ಈ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ ಹಣ ಜಮೆ

Written by Ramlinganna

Updated on:

Pm kisan 12th installment ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಸಂತಸದ ಸುದ್ದಿ. ಹೌದು, ಪಿಎಂ ಕಿಸಾನ್ ಯೋಜನೆಯ 12ನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗೆ ಅಕ್ಟೋಬರ್ 17 ರಂದು ಬೆಳಗ್ಗೆ11 ಗಂಟೆಗೆ ಹಣ ಜಮೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ನಡೆಯುವ ಐಎಎಸ್ಎ ಪೂಸಾ ಮೇಳದಲ್ಲಿ 12ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಿಎಂ ಕಿಸಾನ್ ಯೋಜನೆಯ ಹಣ ಈ ಸಲ ನೋಂದಣಿ ಮಾಡಿಸಿದ ಎಲ್ಲಾ ರೈತರಿಗೆ ಜಮೆಯಾಗುವುದಿಲ್ಲ. ನೋಂದಣಿ ಮಾಡಿಸಿದ ರೈತರಲ್ಲಿ ಕೆಲವು ರೈತರಿಗಷ್ಟೇ ಹಣ ಜಮೆಯಾಗಲಿದೆ. ಹಾಗಾದರೆ ಯಾವ ರೈತರಿಗೆ ಬರುತ್ತದೆ ಯಾವ ರೈತರಿಗೆ ಬರುವುದಿಲ್ಲ ಎಂಬ ಸಂಶಯ ನಿಮಲ್ಲಿ ಬರುತ್ತಿದ್ದರೆ ಆ ಸಂಶಯಕ್ಕೆ ಇಲ್ಲಿದೆ ಉತ್ತರ.

Pm kisan 12th installment ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ ಈ ಮಾಹಿತಿ ಇದ್ದರೆ ಮಾತ್ರ ಹಣ ಜಮೆ ಸಾಧ್ಯತೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿವೆ ಎಂಬ ಮಾಹಿತಿ ಕಾಣುತ್ತದೆ. ನೀವು ಯೋಜನೆಯ ಆರಂಭದಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಂಡಿದ್ದರೆ 12ನೇ ಕಂತಿನ ಹಣ ನಿಮಗೆ ಜಮೆಯಾಗಲಿದೆ.

ನೀವು ಒಂದು ವೇಳೆ ತಡವಾಗಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದರೆ ಯಾವಾಗ ನೋಂದಣಿ ಮಾಡಿಸಿಕೊಂಡಿದ್ದೀರಿ ಎಂಬ  ಆಧಾರದ ಮೇಲೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಲಿದೆ. ನೀವು ಯಾವಾಗ ನೋಂದಣಿ ಮಾಡಿಸಿದ್ದರೀ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ. ಆದರೆ ಈ ಅಂದರೆ 12ನೇ ಕಂತಿನ ಹಣ ನಿಮಗೆ ಜಮೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಸ್ಟೇಟಸ್ ಪೇಜ್ ನಲ್ಲಿ ನಿಮ್ಮ ಅಕೌಂಟ್ ಆ್ಯಕ್ಟಿವ್ ಇದೆಯೇ? ಚೆಕ್ ಮಾಡಿಕೊಳ್ಳಬೇಕು. ಆಕ್ಟಿವ್ ಇದ್ದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ. ಇಕೆವೈಸಿ ಪ್ರಕ್ರಿಯೆ ಸಕ್ಸೆಸ್ ಆಗಿದೆಯೋ ಇಲ್ಲವೋ ಎಂಬದನ್ನು ಚೆಕ್ ಮಾಡಿಕೊಳ್ಳಬೇಕು. ಇದಾದ ಮೇಲೆ  ನಿಮ್ಮ ಈಗಿನ ಕಂತು ಜಮೆಯಾಗುವ ಕಾಲಂನಲ್ಲಿ Rft signed ಅಥವಾ waiting for state approval ಎಂಬ ಮೆಸೇಜ್ ಕಂಡರೆ ಮಾತ್ರ ಹಣ ಜಮೆಯಾಗುವ ಸಾಧ್ಯತೆಯಿದೆ.

ಇನ್ನೂ ಮುಂದೆ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿರುವುದರಿಂದ ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನ ನೋಂದಣಿಮಾಡಿಸಿಕೊಂಡಿದ್ದರೆ ಅಂತಹ ರೈತರಿಗೆ ಇನ್ನೂ ಮುಂದೆ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ.

ಇದನ್ನೂ ಓದಿಜಾಬ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಯೋಜನೆಯ ನಿಯಮದಂತೆ ನಿಜವಾದ ಫಲಾನುಭವಿಗಳಿಗೆ ಲಾಭ ತಲುಪಿಸುವುದಕ್ಕಾಗಿ ಕೇಂದ್ರ ಸರ್ಕಾರವು ಇಕೆವೈಸಿ ಕಡ್ಡಾಯಗೊಳಿಸಿತ್ತು. ಈ ಪ್ರಕ್ರಿಯೆ ಈಗ ಮುಗಿದಿದ್ದರಿಂದ ನಿಜವಾದ ಫಲಾನುಭವಿಗಳಿಗೆ ಮಾತ್ರ ಜಮೆ ಮಾಡಲಾಗುವುದು.

ಪಿಎಂ ಕಿಸಾನ್ ಜಮೆಯ ಕುರಿತಂತೆ ಈ ನಂಬರಿಗೆ ಕರೆ ಮಾಡಿ

ಪಿಎಂ ಕಿಸಾನ್ ಯೋಜನೆಯ ಜಮೆ ಕುರಿತಂತೆ ಅಂದರೆ ಸ್ಟೇಟಸ್ ನಲ್ಲಿ ಏನಾದರೂ ಮಾಹಿತಿ ಕೇಳಲು ಬಯಸಿದ್ದರೆ ಸಹಾಯವಾಣಿಗೆ ಕರೆ ಮಾಡಬಹುದು. ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ 155261 ಅಥವಾ 1800115526 ಟಾಲ್ ಫ್ರೀ ನಂಬರ್ಹಾಗೂ 011 23381092 ಗೆ ಸಂಪರ್ಕಿಸಬಹುದು.

Leave a Comment