These subsidy facilities available : ರೈತರಿಗೆ ಕೃಷಿ ಇಲಾಖೆಯಿಂದ ದೊರಕು ಸೌಲಭ್ಯಗಳಂತೆ ಈಗ ತೋಟಗಾರಿಕೆ ಇಲಾಖೆಯಿಂದಲೂ ಬಿತ್ತನೆಯಿಂದ ಹಿಡಿದು ಕೊಯ್ಲುವರೆಗೆ ಬೇಕಾಗುವ ವಿವಿಧ ಕೃಷಿ ಯಂತ್ರೋಪಕರಣಗಳು ಸಿಗುತ್ತವೆ.
ಹೌದು, ರೈತರಿಗಾಗಿ ಈಗಾಗಲೇ ಹಲವಾರು ಯೋಜನೆಗಳನ್ನುಜಾರಿಗೆ ತರಲಾಗಿದೆ. ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗುವುದು. ಹಾಗಾದರೆ ಇಂದು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಯಾವ ಯಾವ ಸೌಲಭ್ಯಗಳು ಸಿಗುತ್ತವೆ. ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
These subsidy facilities available ತೋಟಗಾರಿಕೆಯಲ್ಲಿ ಯಾಂತ್ರೀಕರಣ
ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡಲಾಗುವುದು. ಹೌದು, 20 ಹೆಚ್.ಪಿವರೆಗೆ ಟ್ರ್ಯಾಕ್ಟರ್ ಖರೀದಿಗೆ ಸುಮಾರು 1ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು. ಸಾಮಾನ್ಯ ರೈತರಿಗೆ ಶೇ. 25 ರಂತೆ 75 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ಹಾಗೂ ಮಹಿಳೆಯರಿಗೆ ಶೇ. 35 ರಂತೆ ಗರಿಷ್ಠ 1 ಲಕ್ಷ ರೂಪಾಯಿ ಸಬ್ಸಿಡಿನೀಡಲಾಗುವುದು.
ಪವರ್ ಟಿಲ್ಲರ್ ಖರೀದಿಗೆ ಸಬ್ಸಿಡಿ
8 ಹೆಚ್.ಪಿ ಗಿಂತ ಕಡಿಮೆಯಿರುವ ಪವರ್ ಟಿಲ್ಲರ್ ಖರೀದಿಗೂ ಸಬ್ಸಿಡಿ ನೀಡಲಾಗುವುದು. ಹೌದು, ಸಾಮಾನ್ಯ ರೈತರಿಗೆ ಶೇ. 40 ರಷ್ಟು ಸಬ್ಸಿಡಿ ಅಂದರೆ 40 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ಇದನ್ನೂ ಓದಿ : ರೈತರ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಇಲ್ಲೇ ಚೆಕ್ ಮಾಡಿ
ಅದೇ ರೀತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ಹಾಗೂ ಮಹಿಳೆಯರಿಗೆಶೇ. 50 ರಷ್ಟು ಅಂದರೆ 50 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ಪಾಲಿ ಹೌಸ್ ನಿರ್ಮಾಣಕ್ಕೆ ಸಬ್ಸಿಡಿ
ಸಂರಕ್ಷಿತ ಬೇಸಾಯಯಡಿ ಪಾಲಿ ಹೌಸ್ ನಿರ್ಮಾಣಕ್ಕೆ ಪ್ರತಿ ಫಲಾನುಭವಿ ರೈತರಿಗೆ 798 ರಿಂದ 1094 ರೂಪಾಯಿ ಪ್ರತಿ ಚದರ ಮೀಟರ್ ನಂತೆ ಗರಿಷ್ಠ 4 ಸಾವಿರ ಚದರ್ ಮೀಟರ್ ವರೆಗೆ ಸಬ್ಸಿಡಿ ನೀಡಲಾಗುವುದು.
ನೆರಳು ಪರದೆ ನಿರ್ಮಾಣ
ನೆರಳು ಪರದೆ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ 394 ರೂಪಾಯಿಯಂತೆ ಪ್ರತಿ ಚದರ್ ಮೀಟರ್ ಗೆ 4 ಸಾವಿರ ಚದರ್ ಮೀಟರ್ ವರೆಗೆ ಸಬ್ಸಿಡಿ ನೀಡಲಾಗುವುದು.
ಪಕ್ಷಿ ನಿರೋಧಕ ಬಲೆ
ಪಕ್ಷಿ ನಿರೋಧಕ ಬಲೆಗೆ ಪ್ರತಿ ಫಲಾನುಭವಿಗೆ 10 ರೂಪಾಯಿ ಚದರ್ ಮೀಟರ್ ರಂತೆ ಗರಿಷ್ಠ 5 ಸಾವಿರ ರೂಪಾಯಿಯವರೆಗೆ ಒಟ್ಟು 50 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ವೈಯಕ್ತಿಕ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ
ವೈಯಕ್ತಿಕ ಕೃಷಿ ಹೊಂಡ (20 ಮೀ* 20 ಮೀ* 3 ಮೀ) ನಿರ್ಮಾಣಕ್ಕೆ ಗರಿಷ್ಠ75 ಸಾವಿರ ರೂಪಾಯಿ ಸಬ್ಸಿಡಿ ನೀಡಲಾಗುವುದು. ಅದೇ ರೀತಿ ಸಮುದಾಯ ನೀರು ಸಂಗ್ರಹಣ ಘಟಕ 6000 ಘನ ಮೀಟರ್್ ಗೆ ಸಮುದಾಯ ಕೆರೆ ನಿರ್ಮಾಣಕ್ಕೆ ಗರಿಷ್ಠ 4 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುವುದು.
ಹನಿ ನೀರಾವರಿಗೆ ಸಬ್ಸಿಡಿ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶಕ್ಕೆಹಾಗೂ ತರಕಾರಿ ಮತ್ತು ವಾಣಿಜ್ಯಹೂವು ಬೆಳೆಗಳಿಗೆ 2 ಹೆಕ್ಟೇರ್ ಪ್ರದೇಶಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಮೊದಲ 2 ಹೆಕ್ಟೇರ್ ಪ್ರದೇಶಕ್ಕೆ ಇತರ ವರ್ಗದ ರೈತರಿಗೆ ಶೇ. 75 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
ರೈತರು ಆಯಾ ಜಿಲ್ಲಾವಾರು ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು.