ಪಿಎಂ ಕಿಸಾನ್ ರೈತರಿಗೆ ಈ ಮೆಸೆಜ್ ಬಂದರೆ ಮಾತ್ರ 12ನೇ ಕಂತಿನ ಹಣ ಜಮೆ-ಯಾವ ಮೆಸೆಜ್ ಬರಬೇಕು? ಇಲ್ಲಿದೆ ಮಾಹಿತಿ

Written by Ramlinganna

Updated on:

ಪಿಎಂ ಕಿಸಾನ್ ಯೋಜನೆಯ 12ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಈ ಮೆಸೆಜ್ ಬಂದರೆ ಮಾತ್ರ ಹಣ ಜಮೆಯಾಗುತ್ತದೆ. ಹಾಗಾದರೆ ಯಾವುದು ಅದು ಮಹತ್ವದ ಮಾಹಿತಿ  ಅಂದುಕೊಂಡಿದ್ದೀರಾ.. ಇಲ್ಲಿದೆ ಮಾಹಿತಿ. ಪಿಎಂ ಕಿಸಾನ್ ಹಣ ಜಮೆಯಾಗಲು ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದ್ದರಿಂದ ಮುಂದಿನ ಕಂತು ಯಾವ ರೈತರಿಗೆ ಬರುತ್ತೋ ಯಾವ ರೈತರಿಗೆ ಬರಲ್ವೋ ಎಂಬ ಕುತೂಹಲ ಹೆಚ್ಚಾಗಿದೆ

ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ನಿಜವಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಸಿಗಲೆಂಬ ಉದ್ದೇಶದಿಂದ ರೈತರು ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಕಳೆದ 11ನೇ ಕಂತಿನಲ್ಲಿಇಕೆವೈಸಿ ಮಾಡಿಸದ ರೈತರಿಗೂ ಪಿಎಂ ಕಿಸಾನ್ ಹಣ ಜಮೆಯಾಗಿತ್ತು. ಆದರೆ 12ನೇ ಕಂತಿನ ಹಣ ಇಕೆವೈಸಿ ಮಾಡಿಸದ ರೈತರಿಗೆ ಜಮೆಯಾಗುವುದಿಲ್ಲ. ಇಕೆವೈಸಿ ಮಾಡಿಸದೆ ಇರುವ ರೈತರಿಗೆ ಯೋಜನೆಯ ಹಣ ತಡೆಹಿಡಿಯುವ ಸಾಧ್ಯತೆಯಿದೆ. ಹಾಗಾಗಿ ಆಗಸ್ಟ್ 31 ರೊಳಗೆ ಯಾವ ರೈತರು ಇಕೆವೈಸಿ ಮಾಡಿಸಿಲ್ಲವೋ ಅಂತಹವರು ಆಗಸ್ಟ್ 31 ರೊಳಗಾಗಿ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಕೊಳ್ಳಬಹುದು.

ಯಾವ ಮೆಸೆಜ್ ಬಂದರೆ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಜಮೆಯಾಗಲು ಇಕೆವೈಸಿ ಮಾಡಿಸುವಾಗ ರೈತರಿಗೆ EKyc  has been done successfully  ಎಂಬ ಮೆಸೇಜ್ ಬರಬೇಕು. ಅಥವಾ ಇಕೆವೈಸಿ ಮಾಡಿಸಿದ್ದರೆ  EkYC is already done ಎಂಬ ಮೆಸೆಜ್ ಕಂಡರೆ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿದೆ ಎಂದರ್ಥ. ಹಾಗಾದರೆ ಇದನ್ನು ನೋಡುವುದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಮಾಹಿತಿ.

ಇಕವೈಸಿ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಆಗಿರುವುದನ್ನು ಚೆಕ್ ಮಾಡಲು ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ನಮೂದಿಸಿದ ನಂತರ ನಿಮಗೆ EkYC is already done ಎಂಬ ಮೆಸೆಜ್ ಕಂಡರೆ ನೀವು ಇಕೆವೈಸಿ ಮಾಡಿಸಿದ್ತೀರೆಂದರ್ಥ.  ಹಾಗಾಗಿ ಈ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುತ್ತದೆ.

ಒಂದು ವೇಳೆ ನೀವು ಇನ್ನೂ ಇಕೆವೈಸಿ ಮಾಡಿಸಿಲ್ಲವೆಂದರೆ ಏನು ಮಾಡಬೇಕು?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಒಂದು ವೇಳೆ ಇಕೆವೈಸಿ ಮಾಡಿಸದೆ ಇದ್ದರೆ

ಪಿಎಂ ಕಿಸಾನ್ ಯೋಜನೆಯ ಓಟಿಪಿ ಬೇಸಡ್ ಇಕೈಸಿ ಮಾಡಿಸಬೇಕು. ರೈತರು ಈ

https://pmkisan.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ eKYC New ಬಾಕ್ಸ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.

ಆಗ ಪಿಎಂ ಕಿಸಾನ್ ಯೋಜನೆಯ ಓಟಿಪಿ ಬೇಸ್ಡ್ ಇಕೆವೈಸಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.. ನಂತರ ಆಧಾರ್ ಕಾರ್ಡ್ ನೋಂದಣಿಗೆ ನೀಡಲಾದ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಗೆಟ್ ಮೊಬೈಲ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ನಾಲ್ಕು ಅಂಕಿಗಳ ಒಂದು ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಸಬ್ಮಿಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.

ಆಮೇಲೆ ಗೆಟ್ ಆಧಾರ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಮತ್ತೇ ಓಟಿಪಿ ಬರುತ್ತದೆ. ಅದನ್ನು ಅಲ್ಲಿನಮೂದಿಸಿದ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ EKYC has been done successfully ಎಂಬ ಮೆಸೆಜ್ ಬರುತ್ತದೆ.

ಆಗ ನಿಮ್ಮ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಯಶಸ್ವಿಯಾಗಿದೆ ಎಂದರ್ಥ. ಒಂದು ವೇಳ ನೀವು ಇನ್ನೂ ಇಕೆವೈಸಿ ಮಾಡಿಸಿಲ್ಲವೆಂದರೆ ಕೂಡಲೇ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಕೊಳ್ಳಬಹುದು. ಇದು ತುಂಬ ಸರಳವಾಗಿರುವುದರಿಂದ ರೈತರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಂಬರಿನಲ್ಲಿ ಇಕೆವೈಸಿ ಮಾಡಿಕೊಳ್ಳಬಹುದು.

Leave a comment