ಈ ರೈತರಿಗಷ್ಟೇ ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಜಮೆ

Written by Ramlinganna

Updated on:

These farmer get pm kisan ಪಿಎಂ ಕಿಸಾನ್ ಯೋಜನೆಯ ಹಣ ಈ ಸಲ ಯಾವ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ? ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಪಿಎಂ ಕಿಸಾನ್ ಯೋಜನೆಯಲ್ಲಿ ಈಗ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಮೊದಲು ಪಿಎಂ ಕಿಸಾನ್ ಯೋಜನೆಗೆ ಹೆಸರು ನೋಂದಣಿ ಮಾಡಿಸಿದವರೆಲ್ಲರಿಗೂ ಪಿಎಂ ಕಿಸಾನ್ ಹಣ ಜಮೆಯಾಗುತ್ತಿತ್ತು. ಈಗ ಕಳೆದ ಮೂರು ಕಂತುಗಳಿಂದ ಪಾರದರ್ಶಿಕವಾಗಿ ಜಮೆ ಮಾಡಲಾಗುತ್ತಿದೆ. ಹೀಗಾಗಿ ಪಿಎಂ ಕಿಸಾನ್ ಯೋಜನೆಯಿಂದ ದಿನದಿಂದ ದಿನಕ್ಕೆ ರೈತರ ಹೆಸರು ಕೈಬಿಡಲಾಗುತ್ತಿದೆ.  ಯಾವ ರೈತರ ಹೆಸರನ್ನು ಯೋಜನೆಯಿಂದ ಕೈಬಿಡಲಾಗುತ್ತಿದೆ ಎಂಬುದು ಕೆಲವು ರೈತರಿಗೆ ಗೊತ್ತೇ ಆಗುತ್ತಿಲ್ಲ.  ಪಿಎಂ ಕಿಸಾನ್ ಯೋಜನೆ ನೋಂದಣಿ ಮಾಡಿದ ನಂತರ ಆರಂಭದಲ್ಲಿ ಕೆಲವು ಕಂತುಗಳು ಜಮೆಯಾಗುತ್ತಿತ್ತು. ಆದರೆ ಈಗ ಏಕಾಏಕಿ ಜಮೆ ಮಾಡುವುದನ್ನು ತಡೆಹಿಡಿಯಲಾಗಿದೆ. ಹೀಗಾಗಿ ಬಹಳಷ್ಟು ರೈತರಿಗೆ ಕಾರಣವೇ ಗೊತ್ತಾಗುತ್ತಿಲ್ಲ.  ಆದರೆ ರೈತರು ತಮಗೆ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಯೋಜನೆಯನ್ನು ಮೊಬೈಲ್ ನಲ್ಲೇಚೆಕ್  ಮಾಡಬಹುದು.

ಹೌದು, ರೈತರು ಮೊಬೈಲ್ ನಲ್ಲಿ ಚೆಕ್ ಮಾಡುವುದಕ್ಕಿಂತ ಮುಂಚಿತವಾಗಿ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು. ಆಧಾರ್ ಕಾರ್ಡ್, ಜಮೀನಿನ ಪಹಣಿ (ಉತಾರ), ಬ್ಯಾಂಕ್ ಪಾಸ್ ಬುಕ್,  ರೇಷನ್ ಕಾರ್ಡ್ ಈ ಎಲ್ಲಾ ದಾಖಲೆಗಳಲ್ಲಿ ರೈತರ ಹೆಸರು ಒಂದೇ ರೀತಿಯಾಗಿರಬೇಕು. ಒಂದಕ್ಷರವೂ ವ್ಯತ್ಯಾಸವಾಗಿದ್ದರೆ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ.

ಇದನ್ನೂ ಓದಿ : ನಿಮ್ಮ ಜಮೀನಿಗೆ ಮುಟೇಶನ್ ಆಗಿದೆಯೇ? ಖಾತಾ ನಂಬರ್ ಇದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಹಣ ಜಮೆಯಾಗಲು ಇದೇ ದಾಖಲೆಗಳನ್ನು ಕೊಟ್ಟಿದ್ದೇವು. ಆರಂಭದಲ್ಲಿ ಐದಾರು, ಏಳೆಂಟು, ಕೆಲವು ರೈತರಿಗೆ ಹತ್ತು ಕಂತಿನವರೆಗೆ ಹಣ ಜಮೆಯಾಗುತ್ತಿತ್ತು. ಆದರೆ ಈಗೆಲ್ಲಾ ದಾಖಲೆಗಳ ಪರಿಶೀಲನೆ ಏಕೆ ಮಾಡಲಾಗಿದೆ ಅಂದುಕೊಂಡಿದ್ದೀರಾ? ಏಕೆಂದರೆ ಕೆಲವರು ಇನ್ನೊಬ್ಬ ರೈತರ ದಾಖಲೆಗಳನ್ನು ಸಲ್ಲಿಸಿ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯುತ್ತಿದ್ದರು. ಹೀಗಾಗಿ ರೈತರಿಗೆ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ.

ಏನಿದು ಇಕೆವೈಸಿ? ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಕಡ್ಡಾಯವೇ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಕಡ್ಡಾಯವಾಗಿದೆ. ಇಕೆವೈಸಿ ಮಾಡಿಸುವುದರಿಂದ ದಾಖಲೆಯಲ್ಲಿ ವ್ಯತ್ಯಾಸವಿದ್ದರೆ, ಅಥವಾ ಯೋಜನೆಗೆ ಸಂಬಂಧಿಸಿದ ಅನರ್ಹ ರೈತರನ್ನು ಗುರುತು ಹಿಡಿಯಲಾಗುವುದು. ಅಂದರೆ ಸರ್ಕಾರಿ ನೌಕರರು, ಇನ್ ಕಂ ಟ್ಯಾಕ್ಸ್, ಪಾವತಿಸುವವರು, ಪಿಂಚಣಿ ಪಡೆಯುವವರೂ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯುತ್ತಿದ್ದರು. ಇದರೊಂದಿಗೆ ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ಜನ ಅಂದರೆ, ಪತಿ, ಪತ್ನಿ, ಮಕ್ಕಳ ಹೆಸರಿನಲ್ಲಿ ಜಮೀನು ವರ್ಗಾವಣೆ ಮಾಡಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದರು. ಅಂತಹ ರೈತರಿಗೆ ಈಗ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ,ಸಿಗುವುದಿಲ್ಲ.ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಸೌಲಭ್ಯ ನೀಡಲು ಕಡ್ಡಾಯಗೊಳಿಸಿದ್ದರಿಂದ ಈಗ ಹಲವಾರು ಅನರ್ಹ ರೈತರ ಹೆಸರನ್ನು ತೆಗೆಯಲಾಗಿದೆ.

These farmer get pm kisan ಪಿಎಂ ಕಿಸಾನ್ ಯೋಜನೆಗೆ ನೀವು ಎಲ್ಲಾ ಅರ್ಹತೆ ಪಡೆದಿದ್ದೀರಾ? ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ನೀವು ಎಲ್ಲಾ ಅರ್ಹತೆ ಪಡೆದಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿದ ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು. ನೀವು ಅರ್ಹತೆ ಪಡೆದಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಕಾಣಿಸುತ್ತದೆ. ಅಲ್ಲಿ  ಆಧಾರ್ ಡೆಮೋ ಅಥೆಂಟಿಕಿಶನ್ ಸ್ಟೇಟಸ್ ಎದುರುಗಡೆ ಸಕ್ಸೆಸ್ ಇರಬೇಕು. ಇಕೆವೈಸಿ ಡನ್ ಎದುರುಗಡೆ ಯಸ್ ಇರಬೇಕು. ಎಲಿಜಿಬಿಲಿಟಿ ಎದುರು ಯಸ್ ಹಾಗೂ ಲ್ಯಾಂಡ್ ಸೀಡಿಂಗ್ ಎದುರು ಯಸ್ ಇದ್ದರೆ ನೀವು ಅರ್ಹತೆ ಪಡೆದಿದ್ದೀರಿ ಎಂದರ್ಥ.

Leave a Comment