ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ನೀರಾವರಿ ಘಟಕ ಅಳವಡಿಕೆಗೆ ಶೇ. 90 ರಷ್ಟು ಸಹಾಯಧನ ನೀಡಲು ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮುಖಾಂತರ ತೋಟಗಾರಿಕೆ ಬೆಳೆಗಳಾದ ಹಣ್ಣು ತರಕಾರಿ, ಹೂವು ಪ್ಯಾಂಟೇಶನ್ ಬೆಳೆಗಳು, ಔಷಧ ಸುಗಧ ಸಸ್ಯಗಳು, ಹಾಗೂ ಸಾಂಬಾರು ಬೆಳೆಗಳಿಗೆ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಹಾಗೂ ಲಕ್ಷ್ಮೇಶ್ವರ ತಾಲೂಕಿನ ರೈತರು ತೋಟಗಾರಿಕೆ ಇಲಾಖೆಯ ವತಿಯಿಂದ ಅನುಮೋದನೆಗೊಂಡ ಕಂಪನಿಯಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬಹುದು. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ. 75 ರಷ್ಟು ಹಾಗೂ 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ. 90 ರಷ್ಟು ಹಾಗೂ 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತಿಯುಳ್ಳ ರೈತರು ಕೊಳವೆಬಾವಿ ಹೊಂದಿರಬೇಕು. ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ರೈತರು ಇದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಶಿರಹಟ್ಟಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ಸಹಾಯಧನ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮೀಣ ಾಗದಲ್ಲಿ ಮಾವು, ತೆಂಗು, ಪೇರಲ, ದ್ರಾಕ್ಷಿ, ದಾಳಿಂಬೆ, ಬಾಳೆ, ಪಪ್ಪಾಯ, ನಿಂಬೆ, ಸೀತಾಫಲ, ಅಂಜೂರ, ನೇರಳೆ, ಬಾರೆ, ಡ್ರ್ಯಾಗನ್ ಹಣ್ಣು, ಗೋಡಂಬಿ, ವೀಳ್ಯದೆಲೆ, ಹುಣಸೆ, ಕರಿಬೇವು ಬೆಳೆಗಳ ಪ್ರದೇಶ ವಿಸ್ತರಣೆಗೆ ಹಾಗೂ ಮಣ್ಣು ಸಂರಕ್ಷಣಾ ಕಾಮಗಾರಿಗಳನ್ನು ತಮ್ಮ ತೋಟಗಳಲ್ಲಿ ಕೈಗೊಳ್ಳಲು ಜಿಲ್ಲೆಯ ರೈತ ಬಾಂಧವರಿಗೆ ಉತ್ತಮ ಅವಕಾಶವಿದೆ.
ಇದನ್ನೂ ಓದಿ : ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದ ಯಾವ ಮಾಲಿಕರಿಗೆ ಎಷ್ಟು ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳ ಆಸಕ್ತ ರೈತ ಬಾಂಧವರು ಅರ್ಜಿ ಸಲ್ಲಿಸಲು ಸಮೀಪದ ಗ್ರಾಮ ಪಂಚಾಯತ ಅಥವಾ ತೋಟಗಾರಿಕೆ ಕಚೇರಿಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಅನುಷ್ಠಾನವಾಗಲಿರುವ ವಿವಿಧ ಇಲಾಖಾ ಕಾರ್ಯಕ್ರಮಗಳಡಿ ಚಿಕ್ಕಮಗಳೂರು ಜಿಲ್ಲೆಯ ತರಕೇರಿ, ಅಜ್ಜಂಪುರ ತಾಲೂಕಿನ ಆಸಕ್ತ ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯತಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸುರಂಗ ಮಾದರಿಯ ಪಾಲಿಹೌಸ್, ಪುನೇಟ್ ಬಾಕ್ಸ್, ಪ್ಲಾಸ್ಟಿಕ್ ಕ್ರೇಟ್ಸ್, ನೀರಿನಲ್ಲಿ ಕರಗುವ ರಸಗೊಬ್ಬರ, ಲಘು ಪೋಷಕಾಂಶಗಳ ಮಿಶ್ರಣ, ಬೆಳೆ –ಹಣ್ಣು, ಹೂವು ಹೊದಿಕೆ, ಮೋಹಕ ಕೀಟ ಬಲೆಗಳು, ಜಿಗುಟಾದ ಬಲೆಗಳು, ತೆಂಗು ಶೇಖರಣಾ ಘಟಕ, ಸೌರಶಕ್ತಿ ಆಧಾರಿತ ಕೃತಕ ಬುದ್ಧಿಯ ಕೀಟ ನಿಯಂತ್ರಕ ಬಲೆಗಳು ಹಾಗೂ ತಾಳೆಗಿಡ ಹಾಕಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂಓದಿ : ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಈ ದಿನ ಬಿಡುಗಡೆ- ನಿಮ್ಮ ಹೆಸರು ಮೊಬೈಲ್ ನಲ್ಲೆ ಚೆಕ್ ಮಾಡಿ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಈಗಾಗಲೇ ಸಹಾಯಧನ ಪಡೆದು 7 ವರ್ಷವಾಗಿದ್ದ ರೈತರು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು. ಇತರ ಪಂಗಡದ ರೈತರಿಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು. ಕಚೇರಿಯಂದ ರೈತರು ಅರ್ಜಿ ಪಡೆದು ಡಿಸೆಂಬರ್ 17 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಸಲ್ಲಿಸುವ ರೈತರು ನೀರಾವರಿ ಸೌಲಭ್ಯ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ (ಆರ್.ಟಿ.ಸಿ) ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಇರಬೇಕು.