ನಿಮ್ಮ ಜಮೀನಿಗೆ ಮುಟೇಶನ್ ಆಗಿದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ

Written by Ramlinganna

Published on:

Does your have mutation ರೈತರು ತಮ್ಮ ಜಮೀನಿಗೆ ಮುಟೇಶನ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದರೊಂದಿಗೆ ಖಾತಾ ನಂಬರ್ ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಸರ್ವೆ ನಂಬರ್ ಹಾಕಿದರೆ ಸಾಕು, ಒಂದೇ ನಿಮಿಷದಲ್ಲಿ ತಮ್ಮ ಜಮೀನಿನ ಅಷ್ಟೇ ಅಲ್ಲ, ಅಕ್ಕಪಕ್ಕದವರ ಜಮೀನಿನ  ಮುಟೇಶನ್  ಹಾಗೂ ಖಾತಾ ನಂಬರ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

ರೈತರು ತಮ್ಮ ಜಮಿನಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ, ಏಕೆಂದರೆ ಕಂದಾಯ ಇಲಾಖೆಯು ರೈತರಿಗೆ ಎಲ್ಲಾ ದಾಖಲೆಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದ ಆನ್ಲೈನ್ ವ್ಯವಸ್ತೆ ಮಾಡಿದೆ. ಹೌದು, ರೈತರು ತಮ್ಮಲ್ಲಿರುವ  ಮೊಬೈಲ್ ನಲ್ಲಿ ಅತೀ ಸುಲಭವಾಗಿ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬಹುದು. ಇದರೊಂದಿಗೆ ದಾಖಲೆಗಳನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

Does your have mutation ನಿಮ್ಮ ಜಮೀನಿಗೆ ಮುಟೇಶನ್ ಹಾಗೂ ಖಾತಾ ನಂಬರ್ ಇದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?

ನಿಮ್ಮ ಜಮೀನಿಗೆ ಸಂಬಂಧಿಸಿದ ಮುಟೇಶನ್ ಹಾಗೂ ಖಾತಾ ನಂಬರ್ ಇದರೊಂದಿಗೆ ಅಕ್ಕಪಕ್ಕದ ಜಮೀನು ಮಾಲಿಕರ ವಿವರ ಚೆಕ್ ಮಾಡಲು ಈ

https://landrecords.karnataka.gov.in/service53/#

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಲ್ಯಾಂಡ್ ಡಿಟೇಲ್ಸ್ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ Survey No. Wise  ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನೀವು ಯಾವ ಜಮೀನಿಗೆ ಸಂಬಂಧಿಸಿದ ಮುಟೇಶನ್ ಹಾಗೂ ಖಾತಾ ನಂಬರ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆಗ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ಹಾಗೂ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. View Land Data ಮೇಲೆ ಕ್ಲಿಕ್ ಮಾಡಬೇಕು. ಆಗ ಮಗದೊಂದು ಪೇಜ್ ನಿಮಗೆ ಕಾಣಿಸುತ್ತದೆ. ಅಲ್ಲಿ ಜಮೀನಿಗೆ ಸಂಬಂಧಿಸಿದ ಮಾಹಿತಿ ಕಾಣಿಸುತ್ತದೆ.

ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ? ಖರಾಬು ಜಮೀನು ಎಷ್ಟಿದೆ?  ಜಮೀನಿನ ಬಣ್ಣ ಹಾಗೂ ಇನ್ನಿತರ ಮಾಹಿತಿ ಇರುತ್ತದೆ.

ಇದನ್ನೂ ಓದಿ : ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನೀವು ನಮೂದಿಸಿದ ಸರ್ವೆ ನಂಬರ್ ಒಳಗಡೆ ಬರುವ ಜಮೀನಿನ ಮಾಲಿಕರ ಮಾಹಿತಿ ಇರುತ್ತದೆ. ಹೌದು, ಈ ಸರ್ವೆ ನಂಬರ್ ಜಮೀನಿನ ಮಾಲಿಕರ ಹೆಸರು, ಅವರ ತಂದೆಯ ಹಸರು, ಅವರಿಗೆ ಎಷ್ಟು ಎಕರೆ ಜಮೀನಿದೆ? ಖಾತಾ ನಂಬರ್  ಇರುತ್ತದೆ. ಇದರೊಂದಿುಗೆ ಜಮೀನು ಮುಟೇಶನ್ ಯಾವಾಗ ಆಗಿದೆ? ಎಂಬುದನ್ನು ನೋಡಬಹುದು.

ನಿಮ್ಮ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿಗೆ ಜಂಟಿಯಿದೆ? ಆ ಜಮೀನು ಮಾಲಿಕರ ಹೆಸರು ತಂದೆಯ ಹೆಸರು ಕಾಣಿಸುತ್ತದೆ.  ಇಲ್ಲಿ ಜಮೀನು ಜಂಟಿಯಾಗಿದ್ದರೆ ಎಲ್ಲಾ  ರೈತರ ಹೆಸರು ಒಂದೇ ಖಾತಾ ನಂಬರ್ ಅಡಿಯಲ್ಲಿ ಬರುತ್ತದೆ. ಇದರೊಂದಿಗೆ ಮುಟೇಶನ್ ನಂಬರ್ ಸಹ ಒಂದೇ ಆಗಿರುತ್ತದೆ.

ಒಂದು ವೇಳೆ ಜಮೀನಿನ ಮಾಲಿಕರು ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ ಹಾಗೂ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.

ಮುಂಗಾರು ಹಿಂಗಾರು ಹಂಗಾಮಿಗೆ ರೈತರ ಜಮೀನಿನಲ್ಲಿ ಯಾವ ಯಾವ ಬೆಳೆ ಬಿತ್ತಲಾಗಿದೆ. ಎಷ್ಟು ಎಕರೆ ಬಿತ್ತಲಾಗಿದೆ ಎಂಬ ಮಾಹಿತಿಯೂ ಇರುತ್ತದೆ.

Leave a Comment