ರೈತರು ಮನೆಯಲ್ಲಿಯೇ ಕುಳಿತು ತಮ್ಮ ಸರ್ವೆ ನಂಬರ್ ಅಕ್ಕಪಕ್ಕದ ಜಮೀನಿನ ಯಾವ ಮಾಲಿಕರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ಕೇವಲ ತಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು, ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಎಷ್ಟು ಎಕರೆ ಜಮೀನಿರುವ ಕುರಿತು ಮೊಬೈಲ್ ನಲ್ಲೆ ನೋಡಬಹುದು. ಇದಕ್ಕಾಗಿ ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ, ಅತೀ ಸುಲಭವಾಗಿ ಸ್ಮಾರ್ಟ್ ಫೋನ್ ನಲ್ಲಿ ದೇಶದ ಯಾವುದೇ ಭಾಗದಲ್ಲಿ ಕುಳಿತು ಚೆಕ್ ಮಾಡಬಹುದು. ಅದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಮಾಹಿತಿ.
ಜಮೀನಿನ ಅಕ್ಕಪಕ್ಕದ ಮಾಲಿಕರ ಹೆಸರಿಗೆಷ್ಟು ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು ಮನೆಯಲ್ಲಿ ಕುಳಿತು ತಮ್ಮ ಜಮೀನಿನ ಅಕ್ಕಪಕ್ಕದಲ್ಲಿರುವ ಯಾವ ಮಾಲಿಕರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನುಚೆಕ್ ಮಾಡಲು ಈ
https://landrecords.karnataka.gov.in/Service11/MR_MutationExtract.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಭೂಮಿ ಆನ್ಲೈನ್ ಮುಟೇಶನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಸೆಲೆಕ್ಟ್ ಸರ್ವೆ ನಂಬರ್ ಕೆಳಗಡೆ ಜಿಲ್ಲೆ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಮೇಲೆ ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ಹಾಕಬೇಕು. ಆಮೇಲೆ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಗಳು ಕಾಣುತ್ತವೆ. ಹಿಸ್ಸಾ ನಂಬರ್ ನಲ್ಲಿ ಜಮೀನು ವರ್ಗಾವಣೆಯಾಗಿದ್ದರೆ ಯಾವ ವರ್ಷದಲ್ಲಿ ಜಮೀನು ಬದಲಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ. ಆಸ್ತಿ ಪಿತ್ರಾರ್ಜಿತವಾಗಿ ಬದಲಾವಣೆಯಾಗಿದೆಯೋ ಅಥವಾ ಪಹಣಿ ಬದಲಾವಣೆಯಾಗೆದೆ ಎಂಬುದನ್ನು ಸಹ ರೈತರು ಅಲ್ಲಿ ನೋಡಬಹದು. ಅಲ್ಲಿಸರ್ವೆ ನಂಬರ್ ಹಿಸ್ಸಾ ನಂಬರ್ ಹಿಂದೆ ಕಾಣುವ Blue color ನಲ್ಲಿರುವ Select ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಕಾಣುತ್ತದೆ. ಇದಾದ ಮೇಲೆ Preview ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಹೊಸ ಸರ್ವೆ ನಂಬರಿನಲ್ಲಿಸ್ವಾಧೀನದಾರರು ಮತ್ತು ಅವರ ವಿಸ್ತೀರ್ಣ
ಹೊಸದಾಗಿ ತೆರೆದುಕೊಂಡ ಪೇಜ್ ನಲ್ಲಿ ಕೆಳಗಡೆ ಸರ್ವೆ ನಂಬರ್ ಗಳಿರುತ್ತವೆ. ಅದರ ಮುಂದೆ ಸ್ವಾಧೀನದಾರರ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಒಂದು ವೇಳೆ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರು ಜಂಟಿಯಲ್ಲಿದೆ? ಎಷ್ಟು ಎಕರೆ ಜಮೀನು ಜಂಟಿಯಿದೆ ಎಂಬ ಮಾಹಿತಿಯೂ ಅದರಲ್ಲಿರುತ್ತದೆ.
ಇದನ್ನೂ ಓದಿ : ಯಾವ ಬೆಳೆಗೆ ಎಷ್ಚು ವಿಮೆ ಹಣ ಜಮೆ: ಮೊಬೈಲಲ್ಲೇ ಚೆಕ್ ಮಾಡಿ, ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಡಿ. 31 ಕೊನೆಯ ದಿನ
ಸರ್ವೆ ನಂಬರ್ ಮತ್ತು ಪ್ರತ್ಯೇಕವಾಗಿ ಹಿಸ್ಸಾ ನಂಬರ್ ಅಡಿಯಲ್ಲಿ ಎಷ್ಟು ಎಕರೆ ಗುಂಟೆ ಜಮೀನಿದೆ? ಜಮೀನು ಪಟ್ಟಾ ಆಗಿದೆಯೋ ಇಲ್ಲವೋ? ಹಾಗೂ ಜಮೀನಿನ ಮಣ್ಣಿನ ನಮೂನೆ ಯಾವುದು ಎಂಬ ಮಾಹಿತಿಯೂ ಇದರಲ್ಲಿರುತ್ತದೆ. ನಿಮ್ಮ ಜಮೀನಿನ ಹಿಸ್ಸಾ ನಂಬರ್ ಗೊತ್ತಿಲ್ಲದಿದ್ದರೆ ಮೇಲ್ಗಡೆ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಮುಂದುಗಡೆ ಜಮೀನಿನ ಮಾಹಿತಿ ಇರುತ್ತದೆ. ಅದರ ಕೆಳಗಡೆ ಜಮೀನಿನ ಮಾಲಿಕರ ಹೆಸರು ಇರುತ್ತದೆ.ಅದರ ಮುಂದೆ ಜಮೀನಿನ ಮಾಹಿತಿ ಇರುತ್ತದೆ.
Its too good news for farmers in INDIA THANKS FOR GIVING US INFORMATION.
Yas janajagran good website