ಪಡಿತರ ಚೀಟಿಯಲ್ಲಿ ಹಲವಾರು ಫಲಾನುಭವಿಗಳ ಹೆಸರು ರದ್ದುಗೊಳಿಸಲಾಗಿದೆ. ಏಕೆಂದರೆ ಶ್ರೀಮಂತರೂ ಸಹ ಬಿಪಿಎಲ್ ಕಾರ್ಡ್ ಪಡೆದಿದ್ದರಿಂದ ಹಲವರ ಹೆಸರು ತೆಗೆಯಲಾಗಿದೆ. ಹಾಗಾಗಿ ಸಾರ್ಜಜನಿಕರು ಯಾರ ಹೆಸರ ತೆಗೆಯಲಾಗಿದೆ ಹಾಗೂ ಯಾರ ಹೆಸರು ಉಳಿಸಲಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಮಾಹಿತಿ.
ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check Ration card status in mobile)
ಸಾರ್ವಜನಿಕರು ರೇಷನ್ ಕಾರ್ಡ್ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಬಲಗಡೆ ಕೆಲವು ಆಯ್ಕೆಗಳು ಕಾಣುತ್ತವೆ. ವಿಧಾನ, ಇ ಪಡಿತರ ಚೀಟಿ, ಇ-ಸ್ಥತಿ, ಇ ನ್ಯಾಯಬೆಲೆ ಅಂಗಡೆ, ಸಾರ್ವಜನಿಕ ದೂರು ಮತ್ತು ಬಹುಮಾನ ಯೋಜನೆ, ಎಸ್.ಎಂಎಸ್ ಸೇವೆ, ಸೌಕರ್ಯ ಕೇಂದ್ರಗಳು, ಅಂಕಿ ಅಂಶ, ಟೆಂಡರ್, ದರಗಳು, ಹೀಗೆ ವಿವಿಧ ಆಯ್ಕೆಗಳು ಕಾಣುತ್ತವೆ.
ಅಲ್ಲಿ ನೀವು ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರಇನ್ನಿ ಕೆಲವು ಆಯ್ಕೆಗಳು ಕಾಣಿಸುತ್ತವೆ. ಹೊಸ ಪಡಿತರ ಚೀಟಿ, ಪಡಿತರ ಚೀಟಿ ತೋರಿಸು, ಹಂಚಿಕೆ, ಪಡಿತರಎತ್ತುವಳಿ ಸ್ಥಿತಿ, ಅಪ್ಡೇಟ್ ಆಧಾರ್, ರದ್ದುಗೊಳಿಸಲಾದ /ತಡೆಹಿಡಿಯಲಾದ ಪಟ್ಟಿ, ಹಳ್ಳಿ ಪಟ್ಟಿ ವಿತರಣೆಯಾಗುವ ಹೊಸ ಪಡಿತರ ಚೀಟಿ ಹೀಗೆ ಹಲವಾರು ಆಯ್ಕೆಗಳು ಕಾಣುತ್ತದೆ.
ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಿ (click on village list)
ಅಲ್ಲಿ ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ತೆರೆದುಕೊಳ್ಳುತ್ತದೆ.ಅಲ್ಲಿ ಜಿಲ್ಲೆ ತಾಲೂಕು, ಗ್ರಾಮ ಪಂಚಾಯತ್, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಯಾರ ಯಾರ ಹೆಸರಿನಲ್ಲಿ ಪಡಿತರ ಚೀಟಿ ಇದೆ ಎಂಬ ಪಟ್ಟಿ ಕಾಣಿಸುತ್ತದೆ.
ರದ್ದುಗೊಳಿಸಲಾದ/ತಡೆಹಿಡಿಯಲಾದ ರೇಶನ್ ಕಾರ್ಡ್ ಫಲಾನುಭವಿಗಳ ಹೆಸರು (Show cancelled/suspended list)
ಪಡಿತರ ಚೀಟಿ ಹೊಂದಿದವರು ತಮ್ಮ ಹೆಸರು ರದ್ದುಗೊಳಿಸಲಾಗಿದೆಯೇ ಎಂಬುದನ್ನು ಚೆಕ್ ಮಾಡಲು ರದ್ದುಗೊಳಿಸಲಾದ ತಡೆಹಿಡಿಯಲಾದ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ಆಗ ಜಿಲ್ಲೆ, ತಾಲೂಕು, ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ಮಾಡಿಕೊಳ್ಳಬೇಕು.ನಂತರ ಗೊ ಮೇಲೆ ಕ್ಲಿಕ್ ಮಾಡಬೇಕು. ಆಗ ಯಾರ ಯಾರ ಹೆಸರನ್ನು ತೆಗೆಯಲಾಗಿದೆ. ಯಾವಾಗ ತೆಗೆಯಲಾಗಿದೆ? ಯಾವ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂಬ ಕಾರಣವನ್ನು ಬರೆಯಲಾಗಿದೆ.
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ
ರೇಶನ್ ಕಾರ್ಡ್ ಹೊಂದಿದವರಿಗೆ ಏನೇನು ಸೌಲಭ್ಯ ಸಿಗುವುದು? (What facility will get beneficiary)
ರೇಶನ್ ಕಾರ್ಡ್ ಇದ್ದವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ, ಗೋಧಿ, ವಿತರಿಸಲಾಗುವುದು. ಹೌದು, 2013 ರಿಂದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಈ ಸೌಲಭ್ಯ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಯೊಂದಿಗೆ ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಭೂರಹಿತರಿಗೆ, ವಿಧವೆಯರಿಗೆ, ಹೆಚ್ಐವಿ ಪೀಡಿತ ಕುಟುಂಬದ ಮುಖ್ಯಸ್ಥರಿಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ನಿಮ್ಮರೇಶನ್ ಕಾರ್ಡ್ ಮೊಬೈಲ್ ಚೆಕ್ ಮಾಡುವುದು ಹೇಗೆ?
ರೇಶನ್ ಕಾರ್ಡ್ ಫಲಾನುಭವಿಗಳು ತಮ್ಮ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಅಲ್ಲಿ ಕಾಣುವ ಇ ಸ್ಥಿತಿ (E status) ಮೇಲೆ ಕ್ಲಿಕ್ ಮಾಡಿ ನಂತರ ಜಿಲ್ಲೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಪಡಿತರ ವಿವರ ಗುಂಡಿ ಮೇಲೆ ಒತ್ತಿ ಚೆಕ್ ಮಾಡಬಹುದು.