ಮಾರ್ಚ್ 5 ರಿಂದ 7 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ

Written by Ramlinganna

Published on:

National Horticulture fair ಮಾರ್ಚ್ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿಸಲಾಗಿದೆ.

ಹೌದು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್ಆರ್) ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು ಶೀರ್ಷಿಕೆಯಡಿ ಮಾರ್ಚ್ 5 ರಿಂದ 7ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಆಯೋಜಿಸಲಾಗಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ಈ ವಿಷಯ ತಿಳಿಸಿದ ಸಂಸ್ಥೆ ಪ್ರಭಾರ ನಿರ್ದೇಶಕ ಡಾ. ಪ್ರಕಾಶ ಪಾಟೀಲ್, ಮೇಳದಲ್ಲಿ ಬಿಇಎಲ್ ಸಂಸ್ಥೆಯ ಡ್ರೋನ್, ಅಧಿಕ ಇಳುವರಿ ಕೊಡುವ ಅರ್ಕಾ ನಿಹಿರ ಮೆಣಸಿನಕಾಯಿ ತಳಿ ಐಐಎಚ್ಆರ್ ಅಭಿವೃದ್ಧಿಪಡಿಸಿರುವ ಈರುಳ್ಳಿ ನಾಟಿ ಮಾಡುವ ಯಂತ್ರ, ಯುವಿಬಿ ಲೈಟ್ ಅಡಿಯಲ್ಲಿ ಅವಿಷ್ಕರಿಸಿದ ಅಣಬೆಗಳ ವಿಟಮಿನ್ ಡಿ ಪುಷ್ಟಿಕರಣ ತಂತ್ರಜ್ಞಾನ ಸೇರಿದಂತೆ ನಾನಾ ವಿಶೇಷಗಳು ಇರಲಿವೆ ಎಂದರು.

ಮೇಳಕ್ಕೆ ಮಾರ್ಚ್ 5ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಾಗುವುದು. ಈ ಬಾರಿ ದೇಶದ 50 ಸಾವಿರಕ್ಕೂಹೆಚ್ಚು ರೈತರು ಆಗಮಿಸುವರು. 350 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಮೇಳಕ್ಕೆ ಬರುವ ರೈತರಿಗೆ ಊಟ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

National Horticulture fair ನಲ್ಲಿ ಹೊಸ ತಂತ್ರಜ್ಞಾನಗಳು

ಅರ್ಕಾ ಲಂಬ ಮಾದರಿ, ಅರ್ಕಾ ಕತ್ತರಿಸಿದ ತಾಜಾ ಹಣ್ಣುಗಳ ತಂತ್ರಜ್ಞಾನ, ಅರ್ಕಾ ಭೃಂಗರಾಜ್ ಸೊರಗು ರೋಗ ನಿರೋಧಕ ತಳಿ ಇತ್ಯಾದಿಗಳು ರೈತರಿಗೆ ಉಪಯುಕ್ತಕರ ತಂತ್ರತ್ರಾನಗಳಾಗಿವೆ.

ಇದನ್ನೂ ಓದಿ ಫೆ. 28 ರಂದು ಈ ರೈತರಿಗೆ ಪಿಎಂ ಕಿಸಾನ್ 16 ನೇ ಕಂತಿನ ಹಣ ಜಮೆ

ಸ್ಮಾರ್ಟ್ ನೀರಾವರಿ, ನಿಯಂತ್ರಿತ ಪರಿಸರ ಕೃಷಿ, ಸಸ್ಯ ಆರೋಗ್ಯ ಕ್ಲಿನಿಕ್, ಸಸಿಗಳ ಖರೀದಿಗಾಗಿ ಮಾಲ್ ಮಾದರಿಯ ನರ್ಸರಿಗಳು ಮೇಳದಲ್ಲಿ ಗಮನ ಸೆಳೆಯಲಿವೆ.

ಡ್ರ್ಯಾಗನ್ ಫ್ರೂಟ್ ಸಿರಿಧಾನ್ಯ ಜ್ಯೂಸ್

ಐಐಎಚ್ಆರ್ ನವರು ಇದೇ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಗೆ ಸಿರಿಧಾನ್ಯಗಳನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸುವ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಇದರಿಂದ ಡ್ರ್ಯಾಗನ್ ಹಣ್ಣುಗಳಿಗೆ ವಿಶೇಷ ಮಾರುಕಟ್ಟೆ ಸೌಲಭ್ಯವೂ ಸಿಗಲಿದೆ ಎಂದು ಧನಂಜಯ ಅವರು ತಿಳಿಸಿದರು.

ಮಳಿಗೆ ತೆರೆಯಲು ಆನ್ಲೈನ್ ನೋಂದಣಿ ಮಾಡಬೇಕೇ?

ಮೇಳದಲ್ಲಿ ಮಾರಾಟ ಮಳಿಗೆ ತೆರೆಯಲು ಈ ಬಾರಿ ಆನ್ಲೈನ್ ನಲ್ಲೇ ನೋಂದಣಿ ಆರಂಭಿಸಲಾಗಿದೆ.

ವೆಬ್ಸೈಟ್https://nhf2024.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಸ್ಟಾಲ್ ಬುಕಿಂಗ್ ಮೇಲೆ ಕ್ಲಿಕ್ ಮಾಡಬೇಕು. ನಂತರ Signup ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರು, ಈ ಮೇಲ್ ಐಡಿ, ನಿಮ್ಮ ಮೊಬೈಲ್ ನಂಬರ್, ನಿಮ್ಮ ವೃತ್ತಿ, ಕಂಪನಿ ಹೆಸರು ನಮೂದಿಸಿ ಪಾಸ್ವರ್ಡ್ ಬರೆದು ಅದೇ ಪಾಸ್ವರ್ಡ್ ನ್ನು ಮತ್ತೊಮ್ಮೆ ನಮೂದಿಸಿ ಸೈನ್ ಅಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು.

ನೋಂದಣಿ ಮಾಡಿಕೊಳ್ಳಬಹುದು. ಮೇಳಕ್ಕೆ ಬರುವ ರೈತರಿಗೆ ಮಾಹಿತಿ ಪಡೆಯಲು ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ನಂದೀಶ್ ತಿಳಿಸಿದರು.

National Horticulture fair ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 9403891704 ಮಳಿಗೆಗಳ ಬುಕಿಂಗ್ ಗಾಗಿ 9108364652ಗೆ ಕರೆ ಮಾಡಬಹುದು.

ಇದನ್ನೂ ಓದಿ Crop insurance ಹಣ ಜಮೆ ಆಗಿಲ್ಲವೇ? ಈ ನಂಬರಿಗೆ ಕರೆ ಮಾಡಿ

Leave a Comment