ಮುಟೇಶನ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

ರೈತರು ಮುಟೇಶನ್ ಪ್ರಕಾರ ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ರೈತರು ಅಧಿಕಾರಿಗಳ ಬಳಿ ಹೋಗಿ ಕೈಕಟ್ಟಿ ನಿಂತುಕೊಳ್ಳಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮಲ್ಲಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಮುಟೇಶನ್ ಪ್ರಕಾರ ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನುಚೆಕ್ ಮಾಡಲು ಸರ್ವೆ ನಂಬ್ ಹಾಕಿದರೆ ಸಾಕು, ಹಿಸ್ಸಾ ನಂಬರ್ ಸಹಿತ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಅಹು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮುಟೇಶನ್ ಪ್ರಕಾರ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಚೆಕ್ ಮಾಡಿ

ರೈತರು ಮುಟೇಶನ್ ಪ್ರಕಾರ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಚೆಕ್ ಮಾಡಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಟೇಶನ್ ಎಕ್ಸಟ್ರ್ಯಾಕ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿ ಹಾಗೂ ಗ್ರಾಮ ಸೆಲೆಕ್ಟ್ ಮಾಡಿಕೊಳ್ಳಬೇಕು. ಇದಾದ ಮೇಲೆ ಸರ್ವೆ ನಂಬರ್ ಹಾಕಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಿದರೆ ಸಾಕು, ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಜಮೀನು ವರ್ಗಾವಣೆಯಾದ ವರ್ಷ, ಮುಟೇಶನ್ ಬದಲಾವಣೆಯಾದ ಪ್ರಕಾರ ಅಂದರೆ ಖಾತಾ ಬದಲಾವಣೆಯಾಗಿದೆಯೋ ಅಥವಾ ಪೋಡಿಯಾಗಿದೆಯೋ ಎಂಬ ಮಾಹಿತಿ ಇರುತ್ತದೆ.

ಮುಟೇಶನ್ ಈ ಪ್ರತಿಯಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?

ಜಮೀನು ವಿಭಾಗವಾಗಿದೆಯೋ ಕ್ರಯ ಅಂದರೆ ಖರೀದಿಯಾಗಿದೆಯೋ ಎಂಬ ಮಾಹಿತಿಯಂದಿಗೆ ಯಾವ ವರ್ಷದಲ್ಲಿ ಜಮೀನು ವರ್ಗಾವಣೆಯಾಗಿದೆ ಎಂಬುದನ್ನು ನಮೂದಿಸಲಾಗಿರುತ್ತದೆ.  ನಿಮ್ಮ ಸರ್ವೆ ನಂಬರ್ ಹಿಂದಿರುವ Select ಮೇಲೆ ಕ್ಲಿಕ್ ಮಾಡಬೇಕು.  ನಂತರ Preview ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮ್ಮ ಹಿಸ್ಸಾ ನಂಬರ್ ನಲ್ಲಿ ಕೇವಲ ವೀವ್ ಕಂಡರೆ ಇನ್ನೊಂದು ಸರ್ವೆ ನಂಬರ್ ಅಂದರೆ ಸರ್ವೆ ನಂಬರ್ ಹಾಗೂ ಸ್ಟಾರ್ ಇರುವ ಹಿಂದೆ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಅಲ್ಲಿ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಅದರ ಮುಂದುಗಡೆ ಖರಾಬ್ ಜಮೀನು ಎಷ್ಟಿದೆ ಎಂಬ ಮಾಹಿತಿ ಇರುತ್ತದೆ.  ಅದರ ಕೆಳಗಡೆ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಒಟ್ಟು ಎಷ್ಟು ಎಕರೆ ಗುಂಟೆ ಜಮೀನಿದೆ. ಅದರ ಕೆಳಗಡೆ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಸ್ವಾಧೀನದಾರರು ಅಂದರೆ ಜಮೀನಿನ ಮಾಲಿಕರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ

ಇದು ಮುಟೇಶನ್ ಪ್ರಕಾರ ಜಮೀನು ವರ್ಗಾವಣೆಯಾಗಿರುತ್ತದೆ.  ಮುಟೇಶನ್ ಪ್ರಕಾರ ಮಾಲಿಕರ ಹೆಸರು ಜಂಟಿಯಾಗಿದ್ದಾರೆ ಯಾರ ಯಾರ ಹೆಸರಿಗೆ ಜಂಟಿಯಿದೆ ಎಂಬ ಮಾಹಿತಿಯೂ ಇರುತ್ತದೆ.

ಈ ಮಾಹಿತಿ ವೀಕ್ಷಿಸುವುದಕ್ಕಾಗಿ ಇದೆ. ಸರ್ಕಾರವು ರೈತರಿಗೆ ಸುಲಭವಾಗಿ ಜಮೀನಿನ ದಾಖಲೆಗಳು ಹಾಗೂ ಮಾಹಿತಿಗಳು ಆನ್ಲೈನ್ ನಲ್ಲೇ ಸಿಗಲೆಂಬ ಉದ್ದೇಶದಿಂದಾಗಿ ಈ ವ್ಯವಸ್ಥೆ ಮಾಡಿದೆ. ಈಗ ಜಮೀನಿನ ದಾಖಲೆಗಳನ್ನು ಆನ್ಲೈನ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೂ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ವೀಕ್ಷಿಸಬಹುದು.

1 thought on “ಮುಟೇಶನ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ”

Leave a comment