ಪಂಚಾಯತ್ ಪಂಚತಂತ್ರದಂತೆ ಇಲ್ಲಿ ಗ್ರಾಪಂ ಮಾಹಿತಿ ಚೆಕ್ ಮಾಡಿ

Written by Ramlinganna

Updated on:

Panchayat panchatantra information check here : ಸಾರ್ವಜನಿಕರು ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಸರ್ವ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.ಹೌದು,  ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು,  ಮನೆಯಲ್ಲಿಯೇ ಕುಳಿತು ಗ್ರಾಮ ಪಂಚಾಯತಿಯ ಎಲ್ಲಾ ಮಾಹಿತಿ ಮೊಬೈಲ್ ನಲ್ಲೇಚೆಕ್ ಮಾಡಬಹುದು.  ಇನ್ನೂ ಮುಂದೆ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಮಾಹಿತಿ ಕೇಳಲು ನೀವು ಗ್ರಾಪಂ ಕಚೇರಿಗೆ ಹೋಗಬೇಕಿಲ್ಲ, ಮನೆಯಲ್ಲಾಗಲಿ, ಹೊಲದಲ್ಲಾಗಲಿ ದೇಶದ ಯಾವುದೇ ಮೂಲೆಯಲ್ಲಿದ್ದರೂ ಗ್ರಾಮ ಪಂಚಾಯತಿಗ ಸಂಬಂಧಿಸಿದ ಅಂದರೆ ಚುನಾಯಿತ ಪ್ರತಿನಿಧಿಗಳ ಹೆಸರು, ಅವರು ಮೊಬೈಲ್ ನಂಬರ್, ಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಮನೆ ತೆರಿಗೆ ಹಾಗೂ ನಿಮ್ಮೂರಿನಲ್ಲಿ ನಡೆಯುವ ಕಾಮಗಾರಿಗಳ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Panchayat panchatantra information check here ಗ್ರಾಮ ಪಂಚಾಯತಿಯ ಮಾಹಿತಿ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯತಿಯ ಕಾರ್ಯಕಲಾಪಗಳು, ಮನೆ ತೆರಿಗೆ, ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಮಾಹಿತಿ ಚೆಕ್ ಮಾಡಲು ಈ

https://mahitikanaja.karnataka.gov.in/PTBank/PTElectedRepresentatives?ServiceId=21&Type=TABLE&DepartmentId=2065

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಚುನಾಯಿತ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಪಟ್ಟಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಪಂಚಾಯತ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಚುನಾಯಿತ ಪ್ರತಿನಿಧಿಗಳ ಹೆಸರು, ಮೊಬೈಲ್ ನಂಬರ್ ಹಾಗೂ ಹುದ್ದೆ, ಚುನಾಯಿತ ದಿನಾಂಕ ಹಾಗೂ ಅವರ ಅವಧಿಯ ಮಾಹಿತಿ ಇರುತ್ತದೆ.

ನಿಮ್ಮ ಮನೆಯ ತೆರಿಗೆ ಕಟ್ಟುವುದು ಎಷ್ಟಿದೆ ಚೆಕ್ ಮಾಡುವುದು ಹೇಗೆ?

ಸಾರ್ವಜನಿಕರು ತಮ್ಮ ಮನೆಯ ತೆರಿಗೆ ಎಷ್ಟಿದೆ ಹಾಗೂ ಕಟ್ಟುವುದೆಷ್ಟಿದೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/PTBank/PTDemandCollectionAndBalance?ServiceId=23&Type=TABLE&DepartmentId=2065

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮನೆ ತೆರಿಗೆ ಸಂಗ್ರಹ ಮತ್ತು ಬಾಕಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿಕೊಳ್ಳಬೇಕು. ಇದಾದ ಮೇಲೆ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕು.  ಗ್ರಾಮ ಪಂಚಾಯತಿ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಬಬೇಕು.  ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಊರು, ಮನೆ ಮಾಲಿಕರ ಹೆಸರು, ಮನೆ ಸಂಖ್ಯೆ, ಆಸ್ತಿಸಂಖ್ಯೆ, ಹಣಕಾಸು ವರ್ಷ ಮನೆ ತೆರಿಗೆ ಎಷ್ಟು ಸಂಗ್ರಹ ಮಾಡಲಾಗಿದೆ ಹಾಗೂ ತೆರಿಗೆ ಎಷ್ಟು ಬಾಕಿ ಇದೆ ಎಂಬ ಪಟ್ಟಿ ಕಾಣುತ್ತದೆ.

ಗ್ರಾಮ ಪಂಚಾಯತಿ ಕುರಿತಂತೆ ಮಾಹಿತಿ ನೀಡಲು ಇದಕ್ಕಿಂತ ಮುಂಚಿತವಾಗಿ ಪಂಚಾಯತ್ ಪಂಚತಂತ್ರ ಎಂಬ ತಂತ್ರಾಂಶವಿತ್ತು. ಅದನ್ನು ಅಪಡೇಟ್ ಮಾಡಿ ಪಂಚಾಯತ್ ಪಂಚತಂತ್ರ 2.0 ಎಂದು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಇನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಗಾಗಿ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ಅತೀ ಶೀಘ್ರದಲ್ಲಿ ಸಿಗಲಿದೆ. ಕೆಲವು ಆ್ಯಪ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಪಂಚಾಯತ್ ಪಂಚಮಿತ್ರ 2.0 ನಲ್ಲಿ  ಎಲ್ಲಾ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಗ್ರಾಮ ಪಂಚಾಯತಿಯ ಮಾರ್ಗಸೂಚಿಗಳು ಮತ್ತು ಕೈಪಿಡಿಗಳು ಮಾಹಿತಿಸಿಗುತ್ತದೆ. ಅಲ್ಲಿ ಇಲ್ಲಿಯವರೆಗೆ ಯಾವ ಮಾರ್ಗಸೂಚಿಗಳು ಬಿಡುಗಡೆಯಾಗಿದೆ ಎಂಬ ಪಟ್ಟಿ ಕಾಣುತ್ತದೆ. ನೀವು ನಿಮಗೆ ಬೇಕಾದ ಮಾರ್ಗಸೂಚಿಗಳು, ಅಧಿಸೂಚನೆಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನುಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಅಲ್ಲಿ ಕಾಣುವ ಡೌನ್ಲೋಡ್ ಮಾಡಿ ಪಕ್ಕದಲ್ಲಿ ಕಾಣುವ ಆರ್ಯೋ ಮಾರ್ಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಪಿಡಿಎಪ್ ಫೈಲ್ ನಲ್ಲಿ ಪೇಜ್ ಡೌನ್ಲೋಡ್ ಆಗುತ್ತದೆ.

Leave a Comment