ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೋ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

ರೈತರು, ಕಾರ್ಮಿಕರು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಮಾಡಿಸಿದವರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಜಾಬ್ ಕಾರ್ಡ್ ನಲ್ಲಿ ಯಾರ ಯಾರ ಹೆಸರಿದೆ? ಹೆಸರು ಸರಿಯಾಗಿದೆಯೋ ಇಲ್ಲವೋ ಹಾಗೂ ಪ್ರಸಕ್ತ ವರ್ಷ ಅಂದರೆ 2022-23 ನೇ ಸಾಲಿನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ನಿಮ್ಮ ಹೆಸರಿನಲ್ಲಿ ಜಾಬ್ ಕಾರ್ಡ್ ಮಾಡಿಸಿ ಇನ್ನೊಬ್ಬರು ದುರುಪಯೋಗ ಮಾಡಿಸಿಕೊಂಡಿದ್ದರೆ ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿ ಗುರುತಿಸಬಹುದು. ಚೆಕ್ ಮಾಡುವದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನರೇಗಾ ಯೋಜನೆಯಡಿ ನೋಂದಾಯಿಸಿದವರು ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

ರೈತರು, ಕಾರ್ಮಿಕರು ಜಾಬ್ ಕಾರ್ಡ್ ಗಾಗಿ ನೋಂದಾಯಿಸಿದವರು ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://nrega.nic.in/netnrega/HomeGP.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ Generate Reports ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ KARNATAKA ಮೇಲೆ ಕ್ಲಿಕ್ ಮಾಡಬೇಕು.ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಥವಾ ಈ

https://nregastrep.nic.in/netnrega/loginframegp.aspx?salogin=Y&state_code=15

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಿಪೋರ್ಟ್ ಕೆಳಗಡೆ ಕರ್ನಾಟಕ ರಾಜ್ಯ ಕಾಣುತ್ತದೆ. ಅದರ ಕೆಳಗಡೆ   Financial Year ಮುಂದುಗಡೆ 2022-23 ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ಬ್ಲಾಕ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Proceed ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಗ್ರಾಮದ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮಾಡಿದವರ ಪಟ್ಟಿ ಕಾಣುತ್ತದೆ.

ಅಲ್ಲಿ ಜಾಬ್ ಕಾರ್ಡ್ ಮಾಡಿದವರ ಹೆಸರು ತಂದೆಯ ಹೆಸರು ಇರುತ್ತದೆ. ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ನಿಮ್ಮ ಹೆಸರು ಇದ್ದರೆ ನಿಮ್ಮ ಹೆಸರು, ತಂದೆಯ ಹೆಸರು, ಪತ್ನಿ ಗಂಡನ ಹೆಸರು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಒಂದು ವೇಳೆ ಹೆಸರು, ವಯಸ್ಸು ತಪ್ಪಾಗಿದ್ದರೆ ಅದನ್ನು ಸರಿ ಮಾಡಿಸಿಕೊಳ್ಳಬಹುದು. ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಇದು ಮಹತ್ವದ ಮಾಹಿತಿ ನೀಡುತ್ತದೆ. ಜಾಬ್ ಕಾರ್ಡ್ ಇಲ್ಲದವರ ಹೆಸರಿಗೆ ಜಾಬ್ ಕಾರ್ಡ್ ಇದ್ದರೆ ಅದು ನಿಮ್ಮ ಕೈ ಸೇರದಿದ್ದಲೆ ನಿಮ್ಮ ಪಂಚಾಯತಿನಲ್ಲಿ ವಿಚಾರಿಸಿ ಜಾಬ್ ಕಾರ್ಡ್ ಪಡೆದುಕೊಳ್ಳಬಹುದು. ಜಾಬ್ ಕಾರ್ಡ್ ಮಾಡಿಸಿದವರು ಜಾಬ್ ಕಾರ್ಡ್ ಪಡೆದಿರುವುದಿಲ್ಲ. ಅಂತಹವರು ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ನಿಮ್ಮಜಾಬ್ ಕಾರ್ಡ್ ಪಡೆದುಕೊಳ್ಳಬಹುದು.

ಜಾಬ್ ಕಾರ್ಡ್ ಪಟ್ಟಿಯಲ್ಲಿ ಊರು, ನೋಂದಣಿ ಸಂಖ್ಯೆ, ಕುಟುಂಬದ ಮುಖ್ಯಸ್ಥರ ಹೆಸರು, ಅರ್ಜಿದಾರರು ಹೆಸರು, ವಯಸ್ಸು, ಮನೆ ವಿಳಾಸ ಹಾಗೂ ಆಧಾರ್ ಸಂಖ್ಯೆಯ ಮಾಹಿತಿ ಇರುತ್ತದೆ.

ಮನರೇಗಾ ಯೋಜನೆಯ ಮಾನದಂಡಗಳು

ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು. ಅರ್ಜಿದಾರರು ಅರ್ಜಿ ಸಲ್ಲಿಸುವ ಸಮಯದಲ್ಲಿ 18 ವರ್ಷಗಳನ್ನು ಪೂರ್ಣಗೊಳಿಸಬೇಕು. ಅರ್ಜಿದಾರರು ಕೌಶಲ್ಯರಹಿತ ಕಾರ್ಮಿಕರ ವಿತರಣೆಗೆ ಸಿದ್ದರಾಗಿರಬೇಕು. ಅರ್ಜಿದಾರರು ಸ್ಥಳೀಯರಾಗಿರಬೇಕು. ಜಾಬ್ ಕಾರ್ಡ್ ಪಡೆದವರಿಗೆ ವರ್ಷಕ್ಕೆ 100 ದಿನಗಳ ಖಾತ್ರಿಯ ಉದ್ಯೋಗ ನೀಡಲಾಗುವುದು. ಉದ್ಯೋಗಕ್ಕೆ ನೋಂದಣಿ ಮಾಡಿಸಿದ ದಿನಾಂಕದ 15 ದಿನಗಳ ಒಳಗೆ ನೋಂದಾಯಿತರಿಗೆ ಕೆಲಸ ನೀಡಲಾಗುವುದು

ಜಾಬ್ ಕಾರ್ಡ್ ಇರುವವರಿಗೆ ಪ್ತತಿ ದಿನಕ್ಕೆ 309 ರೂಪಾಯಿ ನೀಡಲಾಗುವುದು. ಒಂದು ವರ್ಷದಲ್ಲಿ ಪ್ರತಿ ಜಾಬ್ ಕಾರ್ಡ್ ಸದಸ್ಯರಿಗೆ 100 ದಿನಗಳ ವರೆಗೆ ಕಾಲ ಕೆಲಸ ನೀಡಲಾಗುವುದು. ಕುಟುಂಬದ ಪತಿ ಪತ್ನಿ ಹಾಗೂ ಮಕ್ಕಳು ಸಹ ಜಾಬ್ ಕಾರ್ಡ್ ಪಡೆಯಬಹುದು.

Leave a comment