ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು? ಇಲ್ಲಿದೆ ಮಾಹಿತಿ

Written by Ramlinganna

Updated on:

pay crop insurance for these crops  ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಬೆಳೆಂ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆಯಬಹುದು. ಹಾಗಾದರೆ ಯಾವ ಬೆಳೆಗಳಿಗೆ ಕೊನೆಯ ದಿನಾಂಕ ಯಾವುದು ತಿಳಿದುಕೊಳ್ಳುವುದು ಹೇಗೆ? ಯಾರಿಗೆ ಕೇಳಬೇಕು ಅಂದುಕೊಂಡಿದ್ದೀರಾ? ರೈತರು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು ಹಾಗೂ ಕೊನೆಯ ದಿನಾಂಕ ಯಾವುದು ಎಂಬುದನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

pay crop insurance for these crops  ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಚೆಕ್ ಮಾಡಿ

ರೈತರು ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಹಾಗೂ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಕೇವಲ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ಆ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಕೊನೆಯ ದಿನಾಂಕ ಅಂದರೆ ಬೆಳೆ ವಿಮೆ ಮಾಡಿಸಲು ಇನ್ನು ಎಷ್ಟು ದಿನ ಬಾಕಿಯಿದೆ ಚೆಕ್ ಮಾಡಬಹುದು.

ಉದಾಹರಣೆಗೆ ನೀವು ಬಾಗಲಕೋಟೆ ಜಿಲ್ಲೆಯವರಾಗಿದ್ದರೆ ಜೋಳ, ಅಗಸೆ, ಹುರುಳಿ, ಕುಸುಮೆ ಬೆಳೆಗಳನ್ನು ನವೆಂಬರ್ 15 ರೊಳಗೆ ವಿಮೆ ಮಾಡಿಸಬೇಕಾಗುತ್ತದೆ. ಅದೇ ರೀತಿ ಸೂರ್ಯಕಾಂತಿ, ಗೋಧಿ, ಬೆಳೆಗಳಿಗೆ ವಿಮೆ ಮಾಡಿಸಲು ನವೆಂಬರ್ 30 ಕೊನೆಯ ದಿನವಾಗಿರುತ್ತದೆ. ಅದೇ ರೀತಿ ಮುಸುಕಿನ ಜೋಳ, ಈರುಳ್ಳಿ, ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಬೆಳೆ ವಿಮೆಯು ಜಿಲ್ಲೆಗನುಸಾರವಾಗಿ ಕೊನೆಯ ದಿನಾಂಕ ಹಾಗೂ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕೆಂಬುದು ವ್ಯತ್ಯಾಸವಿರುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಬೆಳೆಗಳಿಗೆ ವಿಮೆ ಮಾಡಿಸುವುದಕ್ಕಾಗುವುದಿಲ್ಲ. ಹಾಗಾಗಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  ಜಿಲ್ಲೆ ಆಯ್ಕೆ ಮಾಡಿಕೊಂಡ ನಂತರವೇ ರೈತರಿಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದು ಗೊತ್ತಾಗುತ್ತದೆ.ಹಾಗಾಗಿ ರೈತರು ಒಮ್ಮೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಹಣ ಎಷ್ಟು ಕಟ್ಟಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ

ಬೆಳೆ ವಿಮೆ ಹಣ ಎಷ್ಟು ಕಟ್ಟಿದರೆ ವಿಮಾ ಸೌಲಭ್ಯ ಎಷ್ಟು ಸಿಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://www.samrakshane.karnataka.gov.in/Premium/Premium_Chart.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ಅಲ್ಲಿರೈತರು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡನಂತರ ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು, ಎಷ್ಟು ಎಕರೆಗೆ ವಿಮೆ ಮಾಡಿಸುತ್ತೀರೋ ಅದನ್ನು ನಮೂದಿಸಿಬೇಕು. ಜಮೀನು ಗುಂಟೆಯಲ್ಲಿದ್ದರೆ ಗುಂಟೆ ನಮೂದಿಸಬೇಕು. ನಂತರ ಶೋ ಪ್ರಿಮಿಯಂ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎಷ್ಟು ವಿಮೆ ಸೌಲಭ್ಯ ಸಿಗುತ್ತದೆ. ಹಾಗೂ ನೀವು ಎಷ್ಟು ವಿಮೆ ಹಣ ಕಟ್ಟಬೇಕೆಂಬ ಮಾಹಿತಿ ಕಾಣುತ್ತದೆ.

ರೈತರೇಕೆ ಬೆಳೆ ವಿಮೆ ಏಕೆ ಮಾಡಿಸಬೇಕು?

ರೈತರೇಕೆ ಬೆಳೆ ವಿಮೆ ಮಾಡಿಸಬೇಕೆಂಬುದು ನಿಮ್ಮಲ್ಲಿ ಪ್ರಶ್ನೆಯಿದ್ದರೆ ಬೆಳೆ ವಿಮೆ ಮಾಡಿಸುವುದರಿಂದ ರೈತರಿಗೆ ಆರ್ಥಿಕ ಸಹಾಯವಾಗಲಿದೆ.  ರೈತರ ಬೆಳೆ ಪ್ರಕೃತಿ ವಿಕೋಪಗಳಾದ ಅತೀವೃಷ್ಟಿ, ಬಿರುಗಾಳಿ, ಬರಗಾಲ, ಪ್ರವಾಹದಿಂದ, ಗುಡುಗು ಸಿಡಿಲಿನಿಂದ ಆಕಸ್ಮಿಕ ಬೆಂಕಿಯಿಂದಾಗಿ ಬೆಳೆ ಹಾಳಾದರೆ ರೈತರಿಗೆ ವಿಮಾ ಸೌಲಭ್ಯ ಸಿಗುತ್ತದೆ. ಹಾಗಾಗಿ ರೈತರು ಬೆಳೆ ವಿಮೆಯ ಸೌಲಭ್ಯ ಪಡೆದುಕೊಳ್ಳಬಹುದು.

Leave a Comment