ಪಿಎಂ ಕಿಸಾನ್ 13ನೇ ಕಂತು ಈ ದಿನ ಬಿಡುಗಡೆ

Written by Ramlinganna

Updated on:

PMkisan 13th installment fund ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗಿಲ್ಲಿದೆ ಗುಡ್ ನ್ಯೂಸ್. ಪಿಎಂ ಕಿಸಾನ್ ಯೋಜನೆಯ  12ನೇ ಕಂತು ಪಡೆದ ರೈತರಿಗೆ ಹೊಸ ವರ್ಷಕ್ಕೆ 13ನೇ ಕಂತು ಜಮೆ ಮಾಡುವ ಸಾಧ್ಯತೆಯಿದೆ.

ಹೌದು, ಕಳೆದ ವರ್ಷ ಪಿಎಂ ಕಿಸಾನ್ ಯೋಜನೆಯ 10ನೇ ಕಂತು ಜನವರಿ ಒಂದರಂದು ಹೊಸ ವರ್ಷಕ್ಕೆ ರೈತರ ಖಾತೆಗೆ ಜಮೆ ಮಾಡಲಾಗಿತ್ತು. 2020 ರಲ್ಲಿ ಡಿಸೆಂಬರ್ 25 ರಂದು ರೈತರ ಖಾತೆಗೆ ಹಣ ಜಮೆ ಮಾಡಲಾಗಿತ್ತು.  ಇದೇ ರೀತಿ ಈ ವರ್ಷವೂ ಸಹ ಡಿಸೆಂಬರ್ ಅಂತ್ಯ ಅಥವಾ 2023 ರ ಹೊಸ ವರ್ಷಕ್ಕೆ ಜಮೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ 13ನೇ ಕಂತಿನಲ್ಲಿ ಬಹಳಷ್ಟು ರೈತರು ಈ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ. ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದರ ಸಂಕ್ಷೀಪ್ತ ಮಾಹಿತಿ ಇಲ್ಲಿದೆ.

PMkisan 13th installment fund ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್  ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ಳಬೇಕು. ಈ ಪಟ್ಟಿಯಲ್ಲಿದ್ದವರೆಲ್ಲರಿಗೂ ಪಿಎಂ ಕಿಸಾನ್ ಯೋಜನೆಯ ಹಣ ಜಮಯಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಏಕೆಂದರೆ ಈಗಾಗಲೇ ಕೆಲವು ರೈತರಿಗೆ ಜಮೆ ಮಾಡುವುದನ್ನು ತಡೆಹಿಡಿಯಲಾಗಿದೆ. ಹಾಗಾಗಿ ಇಲ್ಲಿ ಹೆಸರಿದ್ದ ಮಾತ್ರಕ್ಕೆ ಜಮೆಯಾಗುವುದಿಲ್ಲ ಹಾಗಾದರೆ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಎಲ್ಲಿ ಚೆಕ್ ಮಾಡಬೇಕೆಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಹಣ ಜಮೆಯಾಗುತ್ತೋ ಇಲ್ಲವೋ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆಲ್ಲರಿಗೂ ಹಣ ಜಮೆಯಾಗುವುದಿಲ್ಲ. ಆದರೆ ಸ್ಟೇಟಸ್ ನಲ್ಲಿ ಲ್ಯಾಂಡ್ ಸೀಡಿಂಗ್ ಎದುರುಗಡೆ ಯಸ್ ಇದ್ದರೆ ಮಾತ್ರ ಜಮೆಯಾಗುತ್ತದೆ. ಲ್ಯಾಂಡ್ ಸೀಡಿಂಗ್ ಚೆಕ್ ಮಾಡುವುದು ಹೇಗೆ ಅಂದುಕೊಂಡಿದ್ದೀರಾ… ಹೌದು ಲ್ಯಾಂಡ್ ಸೀಡಿಂಗ್ ನಲ್ಲಿ ಯಸ್ ಇದೆಯೋ ನೋ ಇದೆಯೋ ಎಂಬುದನ್ನು ಚೆಕ್ ಮಾಡಲು ರೈತರು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಹಾಕಿದ ನಂತರ ಅಲ್ಲಿ ಕಾಣುವ ಕ್ಯಾಪ್ತ್ಯಾ ಕೋಡ್ ನ್ನು ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ರಾಜ್ಯ, ಜಿಲ್ಲೆ, ಗ್ರಾಮ, ಆಧಾರ್ ಕಾರ್ಡ್ ಇಕೆವೈಸಿ ಮುಂದುಗಡೆ ಯಸ್ ಇರಬೇಕು. ಎಲಿಜಿಲಿಟಿ ಮುಂದೆ ಯಸ್ ಇರಬೇಕು.

ಇದರೊಂದಿಗೆ ಕೆಳಗಡೆ ಲ್ಯಾಂಡ್ ಸೀಡಿಂಗ್ ಎದುರುಗಡೆ Yes  ಇದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುತ್ತದೆ. ಎಲಿಬಿಲಿಟಿ ಮುಂದೆ ನೋ ಇದ್ದು ಅದರ ಮುಂದುಗಡೆ ರೀಸನ್ ನಲ್ಲಿ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಯೋಜನೆ ತಡೆಹಿಡಿಯಲಾಗಿದೆ ಎಂಬುದನ್ನು ನಮೂದಿಸಲಾಗಿರುತ್ತದೆ. ಎಲಲ್ಲವೂ ಸರಿಯಿದ್ದು,  ನಿಮಗೆ ಕಳೆದ ಕಂತಿನ ಹಣ ಜಮೆಯಾಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಬಹುದು. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿ (ಆರ್.ಟಿ.ಸಿ) ಝರಾಕ್ಸ್ ಪ್ರತಿಯನ್ನುಸಲ್ಲಿಸಬೇಕಾಗುತ್ತದೆ.

Leave a Comment