ಅಮೃತ್  ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ (20+1) ಕುರಿ/ಮೇಕೆ ಘಟಕಗಳ ಅನುಷ್ಠಾನಕ್ಕಾಗಿ ಕುರಿ ಮತ್ತು ಉಣ್ಣೆ ಸಹಕಾರ ಸಂಘ ನಿಯಮಿತ  ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು ಪ್ರಸಕ್ತಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಚಿಕ್ಮಗಳೂರು ಜಿಲ್ಲೆಯ ಆಸಕ್ತ ಸದಸ್ಯರು ನಿಗದಿತ ಅರ್ಜಿಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಚಿಕ್ಕಮಗಳೂರು ಇವರಿಂದ ಕಚೇರಿ ವೇಳೆಯಲ್ಲಿ ಪಡೆದು ಮಾರ್ಚ್ 30 ರೊಳಗೆ ಅರ್ಜಿಗಳನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮೂಲ ದಾಖಲಾತಿಗಳೊಂದಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಿಕ್ಕಮಗಳೂರು ಇವರನ್ನುಸಂಪರ್ಕಿಸಲು ಕೋರಲಾಗಿದೆ.

ಅಮೃತ್ ಸ್ವಾಭಿಮಾನಿ ಯೋಜನೆಯಡಿ ಮೈಸೂರು ಜಿಲ್ಲೆಯ ರೈತರಿಂದಲೂ ಆರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ (20+1)  ಕುರಿ, ಮೇಕೆ ಘಟಕಗಳ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವವರು ಅರ್ಜಿಯನ್ನು ತಮ್ಮ ವ್ಯಾಪ್ತಿಯ ಹೋಬಳಿಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನಗರದ ಚಾಮುಂಡಿಪುರಂನ ಮಾನಂದವಾಡಿ ರಸ್ತೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದದ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.

ಹಿಂದಿನ  3 ವರ್ಷಗಳಲ್ಲಿ ಪಶುಪಾಲನಾ ಇಲಾಖೆ, ಅಥವಾ ನಿಗಮದಿಂದ ಇದೇ ಉದ್ದೇಶಕ್ಕಾಗಿ ಸಹಾಯಧನ ಸೌಲಭ್ಯ ಪಡೆಯದೆ ಇರುವ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಸಂಘದ ಸದಸ್ಯತ್ವ ಹೊಂದಿರುವ ಸದಸ್ಯರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ (ಕಚೇರಿಯ ದೂರವಾಣಿ ಸಂಖ್ಯೆ 0821 2488830) ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಅಮೃತ್ ಸ್ವಾಭಿಮಾನಿ ಯೋಜನೆ?

ಅಮೃತ್ ಸ್ವಾಭಿಮಾನಯೋಜನೆಯಡಿಯಲ್ಲಿ ಪ್ರಸಕ್ತ ಸಾಲನಿಂದ 20 +1  ಕುರಿ ಅಥವಾ ಮೇಕೆ ಘಟಕಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗೆ 1.75 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಇದು ರೈತರಿಗೆ ಲಾಭದಾಯಕ ಯೋಜನೆಯಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ನಿಮಗೆ ಗೊತ್ತಿಲ್ಲದೆ ಬೆಳೆ ಸಾಲ ಪಡೆಯಲಾಗಿದೆಯೇ? ಇಲ್ಲೇ ಚೆಕ್ ಮಾಡಿ

ಅಮೃತ್ ಸ್ವಾಭಿಮಾನಿ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ರೈತರು ಕುತಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು. ಹೋಬಳಿ ಮಟ್ಟದಲ್ಲಿ ಪ್ರತಿ 15 ಸಾವಿರ ಕುರಿ, ಮೇಕೆಗಳಿಗೆ ಒಂದು ಸಹಕಾರ ಸಂಘದಂತೆ ಇದ್ದು, ಸದಸ್ಯರಾದ ಕುರಿಗಾರರು ಮಾತ್ರ ಕುರಿ ಅಥವಾ ಮೇಕೆ ಪಡೆಯಲು ಅರ್ಹರಾಗಿರುತ್ತಾರೆ.

ಅಮೃತ್ ಸ್ವಾಭಿಮಾನಿ ಯೋಜನೆಯಡಿ ರೈತರಿಗೆ ಹೇಗೆ ಸಹಾಯಧನ ಸಿಗಲಿದೆ?

ಈ ಯೋಜನೆಯಡಿಯಲ್ಲಿ ಪ್ರತಿ ಫಲಾನುಭವಿಗೆ 1.75 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಇದರಲ್ಲಿ ಶೇ. 50 ರಷ್ಟು  ರಾಷ್ಟ್ರೀಯ ಸಹಕಾರ ಅಭಿವೃದ್ಧಿನಿಗಮದಿಂದ ಸಾಲ ನೀಡಲಾಗುವುದು. ಶೇ. 25 ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುವುದು. ಉಳಿದ ಶೇ. 25 ರಷ್ಟು ಫಲಾನುಭವಿ ವಂತಿಕೆಯ ಮೂಲಕ ಅನುಷ್ಠಾನ ಮಾಡಲಾಗುವುದು.

ಕುರಿ ಮತ್ತು ಮೇಕೆ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸಲು ರಾಜ್ಯ ,ಸರ್ಕಾರವು ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದಿದೆ.

Leave a Reply

Your email address will not be published. Required fields are marked *