ನೀವು ನಿಂತಿರುವ ಸ್ಥಳ ಯಾವ ಸರ್ವೆ ನಂಬರಿನಲ್ಲಿದೆ? ಚೆಕ್ ಮಾಡಿ

Written by Ramlinganna

Updated on:

Check survey number land  ರೈತರು ರಾಜ್ಯದ ಯಾವುದೇ ಮೂಲೆಯಲ್ಲಿರಲಿ, ತಾವು ನಿಂತಿರುವ ಸ್ಥಳ ಯಾರ ಹೆಸರಿಗಿದೆ? ಆ ಜಮೀನಿನ ಮಾಲಿಕಾರರು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Check survey number land  ನಿಂತಿರುವ ಸರ್ವೆ ನಂಬರ್ ಯಾವುದು ಚೆೆೆಕ್ ಮಾಡಿ

ಹೌದು, ಇದು ನಿಜ. ರೈತರು ಜಮೀನಿನ ಯಾವುದೇ ಮೂಲೆಯಲ್ಲಿ ನಿಂತಿರಲಿ, ಆ ಜಮೀನಿನ ಸರ್ವೆನಂಬರ್ ಹಾಗೂ ಜಮೀನು ಯಾರ ಹೆಸರಿಗಿದೆ ಎಂಬ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು. ರೈತರು ನಿಂತಿರುವ ಜಮೀನಿನ ವಿವರ ತಿಳಿಯಲು ಈ

ಲಿಂಕ್

https://play.google.com/store/apps/details?id=com.ksrsac.sslr&hl=en_IN

ಮೇಲೆ ಕ್ಲಿಕ್ ಮಾಡಬೇಕು. ಆಗ ದಿಶಾಂಕ್ ಆ್ಯಪ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Install ಮೇಲೆ ಕ್ಲಿಕ್ ಮಾಡಬೇಕು. ನಂತರ  Open ಮೇಲೆ ಕ್ಲಿಕ್ ಮಾಡಬೇಕು. ನಂತರ While Using  the App ಮೇಲೆ ಕ್ಲಿಕ್ ಮಾಡಬೇಕು.  ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಕನ್ನಡದಲ್ಲಿ ಮಾಹಿತಿ ನೋಡಬೇಕಾದರೆ ಕನ್ನಡವೆಂದು, ಇಂಗ್ಲೀಷ್ ನಲ್ಲಿ ಮಾಹಿತಿ ನೋಡಬೇಕೆಂದುಕೊಂಡರೆ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್ ನಮೂದಿಸಿ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಓಟಿಪಿ ನಮೂದಿಸಿ ಮತ್ತು ನೋಂದಾಯಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ  ದಿಶಾಂಕ್ ಆ್ಯಪ್ ತೆರೆದುಕೊಳ್ಳುತ್ತದೆ. ನೀವು ಯಾವ ಸರ್ವೆ ನಂಬರಿನಲ್ಲಿ ನಿಂತಿರುತ್ತೀರೋ ಅಲ್ಲಿ ಪಾಯಿಂಟ್ ಮಾಡಲಾಗಿರುತ್ತದೆ. ಸ್ವಲ್ಪ ಝೂಮ್ ಮಾಡಿ ನೋಡಬೇಕು. ಸರ್ವೆ ನಂಬರಿನ ಯಾವ ಮೂಲೆಯಲ್ಲಿ ನಿಂತಿದ್ದೀರಿ ಎಂಬ ಪಾಯಿಂಟ್ ಕಾಣುತ್ತದೆ.

ನೀವು ನಿಂತಿರುವ ಸರ್ವೆ ನಂಬರ್ ಸುತ್ತಮುತ್ತಲಿನ ಸರ್ವೆ ನಂಬರ್ ಗಳು, ರಸ್ತೆಗಳು, ನಗರ ಪ್ರದೇಶದಲ್ಲಿದ್ದರೆ ಅಕ್ಕಪಕ್ಕದ ಏರಿಯಾಗಳು ಅಲ್ಲಿ ಕಾಣುತ್ತದೆ. ಅಲ್ಲಿ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಸರ್ವೆ ನಂಬರ್, ಗ್ರಾಮದ ಹೆರು, ಹೋಬಳಿ, ತಾಲೂಕು, ಜಿಲ್ಲೆಯ ಹೆಸರು ಕಾಣುತ್ತದೆ. ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಹಿಸ್ಸಾ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಎರಡು ಮೂರು ಹಿಸ್ಸಾಗಳಿದ್ದರೆ ಒಂದೊಂದಾಗಿ ಹಿಸ್ಸಾ ಆಯ್ಕೆ ಮಾಡಿಕೊಂಡು ಚೆಕ್ ಮಾಡಬೇಕು.

ಇದನ್ನೂ ಓದಿ ನಿಮ್ಮ ಜಮೀನಿನೊಂದಿಗೆ ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಂಟಿಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡ ನಂತರ ಮಾಲಿಕರು ಮೇಲೆ ಕ್ಲಿಕ್ ಮಾಡಬೇಕು. ನಂತರ ಆ ಜಮೀನಿನ ಮಾಲಿಕರಾರು, ಅವರ ಹೆಸರಿಗೆ ಜಮೀನು ಎಷ್ಟು ವಿಸ್ತೀರ್ಣದಲ್ಲಿದೆ. ಆ ಸರ್ವೆ ನಂಬರಿನಲ್ಲಿ ಮಾಲಿಕರ ಹೆಸರು ಅಂದರೆ ಒಂದಕ್ಕಿಂತ ಹೆಚ್ಚು ಹೆಸರುಗಳಿದ್ದರೆ ಅವರ ಹೆಸರು ಸಹ ಕಾಣುತ್ತದೆ.  ಇದೇ ರೀತಿ ಅಲ್ಲಿ ಎಷ್ಟು ಹಿಸ್ಸಾ ನಂಬರ್ ಗಳಿರುತ್ತವೆಯೋ ಒಂದೊಂದಾಗಿ ಆಯ್ಕೆ ಮಾಡಿಕೊಂಡು ಮಾಲಿಕರು ಮೇಲೆ ಕ್ಲಿಕ್ ಮಾಡಿದರೆ ಸಾಕು, ಆ ಹಿಸ್ಸಾ ನಂಬರಿನ ಮಾಲಿಕರು ಯಾರು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ನಿಂತಲ್ಲೇ ನಿಮ್ಮ ಜಮೀನಿನ ಅಳತೆ ಮಾಡಿ

ನೀವು ನಿಂತಿರುವ ಜಮೀನಿನ ಅಳತೆ ಮಾಡಬೇಕಾದರೆ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮೂರು ಆಯ್ಕೆಗಳು ಕಾಣುತ್ತವೆ. ಅಲ್ಲಿ ಲೈನ್ ಆಯ್ಕೆ ಮಾಡಿಕೊಳ್ಳಬೇಕು. ನೀವು ನಿಂತಿರುವ ಸರ್ವೆ ನಂಬರ್ ನ ಯಾವುದಾದರೊಂದು ಮೂಲೆಯಲ್ಲಿ ಕ್ಲಿಕ್ ಮಾಡಬೇಕು. ಅಲ್ಲಿಂದ ಇನ್ನೊಂದು ಮೂಲೆಯಲ್ಲಿ ಕ್ಲಿಕ್ ಮಾಡಬೇಕು. ಆಗ ಅದರ ಉದ್ದ ಎಷ್ಟಿದೆ ಎಂಬುದನ್ನ ಚೆಕ್ ಮಾಡಬಹುದು. ಅಲ್ಲಿ ಮೀಟರ್, ಕಿಲೋ ಮೀಟರ್ ಹಾಗೂ ಫೀಟ್ ಆಯ್ಕೆಗಳಿರುತ್ತವೆ. ಯಾವುದರ ಮೂಲಕ ಅಳತೆ ಮಾಡಬೇಕೆಂದುಕೊಂಡಿದ್ದೀರೋ  ಅಲ್ಲೆ ಆಯ್ಕೆ ಮಾಡಿಕೊಂಡು ಅಳತೆ ಮಾಡಬಹುದು. ಇದೇ ರೀತಿ ನಾಲ್ಕು ಮೂಲೆಗಳ ಮೇಲೆ ಕ್ಲಿಕ್ ಮಾಡಿ ಅಳತೆ ಮಾಡಬಹುದು.

Leave a Comment