ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜನರು ತಮ್ಮ ಮನೆಯ ಆಸ್ತಿ ತೆರಿಗೆ ಕಟ್ಟುವುದೆಷ್ಟಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು ಇದಕ್ಕಾಗಿ ಈಗ ಗ್ರಾಮ ಪಂಚಾಯತಿಗೆ ಹೋಗಿ ವಿಚಾರಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಆಸ್ತಿ ತೆರಿಗೆ ಕಟ್ಟುವುದೆಷ್ಟಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಗ್ರಾಮಗಳಲ್ಲಿ ಸಾಮಾನ್ಯವಾಗಿ ಆಸ್ತಿ ತೆರಿಗೆ ಕಟ್ಟಲು ಹಿಂದೇಟು ಹಾಕಲಾಗುತ್ತಿದೆ. ಪ್ರತಿ ವರ್ಷ ಕಟ್ಟುವ ಮನೆಯ ಆಸ್ತಿ ತುಂಬಾ ಕಡಿಮೆಯಿದ್ದರೂ ಸಹ ಆಸ್ತಿ ತೆರಿಗೆ ಪಾವತಿಸಲು ಮುಂದೂಡಲಾಗುವುದರಿಂದ ಮುಂದೊಂದು ದಿನ ದೊಡ್ಡ ಮೊತ್ತ ಪಾವತಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಆಸ್ತಿ ತೆರಿಗೆ ಎಷ್ಟಿದೆ ಎಂಬುದನ್ನು ಈಗಲೇ ಚೆಕ್ ಮಾಡಿಕೊಳ್ಳಿ.
ಆಸ್ತಿ ತೆರಿಗೆ ಕಟ್ಟುವುದೆಷ್ಟಿದೆ ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು, ಗ್ರಾಮಾಸ್ಥರು ತಮ್ಮ ಮನೆಯ ಆಸ್ತಿ ತೆರಿಗೆ ಎಷ್ಟಿದೆ ಎಂಬುದನ್ನು ಚೆಕ್ ಮಾಡಲು ಈ
https://panchatantra.kar.nic.in/panchamitra/IndexMain.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ಅಂತರ್ಜಾಲ ಪಂಚಮಿತ್ರ ತಾಣ ತೆರೆದುಕೊಳ್ಳುತ್ತದೆ. ಈ ತಾಣದಲ್ಲಿ ಗ್ರಾಮಸ್ಥರು ಸರ್ವ ಮಾಹಿತಿಯನ್ನು ಪಡೆಯಬಹುದು.
ಪಂಚಮಿತ್ರ ತಾಣದಲ್ಲಿ ಕರ್ನಾಟಕ ಮ್ಯಾಪ್ ಸಹ ಕಾಣುತ್ತದೆ. ಕರ್ನಾಟಕ ಮ್ಯಾಪ್ ನಲ್ಲಿ ಕಾಣುವ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯಲ್ಲಿರುವ ತಾಲೂಕುಗಳ ಪಟ್ಟಿ ಕಾಣುತ್ತದೆ. ನಿಮ್ಮ ತಾಲೂಕು ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ತಾಲೂಕಿನ ವ್ಯಾಪ್ತಿಯಲ್ಲಿರುವ ಗ್ರಾಮಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ ಮತ್ತೇ ನೀವು ನಿಮ್ಮ ಗ್ರಾಮದ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇಲ್ಲಿ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿಗಳು ಕಾಣುತ್ತವೆ. ಅಂದರೆ ನಿಮ್ಮ ಗ್ರಾಮ ಪಂಚಾಯತಿ ಸದಸ್ಯರು, ಸಾಮಾನ್ಯ ಮಾಹಿತಿ, ಪಂಚಾಯತಿ ಆಸ್ತಿಗಳು, ಯೋಜನೆಗಳೂ ಹೀಗೆ ಹಲವಾರು ಮಾಹಿತಿಗಳ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಸ್ತಿ ತೆರಿಗೆಗಳು ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ಕಾಣುತ್ತವೆ.
ಆಸ್ತಿ ತೆರಿಗೆ ವಿವರಗಳು ಕೆಳಗಡೆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ 2021-22 ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿಲೇಜ್ ನಲ್ಲಿ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಊರು, ಆಸ್ತಿ ಮಾಲೀಕರ ಹೆಸರು, ಪ್ರಾಪರ್ಟಿ ಐಡಿ, ಸರ್ವೆ ನಂಬರ್, ಹೌಸ್ ನಂಬರ್, ಆಸ್ತಿ ತೆರಿಗೆ ಪಾವತಿಸಿದ್ದರೆ ಹಾಗೂ ಆಸ್ತಿ ತೆರಿಗೆ ಎಷ್ಟುಪಾವತಿಸಬೇಕಾಗಿದೆ ಬ್ಯಾಲೆನ್ಸ್ ಕಾಣುತ್ತದೆ.
ನಿಮ್ಮ ಗ್ರಾಮದಲ್ಲಿ 100ಕ್ಕೂ ಹೆಚ್ಚು ಹೆಸರುಗಳಿರುವುದರಿಂದ ನಿಮ್ಮ ಹೆಸರು ಯಾವ ಪೇಜ್ ನಲ್ಲಿದೆ ಎಂಬುದನ್ನು ಚೆಕ್ ಮಾಡಬೇಕಾಗುತ್ತದೆ. ಒಂದನೇ ಪುಟದಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮುಂದಿನ ಪೇಜ್ ನಲ್ಲಿರುತ್ತದೆ. ಹಾಗಾಗಿ ಕೆಳಗಡೆ 1, 2, 3, 4,5 ಹೀಗೆ ಪೇಜ್ ಗಳಿರುತ್ತವೆ.
ಒಂದೊಂದಾಗಿ ನಂಬರ್ ಮೇಲೆ ಕ್ಲಿಕ್ ಮಾಡುತ್ತಾ ನಿಮ್ಮ ಹೆಸರು ಚೆಕ್ ಮಾಡಬೇಕು. ನಿಮ್ಮ ಹೆಸರಿನ ಮುಂದುಗಡೆ ಕೊನೆಯಲ್ಲಿ ಎಷ್ಟು ತೆರಿಗೆ ಪಾವತಿಸಬೇಕು ಎಂಬುದು ಕಾಣುತ್ತದೆ. ಈ ಆಧಾರದ ಮೇಲೆ ನೀವು ನಿಮ್ಮಗ್ರಾಮ ಪಂಚಾಯತಿಗೆ ಹೋಗಿ ಆಸ್ತಿ ತೆರಿಗೆ ಪಾವತಿಸಬಹುದು. ಆಸ್ತಿ ತೆರಿಗೆ ಸರಿಯಾದ ಸಮಯಕ್ಕೆ ಪಾವತಿಸಿ ಮುಂದೆ ದುಪ್ಪಟ್ಟು ಹಣ ಕಟ್ಟುವುದರಿಂದ ಪಾರಾಗಬಹುದು. ಆಸ್ತಿ ತೆರಿಗೆ ಸರಿಯಾದ ಸಮಯಕ್ಕೆ ಪಾವತಿಸುತ್ತಿದ್ದರೆ ಗ್ರಾಮ ಪಂಚಾಯತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ.