Crop insurance ಹಣ ಜಮೆ ಆಗಿಲ್ಲವೇ? ಈ ನಂಬರಿಗೆ ಕರೆ ಮಾಡಿ

Written by Ramlinganna

Published on:

Crop insurance ಮಾಡಿಸಿದ ನಂತರ ನಿಮಗೆ ವಿಮೆ ಹಣ ಜಮೆಯಾಗಿಲ್ಲವೇ? ನಿಮಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲಎಂಬುದನ್ನು ತಿಳಿದುಕೊಳ್ಳಬೇಕೇ? ಇಲ್ಲಿ ನೀಡಲಾದ ವಿಮಾ ಕಂಪನಿಗಳಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಹೌದು, ಪ್ರಸಕ್ತ ಸಾಲಿನ ಮುಂಗಾರು ಹಿಂಗಾರು ಹಂಗಾಮಿನ ಬೆಳೆಗಳು ಮಳೆಯಿಲ್ಲದೆ ಕಮರಿ ಹೋಗಿದೆ. ಇನ್ನೂ ಕೆಲವು ಕಡೆ ಮೊಳಕೆಯೊಡೆಯದೆ ಬೆಳೆ ಹಾನಿಯಾಗಿದೆ. ಆದರೆ ವಿಮೆ ಮಾಡಿಸಿದ ರೈತರಿಗೆ ವಿಮಾ ಕಂಪನಿಯಿಂದ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುತ್ತದೆ. ಆದರೆ ನಿಮಗೇಕೆ ಜಮೆಯಾಗಿಲ್ಲ. ಯಾವ ಕಾರಣಕ್ಕಾಗಿ ನಿಮ್ಮ ಖಾತೆಗೆ ಬೆಳೆ ವಿಮೆ ಜಮೆಯಾಗಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು. ನೀವುಈ ವಿಮಾ ಕಂಪನಿಗೆ ಕರೆ ಮಾಡಿದರೆ ಸಾಕು, ನಿಮಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.

Crop insurance ವಿಮಾ ಕಂಪನಿಗೇಕೆ ಕರೆ ಮಾಡಬೇಕು?

ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಬೆಳೆ ಹಾಳಾಗಿರುವ ಕುರಿತು ವಿಮಾ ಕಂಪನಿಗೆ ದೂರು ನೀಡದೆ ನಿರ್ಲಕ್ಷ ಮಾಡಿದ್ದರಿಂದ ರೈತರಿಗೆ  ವಿಮೆ ಹಣ ಜಮೆಯಾಗುವುದಿಲ್ಲ. ರೈತರು ಬೆಳೆಹಾನಿಯಾದ ನಂತರ ವಿಮಾ ಕಂಪನಿಗೆ ಬೆಳೆ ಹಾಳಾದ ಕುರಿತು 72 ಗಂಟೆಯೊಳಗೆ ತಿಳಿಸಬೇಕಾಗುತ್ತದೆ. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಕರೆ ಮಾಡಿದ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ. ಬೆಳೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರಬಗ್ಗ ವರದಿ ತಯಾರಿಸುತ್ತಾರೆ. ನಂತರ ಅದನ್ನು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ವಿಮೆ ಹಣ ಜಮೆ ಮಾಡಲು ಮನವಿ ಸಲ್ಲಿಸುತ್ತಾರೆ. ಆಗ ಮೇಲಧಿಕಾರಿಗಳು ಬೆಳೆ ಹಾಳಾದ ವರದಿಯನುಸಾರವಾಗಿ ಹಣ ಜಮೆ ಮಾಡಲಾಗುವುದು.

ಯಾವ ಜಿಲ್ಲೆಯ ರೈತರು ಯಾವ ವಿಮಾ ಕಂಪನಿಗೆ ದೂರು ನೀಡಬೇಕು?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ವಿಮಾ ಕಂಪನಿಗಳನ್ನು ನಿಯೋಜಿಸಲಾಗಿರುತ್ತದೆ.ಹೌದು,  ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/HomePages/frmKnowYourInsCompany.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕದಲ್ಲಿ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಆ ವಿಮಾ ಕಂಪನಿಯ ಸಹಾಯವಾಣಿ ನಂಬರಿಗೆ ಕರೆ ಮಾಡಿ ತಿಳಿಸಬೇಕು. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು ನೀವು ನೆನಪಿಟ್ಟುಕೊಂಡು ಇಲ್ಲಿ ಕೆಳಗೆ ನೀಡಲಾದ ವಿಮಾ ಕಂಪನಿಯ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಗೊತ್ತಿಲ್ಲವೇ? ಇಲ್ಲಿದೆ ನೋಡಿ ಸಹಾಯವಾಣಿ ನಂಬರ್ ಗಳ ಮಾಹಿತಿ.

ಜಿಲ್ಲಾವಾರು ವಿಮಾ ಕಂಪನಿಗಳ ಸಹಾಯವಾಣಿ ನಂಬರ್ ಗಳು

ರಾಜ್ಯದ ವಿವಿಧ ಜಿಲ್ಲೆಗಳಿಗೆ ಒಟ್ಟು ಎಂಟು ವಿಮಾ ಕಂಪನಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ crop Insurance: ಬೆಳೆ ಎಷ್ಟು ಹಾನಿಯಾದರೆ ಎಷ್ಟು ಪರಿಹಾರ ಸಿಗಲಿದೆ ಇಲ್ಲಿದೆಮಾಹಿತಿ

ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್  ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ  ರೈತರು 080 2656 4535, ಅಥವಾ 080 2656 4536 ಗೆ ಂಪರ್ಕಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ,ಕ್ಕೆ ಹೋಗಿ ಭೇಟಿಯಾಗಬಹುದು.

Leave a Comment