ರೈತರು ತಮ್ಮ ಜಮೀನಿನ ಮೇಲೆ ತಮಗೆ ಗೊತ್ತಿಲ್ಲದೆ ಬೆಳೆ ಸಾಲ ಪಡೆಯಲಾಗಿದೆಯೇ ಎಂಬುದನ್ನುಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಯಾವ ಸರ್ವೆ ನಂಬರಿನಲ್ಲಿ ಬೆಳೆ ಸಾಲ ಪಡೆಯಲಾಗಿದೆ? ಹಾಗೂ ಬೆಳೆ ಸಾಲ ಮರುಪಾವತಿಸಿದರೂ ಇನ್ನೂ ಪಹಣಿಯಲ್ಲಿ ಬೆಳೆ ಸಾಲ ತೋರಿಸಲಾಗುತ್ತಿದೆಯೇ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಂದಿ ಸಂಪೂರ್ಣ ಮಾಹಿತಿ.
ಜಮೀನಿನ ಮೇಲೆ ಬೆಳೆ ಸಾಲವಿದೆಯೇ? ಚೆಕ್ ಮಾಡುವುದು ಹೇಗೆ? (How to check crop loan on your land)
ರೈತರು ತಮ್ಮ ಜಮೀನಿನ ಮೇಲೆ ಬೆಳೆ ಸಾಲವಿದೆಯೇ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.
ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಸೆಲೆಕ್ಟ್ ಮಾಡಬೇಕು. ನಂತರ ಯಾವ ಸರ್ವೆ ನಂಬರ್ ಮೇಲೆ ಬೆಳೆಸಾಲವಿದೆ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಆ ಸರ್ವೆ ನಂಬರ್ ನಮೂದಿಸಬೇಕು.
ಹೀಗೆ ನಿಮ್ಮ ಜಮೀನಿನ ವಿವಿಧ ಸರ್ವೆ ನಂಬರ್ ಇದ್ದರೆ ಒಂದೊಂದಾಗಿ ನಿಮ್ಮ ಸರ್ವೆ ನಂಬರ್ ಹಾಕಿ ಚೆಕ್ ಮಾಡಬಹುದು. ಸರ್ವೆ ನಂಬರ್ ಹಾಕಿದ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್, ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಪಿರಿಯಡ್ ನಲ್ಲಿ 2022-23 ಹಾಗೂ ಇಯರ್ ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಅರ್ಹ ರೈತರ ಪಟ್ಟಿ ಬಿಡುಗಡೆ: ನಿಮ್ಮ ಹೆಸರಿದೆಯೇ ಚೆಕ್ ಮಾಡಿ
ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೆ? ಅವರ ಹೆಸರಿನೊಂದಿಗೆ ಯಾವ ಜಮೀನಿನ ಮಾಲಿಕರರಿಗೆ ಎಷ್ಟು ಎಖರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಇದಾದ ಮೇಲೆ View ಆಗ ಪಹಣಿ (ಉತಾರ) ಓಪನ್ ಆಗುತ್ತದೆ. ಅಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದ ಎಷ್ಟು ಬೆಳೆಸಾಲ ಪಡೆಯಲಾಗಿದೆ ಎಂಬ ಮಾಹಿತಿ ಇರುತ್ತದೆ.
ಬೆಳೆ ಸಾಲ ಮರುಪಾವತಿಸಿದ್ದೀರಾ? (Have you paid crop loan)
ಬೆಳೆ ಸಾಲ ಪಡೆದು ಮರುಪಾವತಿಸಿದ್ದರೂ ನಿಮ್ಮ ಜಮೀನಿನ ಪಹಣಿಯಲ್ಲಿ ಬೆಳೆ ಸಾಲ ತೋರಿಸುತ್ತಿದ್ದರೆ ಕೂಡಲೇ ನೀವು ನಿಮ್ಮ ಹತ್ತಿರದ ಬ್ಯಾಂಕಿಗೆ ತೆರಳಿ ನಿಮ್ಮಪಹಣಿಯಲ್ಲಿ ಬೆಳೆ ಸಾಲ ತೋರಿಸುತ್ತಿರುವುದರ ಬಗ್ಗೆ ಚರ್ಚಿಸಬೇಕು. ಆಗ ಸಂಬಂಧಿಸಿದ ಬ್ಯಾಂಕಿನ ವ್ಯವಸ್ಥಾಪಕರು ಪಹಣಿಯಲ್ಲಿ ನಮೂದಾಗುತ್ತಿರುವ ಬೆಳೆ ಸಾಲವನ್ನು ತೆಗೆದುಹಾಕುತ್ತಾರೆ.
ಪಹಣಿಯಲ್ಲಿ ಬೆಳೆ ಸಾಲವಿದ್ದರೆ ರೈತರು ಯಾವ ಸಮಸ್ಯೆ ಎದುರಿಸಬೇಕಾಗುತ್ತದೆ?
ಜಮೀನಿನ ಪಹಣಿ ಮೇಲೆ ಬೆಳೆ ಸಾಲ ತೋರಿಸುತ್ತಿದ್ದರೆ ರೈತರಿಗೆ ಹೊಸ ಬೆಳೆ ಸಾಲ ಸಿಗುವುದಿಲ್ಲ. ತಮ್ಮ ಜಮೀನನ್ನು ಇತರರಿಗೆ ಮಾರಾಟ ಮಾಡುವಾಗ ಸಮಸ್ಯೆಯಾಗುತ್ತದೆ. ಜಮೀನು ಖರೀದಿ ಮಾಡುವವರು ಜಮೀನಿನ ಮೇಲೆ ಯಾವದೇ ಸಾಲ ತೆಗೆದುಕೊಂಡಿರದಿದ್ದರೆ ಖರೀದಿ ಮಾಡುತ್ತಾರೆ. ಇಲ್ಲದಿದ್ದರೆ ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ.
ಜಮೀನಿನ ಪಹಣಿ ಏನೇನು ಮಾಹಿತಿ ಇರುತ್ತದೆ?
ಜಮೀನಿನ ಪಹಣಿಯಲ್ಲಿ ನಿಮ್ಮ ಸರ್ವೆ ನಂಬರ್ ಇರುತ್ತದೆ. ಆ ಜಮೀನು ಎಷ್ಟು ಎಕರೆ ಜಮೀನಿದೆ ಆ ಸರ್ವೆ ನಂಬರಿನಲ್ಲಿ ಸ್ವಾಧೀನದಾರರ ಹೆಸರು, ತಂದೆಯ ಹೆಸರು ಇರುತ್ತದೆ. ಇದರೊಂದಿಗೆ ಯಾರ ಹೆಸರಿಗೆ ಎ ಷ್ಟು ಎಕರೆ ಜಮೀನಿದೆ? ಎಂಬ ಮಾಹಿತಿ ಇರುತ್ತದೆ.