ಇಂದು ಗೃಹಲಕ್ಷ್ಮೀ 8ನೇ ಕಂತಿನ ಹಣ ಜಮೆ ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Gruhalakshmi  8th installment  credited : ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಮಹಿಳೆಯರು ತಮಗೆ  ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ನೀವು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ್ದೀರಾ? ಹಾಗಾದರೆ ನಿಮಗೆ 8ನೇ ಕಂತಿನ ಹಣ ಜಮೆಯಾಯಿತೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ನಿಮಗೆ ಜಮೆಯಾಗಿಲ್ಲವಾದರೆ ನಿಮಗೇಕೆ ಹಣ ಜಮೆಯಾಗಿಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Gruhalakshmi  8th installment  credited ಗೃಹಲಕ್ಷ್ಮೀ ಯೋಜನೆಯ ಹಣ ನಿಮಗೆ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಮಹಿಳೆಯರಿಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಆಗ ನಿಮಗೆ ಮಾಹಿತಿ ಕಣಜದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ  Details of Gruhalakshmi status ಕೆಳಗಡೆ ನಿಮ್ಮ ರೇಶನ್ ಕಾರ್ಡ್ ನಮೂದಿಸಬೇಕು.  ನಂತರ submit ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಯಾವ ದಿನಾಂಕದಂದು ಅರ್ಜಿ ಹಾಕಿದ್ದೀರಿ. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಹಾಗೂ ಯಾವ ದಿನಾಂಕ ಅರ್ಜಿ ಸ್ವೀಕೃತವಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಇರುವ Details ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಯಾವ ಯಾವ ತಿಂಗಳಲ್ಲಿ ಜಮೆಯಾಗಿದೆ. ಯಾವ ತಿಂಗಳ ಯಾವ ದಿನಾಂಕದಂದು ಜಮಯಾಗಿದೆ ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.

ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಆರಂಭಿಸಲಾಗಿದೆ. ಹೌದು, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಅವರ ಖಾತೆಗೆ ಜಮೆ ಮಾಡಿದರೆ ಅವರು ಆ ಹಣವನ್ನು ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ನೀಡುವ ಹಣವನ್ನು ಮಹಿಳೆಯರು ಮನೆಗೆ ಬೇಕಾಗುವ ದಿನಿನಿತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕು. ಹಣವನ್ನು ದುರುಪಯೋಗ ಪಡೆದುಕೊಳ್ಳಬಾರದು.

ಇದನ್ನೂ ಓದಿ : ರೇಷನ್ ಕಾರ್ಡ್ ಪಟ್ಟಿಯಲ್ಲಿ ಯಾರ ಹೆಸರಿದೆ? ಚೆಕ್ ಮಾಡಿ

ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಮಹಿಳಾ ಫಲಾನುಭವಿಗಳ ಖಾತೆಗೆ 8 ಕಂತುಗಳು ಜಮೆಯಾಗಿವೆ. ತಡವಾಗಿ ಯೋಜನೆಗೆ ನೋಂದಣಿ ಮಾಡಿಸಿದ ಮಹಿಳೆಯರ ಖಾತೆಗೆ ಕಡಿಮೆ ಕಂತುಗಳು ಜಮೆಯಾಗಿರಬಹುದು. ಒಟ್ಟಿನಲ್ಲಿ ಮಹಿಳೆಯರು ಯಾವ ತಿಂಗಳಲ್ಲಿ ನೋಂದಣಿ ಮಾಡಿಸಿದ್ದಾರೋ ಆ ನಂತರದ ತಿಂಗಳಿಂದ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಹಾಗಾಗಿ ನಿಮಗೆ ಇಲ್ಲಿಯವರೆಗೆ ಯಾವ ಯಾವ ತಿಂಗಳು ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಮಾಡಲಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಯಾವ ಯಾವ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಜಮೆಯಾಗಲಿದೆ?

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯುವ ವಿತರಿಸುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗುವುದು.

ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ.  ಕುಟುಂಬ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರಿಗೆ ಹಣ ಜಮೆಯಾಗುವುದಿಲ್ಲ.  ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆದಎಲ್ಲಾಮಹಿಳೆಯರ ಖಾತೆಗೆ ಯೋಜನೆಯ ಹಣ ಜಮೆ ಮಾಡಲಾಗುತ್ತಿದೆ.

Leave a Comment