ಟೊಕಿಯೋ ಒಲಂಪಿಕ್ಸ್ ವೇಟ್ ಲಿಫ್ಟಿಂಗ್ ಮಹಿಳೆಯರ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಹೌದು ಜಪಾನ್ ದೇಶದಲ್ಲಿ ನಡೆಯುತ್ತಿರುವ ಟೋಕಿಟೋ ಒಲಿಂಪಿಕ್ಸ್ ನಲ್ಲಿ 49 ಕೆಜಿ ವೆಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಪದಕ ಬಂದಂತಾಯಿತು.

ಮೀರಾಬಾಯಿ ಸಾಧನೆಗಳು

ಮೀರಾಬಾಯಿಯವರು ಆಗಸ್ಟ್ 8 ರಂದು 1994 ರಲ್ಲಿ ಮಣಿಪುರದ ಇಂಫಾಲ್ ನಲ್ಲಿ ಜನಿಸಿದ್ದಾರೆ. 2020 ರ ಏಷ್ಯಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ, 2018 ರಲ್ಲಿ ಗೋಲ್ಡ್ ಕಾಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2017 ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ, 2014 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

2000 ರ ಇಸ್ವಿಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿಯವರುಪ ಕಂಚು ಗೆದ್ದು ಭಾರತಕ್ಕೆ ಮೊದಲ ಪದಕ ಗೆದ್ದಿದ್ದರು. 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ಣಂ ಮಲ್ಲೇಶ್ವರಿಯವರು 110 ಕೆಜಿ ಸೇರಿದಂತೆ ಒಟ್ಟು 240 ಕೆಜಿ ಎತ್ತಿದ್ದರು.  2000 ರ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಪದಕ ಬಂದಿದೆ. ಈ ವರ್ಷ ಚಾನು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಬೆಳ್ಳಿಯ ಪದಕ ಉಡುಗೋರೆ ನೀಡಿದ್ದಾರೆ.

49 ಕೆಜಿ ವೆಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದಿದ್ದರಿಂದ ಅಭಿಮಾನಿಗಳು ಅಭಿನಂದನೆಯ ಮಹಾಪೂರ ಹರಿಸಿದ್ದಾರೆ. ವೆಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮೀರಾಬಾಯಿ, ನನ್ನ ಕನಸು ನನಸಾಯಯಿತು. ಕೋಟ್ಯಂತರ ಭಾರತೀಯರ ಪ್ರಾರ್ಥನೆಗಳು ನನ್ನ ಜತೆಗಿದ್ದಿದ್ದರಿಂದಲೇ ಇಂದು ನಾನು ಪದಕ ಗೆದ್ದಿದ್ದೇನೆ. ಈ ಈ ಪದಕವನ್ನು ಭಾರತ ದೇಶಕ್ಕೆ ಹಾಗೂ ನನಗಾಗಿ ಪ್ರಾರ್ಥಿಸಿದವವರಿಗೆ ಅರ್ಪಿಸುತ್ತೇನೆಂದು ಹೇಳಿದ್ದಾರೆ.  ನನಗೆ ನಿರಂತರವಾಗಿ ಬೆಂಬಲ ನೀಡಿದ ಸರ್ಕಾರ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಷ್ಟೇ ತರಬೇತಿ ನೀಡಿದ ಕೋಚ್ ವಿಜಯ ಶರ್ಮಾ ಹಾಗೂ ಸಹಾಯಕ ಸಿಬ್ಬಂದಿಗೂ ಧನ್ಯವಾದ ಅರ್ಪಿಸಿದ್ದಾರೆ.

2016 ರ ರಿಯೋ ಒಲಿಂಪಿಕ್ಸ್ ನಲ್ಲಿ ನಿರಾಶಯ ಪ್ರದರ್ಶನವಾಗಿತ್ತು. ಆದರೆ ಅವರು ಛಲಬಿಡದೆ ನಿರಂತರವಾಗಿ ಪರಿಶ್ರಮ ಪಟ್ಟಿದ್ದರಿಂದ ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 2018 ರಲ್ಲಿ ಖೇಲ್ ರತ್ನ ಗೌರವಕ್ಕೆ ಭಾಜನರಾಗಿದ್ದ ಮೀರಾಬಾಯಿ ಚಾನು ಇಂದು ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯ 6ನೇ ಅಥ್ಲೀಟ್ ಆಗಿದ್ದಾರೆ.  ಇದಕ್ಕಿಂತ ಮುಂಚಿತವಾಗಿ ರಾಜ್ಯವರ್ಧನ್ ಸಿಂಗ್ ರಾಠೋಡ್, ವಿಯಕುಮಾರ, ಸುಸೀಲ್ ಕುಮಾರ್ ಸಿಂಧೆ, ಪಿ.ವಿ ಸಿಂಧು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

Leave a Reply

Your email address will not be published. Required fields are marked *