2021-22 ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಕಲಬುರಗಿ ಜಿಲ್ಲೆಗೆ 2021 ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ಯುನಿವರಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ್ ಕಂಪನಿ ಲಿ. ಬೆಂಗಳೂರು (Universal Sompo General Insurance Co.Ltd) Bangalore) ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ. ಇತರ ಜಿಲ್ಲೆಗಳಿಗೆ ಯುನಿವರಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ್ ಕಂಪನಿ ಸೇರಿದಂತೆ ಬೇರೆ ಬೇರೆ ವಿಮಾ ಸಂಸ್ಥೆಗಳಿಗೆ ನೀಡಲಾಗಿದೆ. ನಿಮ್ಮ ಜಿಲ್ಲೆಯ ವಿಮೆ ಕಂಪನಿಯ ಮಾಹಿತಿ ಪಡೆಯಲು ರೈತರು ಸಹಾಯವಾಣಿ ಸಂಖ್ಯೆ 1800 200 5142 ಗೆ ಕರೆ ಮಾಡಿ ವಿಚಾರಿಸಬಹುದು.
ಯಾವ ಯಾವ ಘಟನೆಯಿಂದ ಬೆಳೆ ನಷ್ಟವಾದರೆ ವಿಮೆ ನೀಡಲಾಗುವುದು?
ಸ್ಧಳ, ನಿರ್ಧಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ ಭೂ ಕುಸಿತ ಬೆಳೆ ಮುಳುಗಡೆ, ಮೇಘ ಸ್ಪೋಟ, ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ಬೆಳೆ ವಿಮೆ ಪರಿಹಾರ ನೀಡಲಾಗುವುದು.
ಬೆಳೆ ನಷ್ಟವಾದರೆ ಯಾರಿಗೆ ಯಾವಾಗ ಮಾಹಿತಿ ನೀಡಬೇಕು?
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಸ್ಥಳಿಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ (1800 200 5142) ಗೆ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.
ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಲಾಗುವದು.
ಇದನ್ನೂ ಓದಿ : 2020-21ನೇ ಸಾಲಿನ ಬೆಳೆ ವಿಮೆ ಹಣ ಜಮೆಯ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
2021 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಇಂಡೆಮ್ನಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ. 90 ಹಾಗೂ ಮಳೆಆಶ್ರಿತ ಬೆಳೆಗಳಿಗೆ ಶೇ. 80 ಎಂದು ನಿಗಧಿಪಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಅಧಿಸೂಚಿತ ಘಟಕದಲ್ಲಿ ಸಂಬವಿಸುವ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ /ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ ತೀವ್ರ ಬರಗಾಲ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು, ನಿರೀಕ್ಷಿತ ಇಳುವರಿಯು ಪ್ರಾರಂಬಿಕ ಇಳುವರಿಯ ಶೇಕಡಾ 50 ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಲೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25 ರಷ್ಟು ಹಣವನ್ನು ಮುಂಚಿತವಾಗಿ ವಿಮೆ ಸಂಸ್ಥೆಗಳು ನೀಡುವದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿ ಬಂದ ನಂತರ ಅಂತಿಮ ಬೆಲೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡಬಹುದಾಗಿದೆ.
ಬೆಳೆವಿಮೆ ಮಾಡಿಸುವುದು ಹೇಗೆ?
ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಪ್ರಸ್ತಕ ಹಂಗಾಮಿಗಾಗಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಲ್ಲಿ ಒಳಪಡಿಸಲಾಗಿದೆ. ಮಂಜೂರಾದ ಬೆಳೆ ಸಾಲದ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ ರೈತರ ವಿಮಾ ಕಂತನ್ನು ನಿಯಮಾನುಸಾರ ಮಂಜೂರು ಮಾಡಬಹುದಾಗಿದೆ.
ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ / ಖಾತೆ / ಪಾಸ್ ಪುಸ್ತಕ / ಕಂದಾಯ ರಶೀದಿಯನ್ನು ನೀಡತಕ್ಕದ್ದು.
ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು / ಉಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೆ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಅವಧಿಯೊಳಗೆ ನೊಂದಾಯಿತ ಆಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಡೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು, ಅಂತಹ ಸಂದರ್ಬದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರು ಪಾವತಿಸುವುದು.
ಈ ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಧೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗಿದೆ. ಇಂತಹ ಸ್ಥಳಿಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.
ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು÷ ನಡೆಸುವ ಬೆಳೆ ಕಟಾವು÷ ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಿ ಇತ್ಯರ್ಥಪಡಿಸಲಾಗುವದು. ಇತರೆ ಇಳುವರಿ ಅಂದಾಜು ಮಾಡುವಂತಹ ವಿಧಾನಗಳಾದ ಆಣೆವಾರಿ ಅಥವಾ ರಾಜ್ಯ ಸರ್ಕಾರವು÷ ಅಥವಾ ಯಾವುದೇ ಇಲಾಖೆ ಅಥವಾ ಸಂಸ್ಧೆ, ಕ್ಷಾಮ, ಬರ, ಪ್ರವಾಹ ಎಂದು ಘೋಷಿಸಿ ಇಳುವರಿ ನಷ್ಟವನ್ನು ಅಂದಾಜು ಮಾಡುವ ಮಾಹಿತಿಯನ್ನು ಈ ಯೋಜನೆಯಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಲು ಪರಿಗಣಿಸುವದಿಲ್ಲ.
2021-22ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ಇಂಡೆಮ್ನಿಟಿ ಮಟ್ಟ, ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರಗಳು.
ಕ್ರ. ಸಂ. | ನಿರ್ಧರಿತ ಬೆಳೆಗಳು | ಇಂಡೆಮ್ನಿಟಿ ಮಟ್ಟ ಶೇ. | ವಿಮಾ ಮೊತ್ತ (ರೂ. ಗಳಲ್ಲಿ) | ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ ಗೆ (ಪ್ರಾರಂಭಿಕ ಇಳುವರಿಯ ಮೌಲ್ಯದವರೆಗೆ) | ನೊಂದಣಿಗೆ ಕೊನೆಯ ದಿನಾಂಕ | ||
ವಿಮಾ ಕಂತು (ಶೇಕಡ) | ರೈತರ ವಂತಿಕೆ ಪ್ರತಿ ಹೇಕ್ಟರಗಳಲ್ಲಿ | ರೈತರ ವಂತಿಕೆ (ಎಕರೆಗಳಲ್ಲಿ) | |||||
1 | ಭತ್ತ (ನೀರಾವರಿ) | 90 | 86000 | 1.50 | 1290 | 516 | 31.12.2021 |
2 | ಜೋಳ (ನೀರಾವರಿ) | 90 | 40000 | 1.50 | 600 | 240 | 30.11.2021 |
3 | ಜೋಳ (ಮಳೆ ಆಶ್ರಿತ) | 80 | 34000 | 1.50 | 510 | 204 | 30.11.2021 |
4 | ಮುಸುಕಿನ ಜೋಳ (ನೀರಾವರಿ) | 90 | 59000 | 1.50 | 885 | 354 | 31.12.2021 |
5 | ಗೋಧಿ (ನೀರಾವರಿ) | 90 | 40000 | 1.50 | 600 | 240 | 31.12.2021 |
6 | ಗೋಧಿ (ಮಳೆ ಆಶ್ರಿತ) | 80 | 29000 | 1.50 | 435 | 174 | 31.12.2021 |
7 | ಕಡಲೆ (ನೀರಾವರಿ) | 90 | 32000 | 1.50 | 480 | 192 | 16.12.2021 |
8 | ಕಡಲೆ (ಮಳೆ ಆಶ್ರಿತ) | 80 | 29000 | 1.50 | 435 | 174 | 30.11.2021 |
9 | ಸೂರ್ಯಕಾಂತಿ (ನೀರಾವರಿ) | 90 | 42000 | 1.50 | 630 | 252 | 30.11.2021 |
10 | ಸೂರ್ಯಕಾಂತಿ (ಮಳೆ ಆಶ್ರಿತ) | 80 | 35000 | 1.50 | 525 | 210 | 30.11.2021 |
11 | ಕುಸುಮೆ (ಮಳೆ ಆಶ್ರಿತ) | 80 | 26000 | 1.50 | 390 | 156 | 15.11.2021 |
ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ.
ರೈತ ಭಾಂದವರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು / ಸಹಾಯವಾಣಿ ಸಂಖ್ಯೆ 1800-200-5142 / 1800-200-4030 ಕರೆ ಮಾಡಿ ಮಾಹಿತಿ ನೀಡುವುದು.
ಮೂಲ: ಕೃಷಿ ಇಲಾಖೆ