ಟ್ರ್ಯಾಕ್ಟರ್, ಹನಿ ನೀರಾವರಿಗೆ ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನ

Written by Ramlinganna

Published on:

Tractor krishihonda subsidy apply : ಟ್ರ್ಯಾಕ್ಟರ್ ಖರೀದಿ, ಹನಿ ನೀರಾವರಿ, ತುಂತುರು ನೀರಾವರಿ, ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ನೀಡಲು ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ

ಹೌದು,  2026-27ನೇ ಸಾಲಿನ ರಾಷ್ಟ್ರೀಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ (ಕಂದು ಬಾಳೆ, ಅಂಗಾಂಶ ಬಾಳೆ, ಪಪ್ಪಾಯ, ಅಂಜೂರ, ದಾಳಿಂಬೆ, ಮಾವು, ಸೀಬೆ, ಹುಣಸೆ, ನಿಂಬೆ, ಹೈಬ್ರೀಡ್ ತರಕಾರಿ, ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಸಾಬಾರು ಮತ್ತು ಔಷಧಿ ಗಿಡಗಳು) ಕೃಷಿಹೊಂಡ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಕಳೆ ಛಾಪೆ, ಟ್ರ್ಯಾಕ್ಟರ್ , ಫಾರ್ಮಗೆಟ್, ಪ್ಯಾಕ್ ಹೌಸ್, ಈರುಳ್ಳಿ, ಶೇಖರಣಾ ಘಟಕ, ತಳ್ಳುವ ಗಾಡಿ ಮತ್ತು ಇತ್ಯಾದಿ ಮುಂದುವರಿದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ, ಮತ್ತು ರಾಜ್ಯ ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ ವ್ಯವಸಾಯ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಹಾಗೂ ವಿವಿಧ ಘಟಕಗಳಿಗೆ ಗದಗ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯೊಂದಿಗೆ ಪಹಣಿ ಮತ್ತು ಆಧಾರ್ ಕಾರ್ಡ್, ಲಗತ್ತಿಸಬೇಕು. ಆಸಕ್ತಿಯುಳ್ಳ ರೈತರು ಜೂನ್ 15 ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮುಂಡರಗಿ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದು.

ಮಾರ್ಗಸೂಚಿ ಪ್ರಕಾರ ಆಯ್ಕೆಯಾದ ರೈತರಿಗೆ ಆದ್ಯತೆ ಮೇರೆಗೆ ಜೇಷ್ಠತೆ ಅನುಸಾರವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು.  ರೈತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Tractor krishihonda subsidy apply ಸಹಾಯಧನಕ್ಕೆ ಅರ್ಜಿ ಆಹ್ವಾನ

2026-27ನೇ ಸಾಲಿನ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಾವು, ಸೀಬೆ, ಸ್ಟ್ರಾಬರಿ, ಹೈಬ್ರಿಡ್ ತರಕಾರಿ, ಬಿಡಿ ಹೂಗಳ ವಿಸ್ತರಣೆ ಪುನಶ್ಛೇತನ, ಪ್ಲಾಸ್ಟಿಕ್ ಮಲ್ಚಿಂಗ್, ವೈಯಕ್ತಿಕ ಕೃಷಿ ಹೊಂಡ, ಪ್ಯಾಕೇಜ್ ಶಿಥಿಲಗೊಂಡ ನಿರ್ಮಾಣಕ್ಕಾಗಿ ಹಾಗೂ ಶೀತ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ ವಾರ್ಷಿಕ ಗುರಿ ನಿಗದಿಪಡಿಸಲಾಗಿದೆ.

ಮಾಲೂರು ತಾಲೂಕಿನ ಆಸಕ್ತ ರೈತರು ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಆಗಿದ್ದಲ್ಲಿ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರದೊಂದಿಗೆ ಜೂನ್ 15 ರೊಳಗೆ ಅರ್ಜಿ ಹಿರಿಯ ಸಹಾಯಕ ತೋಟಗಾರಿಕೆ ಕಚೇರಿ ಮಾಲೂರು ಇಲ್ಲಿಗೆ ಸಲ್ಲಿಸಬೇಕೆಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ ದಿವ್ಯಶ್ರೀ ತಿಳಿಸಿದ್ದಾರೆ.

ಹನಿ ನೀರಾವರಿಗೆ ಅರ್ಜಿ ಆಹ್ವಾನ

2026-27ನೇ ಸಾಲಿನ ಪ್ರಧಾನಮಂತ್ರಿ ಕೃಶಿ ವಿಕಾಸ ಯೋಜನೆ ಅಡಿಯಲ್ಲಿ ತುಂತುರು ಹನಿ ನೀರಾವರಿ ಘಟಕಕ್ಕೆ ಸಹಾಯಧನ ನೀಡಲು ಬೆಳಗಾವಿ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹನಿ ನೀರಾವರಿ ಮತ್ತು ತುಂತುರು ಹಾಗೂ ಹನಿ ನೀರಾವರಿ ಅಳವಡಿಕೆಗೆ ರೈತರ ಹೆಸರಿಗೆ 5 ಹೆಕ್ಟೇರ್ ಗರಿಷ್ಠ ಜಮೀನು ಇರಬೇಕು. ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರಿಗೆ ಸಹಾಯಧನ ನೀಡಲಾಗುವುದು. ಶೇ. 45 ರಿಂದ 90 ರವರೆಗೆ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್ ನಿಮ್ಮ ಜಮೀನಿನ ಇ ಸ್ಕೇಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿಗೆ ಸಂಪರ್ಕಿಸುವಂತೆ ಮಹಾಂತೇಶ ಮುರಗಡ, ತೋಟಗಾರಿಕೆ ಜಂಟಿ ನಿರ್ದೇಶಕ (ಜಿಪಂ) ಬೆಳಗಾವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು ?

ಅರ್ಜಿ ಸಲ್ಲಿಸಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪಡಿತರ ಚೀಟಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ರೈತರ ನೀರಾವರಿ ಸೌಲಭ್ಯ ಹೊಂದಿರಬೇಕು. ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಲಿಂಕ್ ಆಗಿರಬೇಕು.

Leave a Comment