ನಿಮ್ಮ ಜಮೀನು ಜಂಟಿಯಾಗಿದೆಯೋ ಅಥವಾ ಪ್ರತ್ಯೇಕವಾಗಿ ನಿಮ್ಮ ಹೆಸರಿಗಿದೆಯೋ ಯಾರಿಂದ ಖರೀದಿ ಮಾಡಲಾಗಿದೆ ಎಷ್ಟು ಎಕರೆ ನಿಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನು ಯಾರಿಗೆ ವರ್ಗಾವಣೆಯಾಗಿದೆ? ಪೌತಿ ಖಾತೆಯಡಿ ವರ್ಗಾವಣೆಯಾಗಿದೆಯೋ ಅಥವಾ ಪೋಡಿಯಾಗಿದೆಯೋ ಇದಲ್ಲದೆ ಯಾವ ವರ್ಷದಲ್ಲಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ರೈತರ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು.

ನಿಮ್ಮ ಜಮೀನು ಜಂಟಿಯಾಗಿದಿಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನು ಜಂಟಿಯಾಗಿರುವುದನ್ನು ಚೆಕ್ ಮಾಡಲು ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.ಇದಾದ ಮೇಲೆ ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ನಮೂದಿಸಬೇಕು. ನಂತರ  Get Report ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಮುಟೇಶನ್ ಸಮ್ಮರಿಯಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಿಸ್ಸಾ ನಂಬರ್ ಗಳ ಮಾಹಿತಿ ಕಾಣುತ್ತದೆ. ಅಂದರೆ ಯಾವ ವರ್ಷದಲ್ಲಿ ಜಮೀನು ವರ್ಗಾವಣೆ ಹೇಗೆ ಆಗಿದೆ ಎಂಬ ಮಾಹಿತಿ ಕಾಣುತ್ತದೆ.

ಅದರ ಕೆಳಗಡೆ ನಿಮ್ಮ ಸರ್ವೆ ನಂಬರ್ ಹಾಗೂ ಹಿಸ್ಸಾನಂಬರ್ ಸಹಿತ ಜಮೀನು ಜಂಟಿಯಾಗಿದ್ದರೆ ಯಾರ ಹೆಸರಿನೊಂದಿಗೆ ಹಾಗೂ ಎಷ್ಟು ಎಕರೆ ಜಂಟಿಯಾಗಿದೆ ಎಂಬ  ಮಾಹಿತಿ ಇರುತ್ತದೆ. ಜಮೀನು ವರ್ಗಾವಣೆಯು ಯಾರ ಹೆಸರಿನಂದ ವರ್ಗಾವಣೆಯಾಗಿದೆ ಅಂದರೆ ಹಕ್ಕು ಬದಲಾವಣೆ ಮಾಡಿದವರು ಯಾರು? ಹಕ್ಕು ಬದಲಾವಣೆ ಪಡೆದವರಾರು? ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮ ಸರ್ವೆ ನಂಬರ್ ನೊಂದಿಗೆ ನಿಮ್ಮ ಅಕ್ಕಪಕ್ಕದಲ್ಲಿರುವ ಜಮೀನು ಹಕ್ಕು ಬದಲಾವಣೆ ಹೇಗಾಗಿದೆ? ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಚೆಕ್ ಮಾಡಬಹುದು.

ಇದನ್ನುೂ ಓದಿ ನಿಮಗೆ ಎಷ್ಟು ಎಕರೆಗೆ ಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಸರ್ವೆ ನಂಬರಿನಲ್ಲಿ ಮಾಲಿಕರ ಹೆಸರು ಜಂಟಿಯಾಗಿರುವುದನ್ನು ಸೇರಿಸಲಾಗಿದೆಯೋ ಅಥವಾ ತೆಗೆಯಲಾಗಿದೆಯೋ? ಎಷ್ಟು ಎಕರೆ  ಜಮೀನು ಜಂಟಿಯಾಗಿ ಸೇರಿಸಲಾಗಿದೆ ಹಾಗೂ ತೆಗೆಯಲಾಗಿದೆ ಈ ಮಾಹಿತಿಯೂ ಕಾಣುತ್ತದೆ.

ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಸರ್ವೆ ಹಾಗೂ ಹಿಸ್ಸಾ ನಂಬರ್ ಗಳು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಜಂಟಿಯಾಗಿದ್ದರೆ ಯಾರ ಯಾರ ಹೆಸರಿಗೆ ಜಂಟಿಯಾಗಿದೆ ಎಷ್ಟು ಎಕರೆ ಜಂಟಿಯಾಗಿದೆ ಎಂಬ ಮಾಹಿತಿಯೂ ಇಲ್ಲಿ ಸಿಗುತ್ತದೆ.  ಜಮೀನಿನ ಖಾತೆ ಹೇಗೆ ಬದಲಾವಣೆಯಾಗಿದೆ ಪೌತಿ ಖಾತೆಯಿಂದಲೋ ಅಥವಾ ಪೋಡಿಯಿಂದಲೋ ಇದರೊಂದಿಗೆ ಯಾವ ವರ್ಷದಲ್ಲಿ ವರ್ಗಾವಣೆಯಾಗಿದೆ?

ಜಮೀನಿನ ಮುಟೇಶನ್ ಸ್ಥಿತಿ ಅಂದರೆ ಈಗ ಯಾರ ಜಮೀನು ಯಾರ ಹೆಸರಿಗಿದೆ ಹಾಗೂ ಎಷ್ಟು ಎಕರೆ ಜಮೀನು ಯಾರ ಹೆಸರಿಗಿದೆ ಎಂಬುದನ್ನು ರೈತರು ಮನೆಯಲ್ಲೇ ಕುಳಿತು ಚೆಕ್ ಮಾಡಬಹುದು. ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನೊಂದಿಗೆ ಅಕ್ಕಪಕ್ಕದ ಸರ್ವೆ ನಂಬರ್ ಜಮೀನಿನ ಇತಿಹಾಸವನ್ನು ಮೊಬೈಲ್ ನಲ್ಲೇ ತಿಳಿಯಬಹುದು.  ರೈತರ ಜಮೀನಿನ ದಾಖಲೆಗಳ ಮಾಹಿತಿಗಾಗಿ ಸರ್ಕಾರಿ ಕಚೇರಿಗಳ ಅಧಿಕಾರಿಗಳ ಬಳಿ ಕೈಕಟ್ಟಿ ನಿಂತುಕೊಳ್ಳಬಾರದು. ಜಮೀನಿನ ಎಲ್ಲಾ ದಾಖಲೆಗಳು ರೈತರು ಬಯಸಿದಾಗ ಸಿಗಲೆಂಬ ಉದ್ದೇಶದಿಂದಾಗಿ ಸರ್ಕಾರವು ಈ ವ್ಯವಸ್ಥೆ ಮಾಡಿದೆ.

Leave a Reply

Your email address will not be published. Required fields are marked *