ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮೊದಲ ಮತ್ತು ಎರಡನೇ ಡೋಸ್ ಪಡೆದವರಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಾಗೂ ಕೆಲವು ಶಾಪಿಂಗ್ ಮಾಲ್ ಗಳಲ್ಲಿ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಇನ್ನೂ ಮುಂದೆ ಕೋವಿಡ್ ಲಸಿಕೆಯು ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಂತೆ ಮಹತ್ವ ಪಡೆದುಕೊಳ್ಳಲಿದೆ. ಈಗಾಗಲೇ ಎಷ್ಟು ಜನ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಬಹುತೇಕ ಜನ ಕೋವಿಡ್ ಸರ್ಟಿಫಿಕೇಟ್ ಪಡೆದುಕೊಂಡಿರುವುದಿಲ್ಲ. ಕೋವಿಡ್ ಪ್ರಮಾಣ ಪತ್ರಕ್ಕಾಗಿ ಈಗ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊದಲ ಮತ್ತು ಎರಡನೇ ಡೋಸ್ ಪಡೆದವರು ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು. ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅಗತ್ಯವಿದ್ದಾಗ ಅದನ್ನು ತೋರಿಸಬಹುದು. ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.
ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ ಕೋವಿಡ್ ಸರ್ಟಿಫಿಕೇಟ್
ಕೋವಿಡ್ ಸರ್ಟಿಫಿಕೇಟ್ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಲು ಈ https://selfregistration.cowin.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಕೋವಿಡ್ ವ್ಯಾಕ್ಸಿನ್ ಪೇಜ್ ಓಪನ್ ಆಗುತ್ತದೆ. ಅಳ್ಲಿ ರೆಜಿಸ್ಟರ್ ದೀ ಸೈನ್ ಇನ್ ವ್ಯಾಕ್ಸಿನೇಷನ್ ಕೆಳಗಡೆ ಮೊಬೈಲ್ ನಂಬರ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ವೆರಿಫೈ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮ್ಮ ಹೆಸರು, ನಿಮ್ಮ ಜನ್ಮದಿನಾಂಕ ಆಧಾರ್ ಕಾರ್ಡ್ ನಂಬರ್ ಕಾಣಿಸುತ್ತದೆ. ನೀವು ಎಷ್ಟು ಡೋಸ್ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡಿದ್ದೀರಿ ಎಂಬ ಮಾಹಿತಿಯೂ ಕಾಣುತ್ತದೆ.
ಕೋವಿಡ್ ಪ್ರಮಾಣ ಪತ್ರ ಪಡೆಯಲು ಸರ್ಟಿಫಿಕೇಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಡಿಎಫ್ ಫೈನ್ ಓಪನ್ ಆಗುತ್ತದೆ. ಅಲ್ಲಿ ನೀವು ಸೇವ್ ಮಾಡಿಕೊಳ್ಳಬಹುದು. ಓಪನ್ ಮೇಲೆ ಕ್ಲಿಕ್ ಮಾಡಿದರೆ ಪ್ರಮಾಣ ಪತ್ರ ಓಪನ್ ಆಗುತ್ತದೆ. ಓಪನ್ ವಿತ್ ಮೇಲೆ ಕ್ಲಿಕ್ ಮಾಡಿದರೆ ಸರ್ಟಿಫಿಕೇಟ್ ನೋಡಬಹುದು. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಆಧಾರ್ ಕಾರ್ಡ್, ಬೆನಿಫಿಷಿಯರಿ ರೆಫರೆನ್ಸ್ ಐಡಿ ನಂಬರ್, ವ್ಯಾಕ್ಸಿನೇಷನ್ ಸ್ಟೇಟಸ್, ಯಾವ ಲಸಿಕೆ ಪಡೆದಿದ್ದೀರಿ, ಯಾವ ದಿನಾಂಕದಂದು ಎರಡು ಡೋಸ್ ಪಡೆದಿದ್ದೀರಿ ಎಂಬ ಮಾಹಿತಿಯು ಸೇರಿದಂತೆ ಬಾರ್ ಕೋಡ್ ವಳ್ಳ ಪ್ರಮಾಣ ಪತ್ರವನ್ನು ಸೇವ್ ಮಾಡಿಕೊಳ್ಳಬಹುದು.
ಒಂದು ವೇಳೆ ನೀವು ಮೊದಲನೇ ಡೋಸ್ ಪಡೆದಿದ್ದರೆ ಎರಡನೇ ಡೋಸ್ ಯಾವ ದಿನಾಂಕದೊಳಗೆ ಪಡೆದುಕೊಳ್ಳಬೇಕೆಂಬ ಮಾಹಿತಿಯೂ ಇರುತ್ತದೆ. ಅಲ್ಲಿ ನೀಡಿದ ಅವಧಿಯೊಳಗೆ ಎರಡನೇ ಡೋಸ್ ಪಡೆದುಕೊಳ್ಳಬಹುದು.