ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ಹೌದು, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಗ್ ಸ್ಟೇಟಸ್ ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಇಲ್ಲಿ ತಿಳಿಸುವ ಸಿಂಪರ್ ಮೆಥಡ್ ಮೂಲಕ ಮೊಬೈಲ್ ನಲ್ಲೆ ಚೇಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪ್ಯಾನ್ ಕಾರ್ಡ್ ನೊದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾದಗಿದೆ. ಮಾರ್ಚ್ 31 ರೊಳಗೆ ಲಿಂಕ್ ಮಾಡಲು ಗಡುವು ನೀಡಲಾಗಿದೆ. ಆದರೆ ನಿಮ್ಮ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಹಲವಾರು ಸಲ ಸಮಯಾವಕಾಶ ನೀಡಲಾಗಿದೆ. ಕೆಲವರು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದಾರೆ. ಇನ್ನೂ ಕೆಲವರು ಮಾಡಿಸಿರಲಿಕ್ಕಿಲ್ಲ. ಆದರೆ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳುವದು ಉತ್ತಮ.

ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಗ್ ಆಗಿದೆಯೋ ಇಲ್ಲವೋ? ಹೀಗೆ ಚೆಕ್ ಮಾಡಿ (How to check pan aadhaar link status)

ನಿಮ್ಮ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://eportal.incometax.gov.in/iec/foservices/#/pre-login/link-aadhaar-status

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಲಿಂಕ್ ಆಧಾರ್ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊದಲು ನಿಮ್ಮ ಪ್ಯಾನ್ ಕಾರ್ಡ್ ಹಾಕಬೇಕು. ಅದರ ಕೆಳಗಡೆ ಆಧಾರ್ ನಂಬರ್ ನಮೂದಿಸಬೇಕು. ನಂತರ View link aadhaar status  ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಮೆಸೆಜ್ ಕಾಣಿಸುತ್ತದೆ.

ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಗ್ ಆಗಿದ್ದರೆ Your pan  is already linked to given aadhar ಎಂಬ ಮೆಸೆಜ್ ಕಾಣಿಸುತ್ತದೆ.

ಒಂದು ವೇಳೆ ಮೇಲಿನ ಲಿಂಕ್ ಓಪನ್ ಆಗದಿದ್ದರೆ  ಈ

https://www.incometax.gov.in/iec/foportal/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇ ಫಿಲ್ಲಿಂಗ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ ನಮೂದಿಸಿ ವೀವ್ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಮರೆಯಬೇಡಿ. ನಿಮ್ಮ ಪ್ಯಾನ್ ಕಾರ್ಡ್ ಮಾನ್ಯವಾಗಿರುವುದು ಅವಶ್ಯಕವಾಗಿದೆ.

ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆದಾಯ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಸೂಚನೆ ನೀಡಿದೆ. ಒಂದು ವೇಳೆ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಗೊಳ್ಳುತ್ತದೆ.

ಪ್ಯಾನ್ ಕಾರ್ಡ್ ನೊಂದಗೆ ಆಧಾರ್ ಲಿಂಕ್ ಏಕೆ ಮಾಡಿಸಬೇಕು? (why we should link pan to aadhar card)

ಪ್ಯಾನ್ ಕಾರ್ಡ್ ಇಂದಿನ ದಿನಗಳಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕಿನ ಪ್ರತಿಯೊಂದು ವ್ಯವಹಾರಕ್ಕೆ ಇದು ಮುಖ್ಯವಾಗಿದೆ. ಆನ್ಲೈನ್ ವಹಿವಾಟುಗಳಿಗಾಗಿ ಮಾಡಿದಿ ಕೆವೈಸಿಯವರೆಗೆ ಪ್ರತಿಯೊಂದು ಹಣಕಾಸಿನ ಕೆಲಸ್ಕಕೆ ಪ್ಯಾನ್ ಕಡ್ಡಾಯವಾಗಿದೆ.

ಇದನ್ನೂ ಓದಿ ಪಿಎಂ ಕಿಸಾನ್ 14ನೇ ಕಂತಿನ ಗ್ರಾಮವಾರು ಪಟ್ಟಿ ಬಿಡುಗಡೆ- ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಹೊಸ ಪ್ಯಾನ್ ಗೆ ಅರ್ಜಿ ಸಲ್ಲಿಸುವಾಗ ಹಾಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.  ಸರ್ಕಾರ ನಿಗದಿಪಡಿಸಿದ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.

Leave a Reply

Your email address will not be published. Required fields are marked *