53/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ survey No wise, Owner wise ಹಾಗೂ Registration Number ಎಂಬ ಮೂರು ಆಪಶನ್ ಕಾಣುತ್ತದೆ. ಅಲ್ಲಿ ನೀವು survey No wise ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಇನ್ನೂ ಕೆಲವು ಆಪಶನ್ ನಿಮಗೆ ಕಾಣುತ್ತದೆ. ಅಲ್ಲಿ ರೈತರು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.

ಸರ್ವೆ ನಂಬರ್ ನಮೂದಿಸಿದ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಸರ್ನೋಕ್ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಕೆಳಗಡೆ ಇನ್ನೂ ಮೂರು ಆಪಶನ್ ಕಾಣುತ್ತದೆ. View land Data, View Mutation Data ಹಾಗೂ View Dispute Case Information ಎಂಬ ಮೂರು ಆಪಶನ್ ಕಾಣುತ್ತದೆ. ಅಲ್ಲಿ ನೀವು View Land Data ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನೀವು ಮುಟೇಶನ್ ಡಿಟೇಲ್ ನೋಡಬೇಕೆಂದುಕೊಂಡಿದ್ದರೆ  View Mutation Data ಮೇಲೆ ಕ್ಲಿಕ್ ಮಾಡಬೇಕು.

Land Owner name check ಜಮೀನಿನ ಮಾಹಿತಿ ಸಿಗಲಿದೆ

ಇಲ್ಲಿ ನೀವು ನಿಮ್ಮ ಜಮೀನಿನ ವಿವರಗಳನ್ನು ನೋಡುತ್ತಿದ್ದರಿಂದ ವೀವ್ ಲ್ಯಾಂಡ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊದಲು ಲ್ಯಾಂಡ್ ಡಿಟೇಲ್ಸ್ ಕಾಣುತ್ತದೆ.

ಇದನ್ನೂ ಓದಿ :ಪಿಎಂ ಕಿಸಾನ್ ರೈತರಿಗೆ ಈ ಮೆಸೆಜ್ ಬಂದರೆ ಮಾತ್ರ 12ನೇ ಕಂತಿನ ಹಣ ಜಮೆ-ಯಾವ ಮೆಸೆಜ್ ಬರಬೇಕು? ಇಲ್ಲಿದೆ ಮಾಹಿತಿ

ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಒಟ್ಟು ಎಷ್ಟು ಎಕರೆ ಮತ್ತು ಗುಂಟೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಇದರೊಂದಿಗೆ ಖರಾಬು ಜಮೀನಿನ ಮಾಹಿತಿಯೂ ಇರುತ್ತದೆ.

Land Owner name check ಜಮೀನಿನ ಮಾಲೀಕರ ಯಾರು ಯಾರಿದ್ದಾರೆ?

ಎರಡನೇ ಕಾಲಂನಲ್ಲಿ  ಆ ಸರ್ವೆ ನಂಬರಿನಲ್ಲಿ ಜಮೀನಿನ ಮಾಲೀಕರ ಯಾರ ಯಾರ ಹೆಸರಿದೆ.ಅವರಿಗೆ ಎಷ್ಟುಎಕರೆ ಜಮೀನಿದೆ? ಖಾತಾ ನಂಬರ್ ಹಾಗೂ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇರುತ್ತದೆ.

ನೀವು ಪ್ರಸಕ್ತ ಸಾಲಿನಲ್ಲಿ ಯಾವ ಯಾವ ಬೆಳೆ ಬಿತ್ತಿದ್ದೀರಿ?

ಜಮೀನು ಬೇಸಾಯದ ವಿವರದಲ್ಲಿ ನೀವು ನಮೂದಿಸಿ ಸರ್ವೆ ನಂಬರಿನಲ್ಲಿರುವ ಭೂ ಮಾಲಿಕರು ಪ್ರಸಕ್ತ ವರ್ಷ ಅಂದರೆ ಮುಂದಾರು ಹಂಗಾಮಿಗೆ ಯಾವ ಬೆಳೆ ಹಾಕಿದ್ದಾರೆ? ಎಷ್ಟು ಎಕರೆ ಜಮೀನಿಗೆ ಯಾವ ಬೆಳೆ ಬಿತ್ತಲಾಗಿದೆ ಎಂಬ ಮಾಹಿತಿ ರೈತರಿಗೆ ಕಾಣುತ್ತದೆ. ನೀರಾವರಿ ಮೂಲ ಹಾಗೂ ಮಿಶ್ರ ಬೆಳೆಯಿದ್ದರೆ ಯಾವ ಬೆಳೆ ಬಿತ್ತನೆ ಮಾಡಲಾಗಿದೆ ಎಂಬ ಮಾಹಿತಿಯೂ ರೈತರಿಗೆ ಕಾಣಲಿದೆ. ಇದು ರೈತರಿಗೆ ತುಂಬಾ ಉಪಯೋಗಕಾರಿ ಮಾಹಿತಿ ನೀಡುತ್ತದೆ.

Leave a Comment