ಪಶು ಪಾಲನೆಗೆ 60 ಸಾವಿರ ರೂಪಾಯಿಯವರೆಗೆ ಸಬ್ಸಿಡಿ

Written by Ramlinganna

Published on:

subsidy under animal husbandry department ಪಶುಪಾಲನೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಶೇ. 90 ರವರೆಗೆ ಸಹಾಯಧನ ಸಿಗುವುದು.

ಹೌದು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕೋಳಿ, ಕುರಿ, ಮೇಕೆ,  ಹಸು ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಯಾವ ಘಟಕಕ್ಕೆ ಎಷ್ಟು ಸಹಾಯಧನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 20213ರ ಅನ್ವಯ ಬಳಕೆಯಾಗದ ಮೊತ್ತಕ್ಕನುಗುಣವಾಗಿ ಎರಡು ರಬ್ಬರ್ ನೆಲಹಾಸು ವಿತರಣೆಗೆ ಸಹಾಯಧನ ನೀಡಲಾಗುವುದು. ಘಟಕದ ವೆಚ್ಚ 6190 ರೂಪಾಯಿಯಾಗಿದ್ದರೆ 5571 ರೂಪಾಯಿ ಸಹಾಯಧನ ನೀಡಲಾಗುವುದು. 619 ರೂಪಾಯಿ ವಂತಿಕೆ ಪಾವತಿಸಬೇಕಾಗುತ್ತದೆ.

 subsidy under animal husbandry department ಹೈನುಗಾರಿಕೆ ಘಟಕ ಸ್ಥಾಪನೆೆೆಗೆ ಸಬ್ರಿಡಿ

ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಅಡಿಯಲ್ಲಿ ಉಳಿಕೆಯಾಗುವ ಅನುದಾನದಲ್ಲಿ ಹೈನುಗಾರಿಕೆ ಘಟಕ ವೆಚ್ಚಕ್ಕೆ ಸಹಾಯಧನ ನೀಡಲಾಗುವುದು. ಘಟಕದ ವೆಚ್ಚ 60 ಸಾವಿರ ರೂಪಾಯಿ ಇರುತ್ತದೆ. ಇದಕ್ಕೆ 54 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. 6600 ರೂಪಾಯಿಯನ್ನು ಫಲಾನುಭವಿಗಳು ವಂತಿಕೆ ಪಾವತಿಸಬೇಕಾಗುತ್ತದೆ.

ಒಂದು ಮಿಶ್ರ ತಳಿ ಹಸು ಸುಧಾರಿತ ಎಮ್ಮೆ ವಿತರಣೆ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ. 90 ರಷ್ಟು ಸಹಾಯದನ ನೀಡಲಾಗುವುದು. ಸಹಾಯಧನದಲ್ಲಿ ಹೈನುಘಟಕ ಹಾಗೂ 10+1 ಕುರಿ ಅಥವಾ ಮೇಕೆ ಘಟಕ ವಿತರಣೆಗೆ ಸಹಾಯಧನ ನೀಡಲಾಗುವುದು.

ಕುರಿ ಮೇಕೆ ಘಟಕ ಸ್ಥಾಪನೆಗೆ ಸಬ್ಸಿಡಿ

10 + 1 ಕುರಿ ಮೇಕೆಘಟಕ ವಿತರಣೆಗೆ 66 ಸಾವಿರ ರೂಪಾಯಿ ಘಟಕ ವೆಚ್ಚಕ್ಕೆ ಹಣ ನೀಡಲಾಗುವುದು. 59400 ರೂಪಾಯಿ ಸಹಾಯಧನ ನೀಡಲಾಗುವುದು.6600 ರೂಪಾಯಿ ರೈತರ ವಂತಿಕೆಯಾಗಿರುತ್ತದೆ.

ಅದೇ ರೀತಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗದ ನಿಯಮಿತ ಅಡಿಯಲ್ಲಿ 6 + 1 ಕುರಿ ಅಥವಾ ಮೇಕೆ ಘಟಕ ವಿತರಣೆಗೆ 45 ಸಾವಿರ ರೂಪಾಯಿ ನೀಡಲಾಗುವುದು. ಇದರಲ್ಲಿ 40500 ರೂಪಾಯಿ ಸಬ್ಸಿಡಿ ಇರುತ್ತದೆ. 4500 ರೂಪಾಯಿ ಫಲಾನುಭವಿ ವಂತಿಕೆ ಪಾವತಿಸಬೇಕಾಗುತ್ತದೆ.

ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಪರಿಶಿಷ್ಟ ಜಾತಿ ರೈತರಿಗೆ ಸಬ್ಸಿಡಿ ನೀಡಲಾಗುವುದು.

ಇದನ್ನೂ ಓದಿ : ಪಿಎಂ ಕಿಸಾನ್ 14ನೇ ಕಂತಿನ ಹಣ ಈ ರೈತರಿಗಷ್ಟೇ ಜಮೆ- ಯಾವ ರೈತರಿಗೆ ಜಮೆಯಾಗುತ್ತದೆ? ಇಲ್ಲಿದೆ ಮಾಹಿತಿ

ಅದೇ ರೀತಿ ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರಬ್ಬರ್ ಫ್ಲೂರ್ ಮ್ಯಾಟ್ ಹಾಗೂ ರೇನ್ ಕೋಟ್ ಸೇರಿದಂತೆ ಇನ್ನಿತರ ಪರಿಕರಗಳ ಕಿಟ್ ಗಳನ್ನು ವಿತರಿಸಲಾಗುವುದು.

ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು ಐದು ಲಕ್ಷ ರೂಪಾಯಿಯವರೆಗೆ ಸಹಾಯದನ ನೀಡಲಾಗುವುದು.

ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬದವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕುರಿಗಾಹಿಗಳಿಗೆ 5 ಲಕ್ಷ ರೂಪಾಯಿ ಸೌಲಭ್ಯ ಒದಗಿಸಲಾಗುವುದು.

ಕುರಿ ಮತ್ತು ಮೇಕೆಗಳ ಆಕಸ್ಮಿಕ ಸಾವಿಗೆ ಕುರಿ ಮಾಲಿಕರಿಗೆ ಅನುಗ್ರಹ ಯೋಜನೆಯಲ್ಲಿಯೂ ಅರ್ಥಿಕ ಸಹಾಯ ನೀಡಲಾಗುವುದು.6 ತಿಂಗಳು ಮೇಲ್ಪಟ್ಟ ಕುರಿ ಮತ್ತು ಮೇಕೆ ಆಕಸ್ಮಿಕ ಅಥವಾ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದರೆ ಒಂದು ಕುರಿ ಅಥವಾ ಮೇಕೆಗೆ 5 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು. 3.5 ತಿಂಗಳ ವಯಸ್ಸಿನ ಕುರಿ ಅಥವಾ ಮೇಕೆಗಳಿಗೆ 3500 ರೂಪಾಯಿ ನೀಡಲಾಗುವುದು.

ನಾಟಿ ಕೋಳಿಮರಿ ವಿತರಣೆ

5 ಲಕ್ಷ ಕೋಳಿ ಮರಿಗಳನ್ನು ಉತ್ಪಾದಿಸಿ ರೈತ ಮಹಿಳೆಯರಿಗೆ ತಲಾ 20 ನಾಟಿ ಕೋಳಿ ಮರಿ (5 ವಾರದ ಕೋಳಿ ಮರಿಗಳು) ವಿತರಿಸಲಾಗುವುದು.

ಜಾನುವಾರುಗಳಿಗೆ 24/7 ನಿರಂತರ ಸೇವೆಯನ್ನು ಒದಗಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತರು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಸಂಖ್ಯೆ 8277100200 ಮೂಲಕ ಸಂಪರ್ಕಿಸಿ ಇಲಾಖೆಯ ವತಿಯಿಂದ ನೀಡಲಾಗುವ ಸೇವೆಯನ್ನು ಪಡೆಯಬಹುದು.

Leave a Comment