ಕುರಿ, ಹಸು, ಎಮ್ಮೆ ಘಟಕ ಸ್ಥಾಪನೆಗೆ 54 ಸಾವಿರ ಸಬ್ಸಿಡಿ

Written by Ramlinganna

Updated on:

Subsidy for goat unit establishment ಕುರಿ, ಮೇಕೆ, ಹಸು, ಎಮ್ಮೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ 54 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಬಾಗಲಕೋಟೆ, ಕೊಪ್ಪಳ, ಕಲಬುರಗಿ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತಸಾಲಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಉಳಿಕೆ ಅನುದಾನದಡಿ ಕುರಿ, ಮೇಕೆ, ಮತ್ತು ಹಸು, ಎಮ್ಮೆ ಘಟಕಗಳನ್ನು ಸ್ಥಾಪಿಸಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ನಿಯಮಾನುಸಾರ ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲೆಗಳ ಜೊತೆ ಫ್ರೂಟ್ಸ್ ಐಡಿಯೊಂದಿಗೆ ಡಿಸೆಂಬರ್ 22 ರ ಒಳಗಾಗಿ ಆಯಾ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಈ ದಿನ ಬಿಡುಗಡೆ- ನಿಮ್ಮ ಹೆಸರು ಮೊಬೈಲ್ ನಲ್ಲೆ ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08354 235634 ಗೆ ಸಂಪರ್ಕಿಸಬಹುದು ಎಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಕೊಪ್ಪಳ ಜಿಲ್ಲೆಯ ರೈತರಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 19 ಕೊನೆಯ ದಿನ

ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮ ದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಒಂದು ಮಿಶ್ರ ತಳಿ ಹಸು ಅಥವಾ ಸುಧಾರಿತ ತಳಿ ಎಮ್ಮೆ ಘಟಕ ಮತ್ತು ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್. ನಾಗರಾಜ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಕುರಿ, ಮೇಕೆ, ಹಸರು ಅಥವಾ ಸುಧಾರತಿ ತಳಿ ಎಮ್ಮೆ ಘಟಕ ಸ್ಥಾಪನೆಗೆ 60 ಸಾವಿರ ರೂಪಾಯಿ ಇದ್ದು, ಇದರಲ್ಲಿ 54 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ರೈತರು ವಂತಿಕೆ ಅಥವಾ ಬ್ಯಾಂಕ್ ನಿಂದ ಸಾಲ ಪಡೆದು ಪಾವತಿಸಬಹುದು.

Subsidy for goat unit establishment ಕಲಬುರಗಿ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ

2022-23ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವುದಕ್ಕಾಗಿ ಉಳಿಕೆ ಅನುದಾನದಡಿಯಲ್ಲಿ ಒಂದು ಮಿಶ್ರ ತಳಿ ಹಸು, ಸುಧಾರಿತ ಎಮ್ಮೆ, ಅಥವಾ 10 ಕುರಿ ಒಂದು ಹೋತ (10+1) ಕುರಿ ಮೇಕೆ ಘಟಕ ಸ್ಥಆಪನಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ ನೀವು ನಿಂತಿರುವ ಸ್ಥಳ ಯಾವ ಸರ್ವೆ ನಂಬರಿನಲ್ಲಿ ಬರುತ್ತದೆ? ಯಾರ ಹೆಸರಿಗಿದೆ? ಮೊಬೈಲ್ ನಲ್ಲೆ ಚೆಕ್ ಮಾಡಿ

ಜಿಲ್ಲೆಯ ಅರ್ಹ ರೈತರ ಡಿಸೆಂಬರ್ 30 ರೊಳಗಾಗಿ ಸಂಬಂಧಪಟ್ಟ ತಾಲೂಕಿನ ಪಶು ವೈದ್ಯ ಸೇವಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರ ಗ್ರಾಮೀಣ ರೈತರು 9448636136, ಆಳಂದ ತಾಲೂಕಿನ ರೈತರು 944861345ಗೆ ಸಂಪರ್ಕಿಸಬಹುದು. ಅದೇ ರೀತಿ ಜೇವರ್ಗಿ ತಾಲೂಕಿನ ರೈತರು 9972555636 ಗೆ ಕರೆ ಮಾಡಬಹುದು. ಅಫಜಲ್ಪೂರ ತಾಲೂಕಿನ ರೈತರು 9449123571ಗೆ ಚಿತ್ತಾಪುರ ತಾಲೂಕಿನ ರೈತರು 9611732647 ಗೆ ಸಂಪರ್ಕಿಸಬಹುದು. ಇದರೊಂದಿಗೆ ಚಿಂಚೋಳಿ ತಾಲೂಕಿನ ರೈತರು 9880220932 ಹಾಗೂ ಸೇಡಂ ತಾಲೂಕಿನ ರೈತರು 9449618724 ಗೆ ಸಂಪರ್ಕಿಸಲು ಕೋರಲಾಗಿದೆ.

ಉಚಿತ ಸಹಾಯವಾಣಿ

ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಲ್ಲಿಆಸಕ್ತಿಯಿರುವ ರೈತರು ಕುರಿ, ಕೋಳಿ, ಹೈನುಗಾರಿಕೆ ಕುರಿತಂತೆ ಮಾಹಿತಿ ಪಡೆಯಲು ಈ 8277 100 200 ಗೆ ಕರೆ ಮಾಡಿ ದಿನದ 24 ಗಂಟೆ ಮಾಹಿತಿ ಪಡೆಯಬಹುದು.

Leave a Comment