ಬರಗಾಲ ಪರಿಹಾರ ಜಮೆ ನಿಮಗೆಷ್ಟು ಜಮೆ ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Today baragala parihara released : ರಾಜ್ಯದ ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಬರಗಾಲ ಘೋಷಣೆಯಾಗಿದ್ದ ತಾಲೂಕಿನ  34 ಲಕ್ಷ ರೈತರ ಖಾತೆಗೆ ಇಂದಿನಿಂದ ಬರ ಪರಿಹಾರ ಹಣ ರೈತರ ಖಾತೆಗೆ ಜಮೆಯಾಗಲಿದೆ.

ಹೌದು, ಕಳೆದ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಲಿದೆ. ಕೇಂದ್ರದಿಂದ ಬಂದಿರುವ 3454 ಕೋಟಿ ರೂಪಾಯಿ ಅನ್ನು ಇನ್ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ತಿಳಿಸಿದೆ.

ಬಹುತೇಕ ಜಿಲ್ಲೆಗಳಲ್ಲಿ ರೈತರ ಖಾತೆಗೆ ಬರಗಾಲ ಪರಿಹಾರದ ಹಣ ಜಮೆ ಮಾಡಲಾಗುತ್ತಿದೆ. . ಇನ್ನೂ ಯಾರ ಯಾರ ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡೋಣ.

ಯಾರ ಖಾತೆಗೆ ಬರಗಾಲ ಪರಿಹಾರದ ಎರಡನೇ ಕಂತು ಜಮೆಯಾಗಿಲ್ಲವೋ ಅವರು ಆತಂಕ ಪಡಬೇಕಿಲ್ಲ, ಅತೀ ಶೀಘ್ರದಲ್ಲಿ ಜಮೆಯಾಗದ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು.

Today baragala parihara released ಬರಗಾಲ ಪರಿಹಾರ ಪಟ್ಟಿಯಲ್ಲಿ ನಿಮ್ಮಹೆಸರಿದೆಯೇ? ಇಲ್ಲೇ ಚೆಕ್ ಮಾಡಿ

ಬರಗಾಲ ಪರಿಹಾರ ಹಣ ಯಾರು ಯಾರು ಪಡೆಯಲಿದ್ದಾರೆ ಆ ಪಟ್ಟಿಯಲ್ಲಿ ಯಾವ ಯಾವ ರೈತರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ವೀಕ್ಷಿಸು ಮೇಲೆ ಕ್ಲಿಕ್ ಮಾಡಿದರೆ ಸಾಕು ಯಾರು ಯಾರು ಬರಗಾಲ ಪರಿಹಾರ ಹಣ ಪಡೆಯಬಲ್ಲರೋ ಅವರ ಹೆಸರು ಕಾಣಿಸುತ್ತದೆ.

ನಿಮ್ಮ ಖಾತೆಗೆ ಜಮೆಯಾಗಿದೆಯೇ? ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.ಅಲ್ಲಿ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಡ್ರಾಟ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.

Baragala money ಬರಗಾಲ ಪರಿಹಾರ ಜಮೆಗೆ ಒತ್ತಾಯ                       

ಬರಗಾಲ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರವು ಕಾನೂನು ಹೋರಾಟ ಮಾಡಿತ್ತು. ಅಂದರೆ ಸುಪ್ರಿಂಕೋರ್ಟ್ ಮೆಟ್ಟಲೇರಿತು. ಆಗ ಕೇಂದ್ರ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಸೂಚಿಸಿದ್ದರಿಂದ ಕೇಂದ್ರ ಸರ್ಕಾರವು 3454 ಹಣವನ್ನು ಬಿಡುಗಡೆ ಮಾಡಿತು. ಈ ಹಣವನ್ನೇ ರೈತರ ಖಾತೆಗೆ ಜಮೆ ಮಾಡಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಆಗಲಿದೆ. ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ.

Leave a Comment