2020-21ನೇ ಸಾಲಿನ ಬೆಳೆ ವಿಮೆ ಹಣ ಜಮೆಯ ಸ್ಟೇಟಸ್ ಇಲ್ಲೇ ನೋಡಿ

Written by By: janajagran

Updated on:

how to check crop insurance status ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ 2020-21ನೇ ಸಾಲಿನ ಮುಂಗಾರಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ರೈತರ ಖಾತೆಗೂ ಜಮೆಯಾಗಿದೆ. ಫಸಲ್ ಬಿಮಾ ಯೋಜನೆಯ ಹಣ ಜಮೆಯಾಗಿರುವ ಸ್ಟೇಟಸ್ ನೋಡಲು ರೈತರು ಈಗ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಕ್ಷಣಾರ್ಧದಲ್ಲಿ ನೋಡಬಹುದು.

ಹೌದು, ನಿಮ್ಮ ಮೊಬೈಲ್ ನಂಬರ್, ಅಥವಾ ಆಧಾರ್ ನಂಬರ್ ನಮೂದಿಸಿದರೆ ಸಾಕು. ಯಾವ ಖಾತೆಗೆ ಎಷ್ಟು ಹಣ ಜಮೆಯಾಗಿದೆ, ಯಾವ ಬೆಳೆಗೆ ಯಾವ ದಿನಾಂಕದಂದು ಜಮೆಯಾಗಿದೆ ಎಂಬ ಸ್ಟೇಟಸ್ ನ್ನು ಪರಿಶೀಲಿಸಬಹುದು.

how to check crop insurance status ಬೆಳೆ ವಿಮೆ ಸ್ಟೇಟಸ್

ಚೆಕ್ ಮಾಡಲು

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಋತುವಿನ ವರ್ಷ ಖಾರಿಫ್ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ  ಬೆಳೆ ವಿಮೆಯ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೆಳಗಡೆ ಫಾರ್ಮರ್ಸ್ ಕಾಲಂನಲ್ಲಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಂಡರೆ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಜಮೆಯಾಗಿರುವ ಹಣದ ಸ್ಟೇಟಸ್ ಓಪನ್ ಆಗುತ್ತದೆ.

ಇಲ್ಲಿ ಪ್ರೊಪೋಸಲ್ ಸಂಖ್ಯೆ, ಮೊಬೈಲ್ ನಂಬರ್, ಆಧಾರ್ ನಂಬರ್, ಹೆಸರು, ವಿಮೆಯ ಸ್ಟೇಟಸ್, ಬ್ಯಾಂಕಿನ ಹೆಸರು, ಬ್ರ್ಯಾಂಚ್ ನೊಂದಿಗೆ ಸರ್ವೆ ನಂಬರ್, ಹಣ ಜಮೆಯಾಗಿರುವ ಸ್ಟೇಟಸ್, ಎಷ್ಟು ಹಣ ಜಮೆಯಾಗಿದೆ. ಮತ್ತು ಯಾವ ದಿನಾಂಕದಂದು ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ : ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಿ.. ಇಲ್ಲಿದೆ ಸಂಪೂರ್ಣ ಮಾಹಿತಿ

ಒಂದು ವೇಳೆ ಹಣ ನಿಮ್ಮ ಖಾತೆಗೆ ಜಮೆಯಾಗಿರದಿದ್ದರೆ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಪ್ಲಿಕೇಷನ್ ಸ್ಟೇಟಸ್ ನೋಡಬಹುದು. ಅಲ್ಲಿ ನೀವು ಇನ್ಸುರೆನ್ಸ್ ಪಾವತಿಸಿದ ದಿನ,  ಬೆಳೆ ವಿಮೆಯ ಅರ್ಜಿ ಬ್ಯಾಂಕಿನಿಂದ ಅಪ್ರೂವ್ ಆಗಿ ವಿಮಾ ಕಂಪನಿಗೆ ಸಲ್ಲಿಸಿದ ದಿನಾಂಕ,  ಬೆಳೆ ವಿಮೆ ಬಿಡುಗಡೆಯಾಗಿದೆಯೋ ಇಲ್ಲವೋ, ಬ್ಯಾಂಕ್ ಮ್ಯಾನೇಜರ್ ಸಹಿ ಮಾಡಿದ್ದಾರೋ ಇಲ್ಲವೋ ಎಂಬ ಮಾಹಿತಿಯು ಕಾಣುತ್ತದೆ.  ವೀವ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ  ಬೆಳೆ ವಿಮೆಯ ವರ್ಷ. ಜಿಲ್ಲೆ, ಬೆಳೆ, ಹೆಸರು,ಜಾತಿ, ಊರು, ಮೊಬೈಲ್ ನಂಬರ್ ಸರ್ವೆ ನಂಬರ್ ಮಾಹಿತಿ, ಬೆಳೆ ವಿಮೆಯ ವಿವರದ ಮಾಹಿತಿ ಪರಿಶೀಲಿಸಬಹುದು.

ಇವೆಲ್ಲಾ ಯಾವ ಮಾಹಿತಿಯೂ ಕಾಣದಿದ್ದರೆ ನೀವು ವಿಮೆ ಹಣ ಪಾವತಿಸಿದ್ದರೆ ತಾವು ಯಾವ ವಿಮೆ ಕಂಪನಿಗೆ ಹಣ ಪಾವತಿಸಿದ್ದೀರೋ ಅವರಿಗೆ ಸಂಪರ್ಕಿಸಬಹುದು.

Leave a Comment