ಜನವರಿ 1 ರಂದು ಪಿಎಂ ಕಿಸಾನ್ 10ಕಂತಿನ ಹಣ ಬಿಡುಗಡೆ

Written by By: janajagran

Updated on:

PM Kisan scheme date announced ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಹೊಸ ವರ್ಷಕ್ಕೆ 2022 ರ ಜನವರಿ 1 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಕಳೆದ ವರ್ಷ ಡಿಸೆಂಬರಿ 25 ಕ್ಕೆ 7ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆಯಾಗಿತ್ತು.  10ನೇ ಕಂತಿನ ಹಣ ಡಿಸೆಂಬರ್ 25 ರ ಬದಲಾಗಿ ಜನವರಿ 1 ರಂದು ಬಿಡುಗಡೆಯಾಗಲಿದೆ.

PM Kisan scheme date announced ಪಿಎಂ ಕಿಸಾನ್ ಯೋಜನೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?

ರೈತರು ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಪಟ್ಟಿನಲ್ಲಿ ಹೆಸರಿರುವುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ರೈತರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಚೆಕ್ ಮಾಡಿಕೊಳ್ಳಬಹುದು.

ಹೌದು ರೈತರು ಈ https://pmkisan.gov.in/Rpt_BeneficiaryStatus_pub.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ ಸಬ್ ಡಿಸ್ಟ್ರಿಕ್ ನಲ್ಲಿ ತಾಲೂಕು, ಬ್ಲಾಕ್ ನಲ್ಲಿ ತಾಲೂಕು, ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಗ್ರಾಮದ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿಕೊಂಡು ಕೆಳಗಡೆ ನೀಡಿರುವ ಮುಂದಿನ ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡುತ್ತಾ ಹೋಗಬೇಕು. ಅಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಬಹುದು. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಗ್ರಾಮ ಇರುತ್ತದೆ.

ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ? How to check pm kisan status

ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಬಹುದು. ಇದರಿಂದಾಗಿ ಹಿಂದಿನ ಎಷ್ಟು ಕಂತುಗಳು ನಿಮ್ಮ ಖಾತೆಗೆ ಬಂದಿದೆ ಈಗಿನ ಕಂತಿನ ಸ್ಟೇಟಸ್ ಏನೆಂಬುದರ ಮಾಹಿತಿಯನ್ನು ನೋಡಬಹುದು. ನಿಮ್ಮ ಮೊಬೈಲ್ ನಲ್ಲಿ ಈ https://pmkisan.gov.in/BeneficiaryStatus.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆ ಪೇಜ್ ಓಪನ್ ಆಗುತ್ತದೆ.ಅಲ್ಲಿ ನೀವು ನಿಮ್ಮ ಆಧಾರ್ ನಂಬರ್, ಅಥವಾ ಬ್ಯಾಂಕ್ ಅಕೌಂಟ್ ನಂಬರ್ ಅಥವಾ ಮೊಬೈಲ್ ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ Get Data ಮೇಲೆ ಕ್ಲಿಕ್ ಮಾಡಬೇಕು.. ಅಲ್ಲಿ ನಿಮ್ಮ ಹೆಸರು, ನಿಮ್ಮ ಊರು, ನಿಮ್ಮ ಮೊಬೈಲ್ ನಂಬರ್, ಜಿಲ್ಲೆ ಸೇರಿದಂತೆ ಇಲ್ಲಿಯರೆಗೆ ಎಷ್ಟು ಕಂತುಗಳು ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ. 10ನೇ ಕಂತಿನ ಸ್ಟೇಟಸ್ ಸಹ ನೋಡಬಹುದು.

ಇದನ್ನೂ ಓದಿ: ಮೊಬೈಲ್ ನಲ್ಲಿಯೇ ಕೋವಿಡ್ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment